ಮಧುಮೇಹ ರೋಗಿಗಳಿಗೆ ಚಿಕನ್ ಬೆಸ್ಟ್ ಅಂತೆ… ಆದ್ರೆ ಹೀಗೆ ತಿನ್ನಿ!

First Published | Aug 5, 2023, 1:35 PM IST

ಮಧುಮೇಹ ರೋಗಿಗಳಿಗೆ ಚಿಕನ್ ಆರೋಗ್ಯಕರವಾಗಿದೆ, ಆದರೆ ಚಿಕನ್ ನ್ನು ನೀವು ಸರಿಯಾದ ರೀತಿಯಲ್ಲಿ ಸೇವಿಸಬೇಕು. ಹಾಗಿದ್ರೆ ಬನ್ನು ಮಧುಮೇಹ ರೋಗಿಗಳು ಚಿಕನ್ ನ್ನು ಯಾವ ರೀತಿ ಸೇವಿಸಬೇಕು ಅನ್ನೋದನ್ನು ತಿಳಿಯೋಣ. 
 

ಬದಲಾಗುತ್ತಿರುವ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ಮಧುಮೇಹವು (Diabetes) ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಆದರೆ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವುದರಿಂದ, ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದರೆ, ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ, ನೀವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು..

ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆಹಾರ ಮತ್ತು ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಹೆಚ್ಚಾಗಿ ಮಧುಮೇಹ ರೋಗಿಗಳಿಗೆ (diabetes patients) ಮಾಂಸಾಹಾರ ತಿನ್ನದಂತೆ ಸೂಚಿಸಲಾಗುತ್ತದೆ. ನೀವು ಮಾಂಸಾಹಾರಿ ಪ್ರಿಯರಾಗಿದ್ದರೆ ಮತ್ತು ನಿಮಗೆ ಮಧುಮೇಹವಿದ್ದರೆ, ಆ ಸಂದರ್ಭದಲ್ಲಿ ಚಿಕನ್ ತಿನ್ನುವುದು ಸುರಕ್ಷಿತವೇ ಅಥವಾ ಇಲ್ಲವೇ ಎಂಬ ಬಗ್ಗೆ ಗೊಂದಲ ಇದ್ದೇ ಇರುತ್ತೆ. ಆದರೆ ಚಿಕನ್ ತಿನ್ನೋದು ಡಯಾಬಿಟೀಸ್ ರೋಗಿಗಳಿಗೆ ಉತ್ತಮವಾಗಿದೆ.
 

Tap to resize

ಚಿಕನ್ ತೆಳುವಾದ ಪ್ರೋಟೀನ್ (protein) ಹೊಂದಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ನಿಮ್ಮ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳಿಗೆ ಚಿಕನ್ ಅನ್ನು ವಿಭಿನ್ನವಾಗಿ ಬೇಯಿಸಿ ನೀಡಿದ್ರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ.

ಚಿಕನ್ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ತೂಕ ಇಳಿಸಿಕೊಳ್ಳಲು (weight loss) ಸಹ ಇದು ಸಹಾಯಕವಾಗಿದೆ. ಆದರೆ ಇದು ನೀವು ಕೋಳಿಯನ್ನು ಹೇಗೆ ಬೇಯಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಡಯಾಬಿಟೀಸ್ ರೋಗಿಗಳು ಚಿಕನ್ ಯಾವ ರೀತಿ ತಿನ್ನಬೇಕು ಅನ್ನೋದನ್ನು ನೋಡೋಣ.
 

