ಆಧುನಿಕ ಜೀವನಶೈಲಿಯು (modern lifestyle) ಜನರ ದಿನಚರಿಯನ್ನು ಬದಲಾಯಿಸಿದೆ. ಅದಕ್ಕಾಗಿಯೇ ಇಂದಿನ ಓಟದ ಜೀವನದಲ್ಲಿ ಆರೋಗ್ಯಕರವಾಗಿ ಉಳಿಯುವುದೇ ಒಂದು ಸವಾಲಾಗಿದೆ. ತಪ್ಪು ಆಹಾರ ಸೇವನೆ, ನಿದ್ರಾಹೀನತೆ, ಒತ್ತಡ ಮತ್ತು ವ್ಯಾಯಾಮದಿಂದ ದೂರ ಉಳಿಯುವುದರಿಂದ ಜನರು ಹಗಲಿರುಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ನಾವು ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯವಾಗಿಟ್ಟುಕೊಳ್ಳುವುದು ಮುಖ್ಯ. ಇದಕ್ಕೆ ಸುಲಭವಾದ ಮಾರ್ಗವೆಂದರೆ ಯೋಗ ಮಾಡುವುದು. ವಿವಿಧ ಯೋಗ ಭಂಗಿಗಳು ಅರೋಗ್ಯ ಸುಧಾರಿಸಲು ಸಹಾಯಕ. ಇಂದು ನಾವು ಚೇರ್ ಪೋಸ್ ಯೋಗದ ಪ್ರಯೋಜನಗಳನ್ನು ತಂದಿದ್ದೇವೆ. ಹೌದು, ಇದು ಅನೇಕ ರೋಗಗಳನ್ನು ದೂರವಿಡುವ ಯೋಗವಾಗಿದೆ.
ಕುರ್ಚಿ ಭಂಗಿ ಯೋಗ ಎಂದರೇನು?
ಕುರ್ಚಿಯ ಮೇಲೆ ಕುಳಿತುಕೊಳ್ಳುವ ಕಾಲ್ಪನಿಕ ಭಂಗಿ ಇದು. ಅಂದರೆ ಕುರ್ಚಿ ಇಲ್ಲದೆಯೇ ಇದೆ ಎಂದು ಭಾವಿಸಿ ಕೂರುವಂತೆ ಮಾಡುವ ಯೋಗ. ಇದನ್ನು ಮಾಡುವ ಅವಧಿ 30-60 ಸೆಕೆಂಡುಗಳು. ಈ ಆಸನ ಮಾಡುವುದರಿಂದ ಭುಜಗಳು ಮತ್ತು ಪಕ್ಕೆಲುಬುಗಳಲ್ಲಿ ಹಿಗ್ಗುವಿಕೆ ಉಂಟಾಗುತ್ತದೆ. ಇದು ತೊಡೆಗಳು, ಪಕ್ಕೆಲುಬುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಕುರ್ಚಿ ಭಂಗಿ ಆಸನಗಳನ್ನು ಮಾಡಲು ಸುಲಭ ಮಾರ್ಗ
ಈ ಆಸನವನ್ನು ಬೆಳಗ್ಗೆ ಮಾಡಬೇಕು.
ಮೊದಲು ಸ್ವಚ್ಛವಾದ ಸ್ಥಳದಲ್ಲಿ ಯೋಗ ಚಾಪೆಯನ್ನು ಇರಿಸಿ.
ಈಗ ಸೂರ್ಯ ನಮಸ್ಕಾರದ ಭಂಗಿಯಲ್ಲಿ ನಿಂತುಕೊಳ್ಳಿ.
ನಂತರ ಆಳವಾದ ಉಸಿರನ್ನು ತೆಗೆದುಕೊಳ್ಳಿ.
ನಂತರ ನಿಮ್ಮ ಕೈಗಳನ್ನು ಗಾಳಿಯಲ್ಲಿ ಬೀಸುತ್ತಾ ಮೇಲಕ್ಕೆ ಸರಿಸಿ.
