ಎಮ್ಮೆ ಹಾಲಿನಲ್ಲಿ ಕಂಡುಬರುವ ಪೋಷಕಾಂಶಗಳು
ಎಮ್ಮೆ ಹಾಲು ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಅವುಗಳಲ್ಲಿ ಕಂಡುಬರುವ ಪೋಷಕಾಂಶಗಳನ್ನು ನೋಡಿದರೆ 100 ಮಿ.ಲೀ.ನಲ್ಲಿ 237 ಕ್ಯಾಲೋರಿಗಳಿರುತ್ತವೆ. ಇದರಲ್ಲಿ ಅತಿ ಹೆಚ್ಚು ಕ್ಯಾಲ್ಸಿಯಂ (17.3%), ಪ್ರೋಟೀನ್ (7.8%), ವಿಟಮಿನ್ ಎ (4.3%) ಇದೆ. ಇದರಲ್ಲಿ ಪೊಟ್ಯಾಶಿಯಂ ಮತ್ತು ಫಾಸ್ಪರಸ್, ಮೆಗ್ನೀಶಿಯಂ, ಸತುವಿನ ಆಂಟಿ ಆಕ್ಸಿಡೆಂಟ್ಸ್ ಸಮೃದ್ಧವಾಗಿದೆ. ಈ ಎಲ್ಲಾ ಅಂಶಗಳು ಆರೋಗ್ಯಕರ ದೇಹಕ್ಕೆ ಅತ್ಯಗತ್ಯವೆಂದು ಪರಿಗಣಿಸಲಾಗಿದೆ.