ಮಧುಮೇಹ ರೋಗಿಗಳಿಗೆ ಚಿಕನ್ ತಯಾರಿಸುವುದು ಹೇಗೆ?: ನೀವು ಮಧುಮೇಹ ಸಮಸ್ಯೆಗಳನ್ನು ಹೊಂದಿದ್ದರೆ, ಪ್ರೋಟೀನ್ ಭರಿತ ಸಲಾಡ್ಗಳನ್ನು ಆಹಾರದಲ್ಲಿ ಸೇರಿಸಿ. ಚೀಸ್, ಟೋಫು ಅಥವಾ ಬೀನ್ಸ್ ಸಸ್ಯಾಹಾರಿಗಳಿಗೆ ತುಂಬಾ ಪ್ರಯೋಜನಕಾರಿ. ನೀವು ಮಾಂಸಾಹಾರವ ತಿನ್ನಲು ಇಷ್ಟಪಡುತ್ತಿದ್ದರೆ, ಗ್ರಿಲ್ಡ್ ಚಿಕನ್ (grilled chicken) ಸೇವಿಸಬಹುದು ಅಥವಾ ಚಿಕನ್ ಸಲಾಡ್ ತಿನ್ನಬಹುದು. 
 

ಮಧುಮೇಹಿಗಳಿಗೆ ಸಲಾಡ್ಗಳನ್ನು ತಯಾರಿಸುವಾಗ ಮಯೋನೈಸ್ ಮತ್ತು ಕ್ರೀಮ್, ಸೋಯಾ ಸಾಸ್ ಇತ್ಯಾದಿಗಳನ್ನು ಬಳಸಬಾರದು ಎಂಬುದನ್ನು ನೆನಪಿನಲ್ಲಿಡಿ. ನೀವು ಚಿಕನ್ ಸಲಾಡ್ ನಲ್ಲಿ ಆಲಿವ್ ಎಣ್ಣೆಯನ್ನು ಬಳಸಬಹುದು, ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ.
 

ಚಿಕನ್ ಕರಿ ಮಧುಮೇಹಿಗಳಿಗೆ ಅನಾರೋಗ್ಯಕರವೇ?: ಚಿಕನ್ ಕರಿಯಲ್ಲಿ (chicken curry) ನೀವು ಹೆಚ್ಚು ಎಣ್ಣೆ, ಬೆಣ್ಣೆ ಅಥವಾ ಕ್ರೀಮ್ ಬಳಸಿದರೆ, ಇವು ಆರೋಗ್ಯಕ್ಕೆ ಹಾನಿಕಾರಕ. ಚಿಕನ್ ಕರಿ ತಯಾರಿಸುವಾಗ ಈ ವಸ್ತುಗಳನ್ನು ಅತಿಯಾಗಿ ಬಳಸಬೇಡಿ. ಇವುಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ ಸೇವಿಸಿದ್ರೆ ಉತ್ತಮ. 
 

ಮನೆಯಲ್ಲಿ ತಯಾರಿಸಿದ ಚಿಕನ್ ರ್ಯಾಪ್ ಗಳನ್ನು ತಿನ್ನಿ: ಗ್ರಿಲ್ ಮಾಡಿದ ಚಿಕನ್ ಮತ್ತು ತರಕಾರಿಗಳನ್ನು ಒಟ್ಟಿಗೆ ಬೆರೆಸಿ ಅನೇಕ ವಿಭಿನ್ನ ಲೇಯರ್ ಮಾಡಬಹುದು. ನೀವು ಗೋಧಿ ಹಿಟ್ಟು ಅಥವಾ ರಾಗಿ ಹಿಟ್ಟಿನಿಂದ ತಯಾರಿಸಿದ ರೊಟ್ಟಿಗಳು ಅಥವಾ ಪರೋಟಗಳನ್ನು ರ್ಯಾಪ್ ಗಾಗಿ ತಯಾರಿಸಬಹುದು. ರುಚಿಕರವಾದ ಚಿಕನ್ ಸ್ಟಫಿಂಗ್ ಅನ್ನು ರೋಲ್ ಗಳಲ್ಲಿ ಮಾಡಿ. ಇದನ್ನು ಪೌಷ್ಟಿಕವಾಗಿಸಲು, ಗ್ರಿಲ್ಡ್ ಚಿಕನ್ ಅನ್ನು ಸಲಾಡ್ ಎಲೆಗಳು, ಕ್ಯಾಪ್ಸಿಕಂ, ಈರುಳ್ಳಿ ಮತ್ತು ಇತರ ತರಕಾರಿಗಳೊಂದಿಗೆ ಬೆರೆಸಿ.
 

Latest Videos

click me!