ನಿಧಾನವಾಗಿ ನಿಮ್ಮ ದೇಹವನ್ನು ಆಸನದ ಭಂಗಿಗೆ ತನ್ನಿ.
ಕುರ್ಚಿಯ ಮೇಲೆ ಕುಳಿತಂತೆ.
ಈ ಭಂಗಿಯಲ್ಲಿ ಕೆಲವು ಕ್ಷಣಗಳವರೆಗೆ ಕಾಯಿರಿ.
ನಂತರ ಹಿಂತಿರುಗಿ.
ಇದನ್ನು ಪ್ರತಿದಿನ 30 ರಿಂದ 60 ಸೆಕೆಂಡುಗಳ ಕಾಲ ಮಾಡಿ.
ಕುರ್ಚಿಭಂಗಿಯ ಪ್ರಯೋಜನಗಳು
ಹೀಗೆ ಮಾಡುವುದರಿಂದ ಸೊಂಟ ಬಲ ತುಂಬುತ್ತದೆ. ಸೊಂಟ ನೋವು ಮೊದಲಾದ ಸಮಸ್ಯೆ ದೂರವಾಗಲು ಸಹಾಯ ಮಾಡುತ್ತದೆ. ಸೊಂಟ ಹೆಚ್ಚು ಬಲಗೊಳ್ಳುವುದರಿಂದ ಯಾವುದೇ ಕೆಲಸ ಮಾಡುವಾಗ ಸಮಸ್ಯೆಗಳು ಉಂಟಾಗುವುದಿಲ್ಲ.
ತೊಡೆಗಳು (thighs)ಮತ್ತು ಕಾಲ್ಬೆರಳುಗಳು ಬಲಗೊಳ್ಳುತ್ತವೆ. ನಡೆಯುವಾಗ ಸಮಸ್ಯೆ ಉಂಟಾಗುವುದನ್ನು ಸಹ ತಡೆಯುತ್ತದೆ.
ಇದು ಬೆನ್ನುಮೂಳೆಯನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ. ಬೆನ್ನು ಮೂಳೆ ಬಾಗಿದ್ದರೆ ಅಥವಾ ಬೆನ್ನು ನೋವು (back pain) ಇದ್ದರೆ ಈ ಯೋಗ ಭಂಗಿ ಮಾಡಿ. ಇದರಿಂದ ಬೆನ್ನು ನೋವು ನಿವಾರಣೆಯಾಗುತ್ತದೆ.
ದೇಹದಲ್ಲಿ ತಾಜಾತನ ಮುಂದುವರಿಯುತ್ತದೆ. ಈ ಯೋಗ ಭಂಗಿ ಮಾಡುವುದರಿಂದ ಮನಸು ಫ್ರೆಶ್ ಆಗಿರುತ್ತದೆ. ದಿನವಿಡೀ ದೇಹ ತಾಜಾವಾಗಿರುತ್ತದೆ.
ಕುರ್ಚಿ ಭಂಗಿ ಮಾಡುವುದದರಿಂದ ಹೊಟ್ಟೆಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಮಲಬದ್ಧತೆ, ಅಜೀರ್ಣ ಸಂಭವಿಸುವುದಿಲ್ಲ. ಗ್ಯಾಸ್ ಸಮಸ್ಯೆ ನಿವಾರಣೆ ಮಾಡಲು ಸಹ ಇದು ಸಹಾಯ ಮಾಡುತ್ತದೆ. ಉದರ ಸಂಬಂಧಿ ಎಲ್ಲಾ ಸಮಸ್ಯೆಗಳು ನಿವಾರಣೆ ಮಾಡುತ್ತದೆ. ನಿಮ್ಮ ಅರೋಗ್ಯ ಉತ್ತಮವಾಗಿರಲು ಇದು ಸಹಾಯ ಮಾಡುತ್ತದೆ.