ಅನೋ ಅರ್ಥವಾಗುತ್ತಿಲ್ಲ, ದೇಹದಲ್ಲಿ ಸಮ್‌ಥಿಂಗ್ ರಾಂಗ್ ಅನಿಸಿದರೆ ನೆಗಟಿವ್ ಎನರ್ಜಿಯದ್ದೇ ಕಿತಾಪತಿ!

First Published Aug 4, 2023, 6:06 PM IST

ನಿಮ್ಮ ಸುತ್ತಲೂ ಪತ್ತೆಹಚ್ಚಲು ಸುಲಭವಲ್ಲದ ಕೆಲವು ವಿಷಯಗಳು ನಡೆಯುತ್ತಲೇ ಇರುತ್ತವೆ ಮತ್ತು ಅವು ನಿಮ್ಮ ಜೀವನದಲ್ಲಿ ನಕಾರಾತ್ಮಕ ಬದಲಾವಣೆಗಳನ್ನು ತರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಬಗ್ಗೆ ಯೋಚಿಸಬೇಕು. 
 

ಅನೇಕ ಬಾರಿ ಏನಾಗುತ್ತೆ ಅಂದ್ರೆ ನಮ್ಮ ಸುತ್ತಮುತ್ತಲೂ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗೋದೆ ಇಲ್ಲ. ಅಂತೆಯೇ, ಅನೇಕ ಬಾರಿ ಕೆಲವು ನಕಾರಾತ್ಮಕ ಶಕ್ತಿಗಳು (negative energy) ನಮ್ಮೊಳಗೆ ವಾಸಿಸುತ್ತವೆ, ಅವುಗಳಿಗೆ ಕಾರಣವನ್ನು ಕಂಡುಹಿಡಿಯುವುದು ಕಷ್ಟ. ಇದರಿಂದ ನಮ್ಮ ಜೀವನದಲ್ಲಿ ಕೆಟ್ಟದಾಗುತ್ತಾ ಹೋಗುತ್ತದೆ. 
 

ಯಾವುದೇ ವ್ಯಕ್ತಿಯಲ್ಲಿ ನಕಾರಾತ್ಮಕ ಶಕ್ತಿಯು ಬೇರೆ ಬೇರೆ ರೀತಿಯಲ್ಲಿ ಪ್ರಕಟವಾಗಬಹುದು, ಇದು ಅವನ ಅಭಿವ್ಯಕ್ತಿ, ನಡವಳಿಕೆ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಯೊಳಗೆ ನಕಾರಾತ್ಮಕ ಶಕ್ತಿ ಇದೆಯೇ ಅಥವಾ ಇಲ್ಲವೇ ಎಂದು ನಿಮಗೆ ತಿಳಿಸುವ ಕೆಲವು ಚಿಹ್ನೆಗಳಿವೆ.
 

Latest Videos


ನಮ್ಮ ಬ್ರಹ್ಮಾಂಡ ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳಿಂದ ತುಂಬಿದೆ. ನಾವೆಲ್ಲರೂ ನಮ್ಮ ಮೇಲೆ ಒಳ್ಳೆಯ ಅಥವಾ ಕೆಟ್ಟ ರೀತಿಯಲ್ಲಿ ಪರಿಣಾಮ ಬೀರುವ ಶಕ್ತಿಗಳಿಂದ ಸುತ್ತುವರೆದಿದ್ದೇವೆ. ಕೆಲವು ಜನರ ಶಕ್ತಿ ಎಷ್ಟು ಪ್ರಬಲವಾಗಿದೆಯೆಂದರೆ ಯಾವುದೇ ನಕಾರಾತ್ಮಕ ಶಕ್ತಿ ಅದರ ಮೂಲಕ ಹಾದು ಹೋಗಲು ಸಾಧ್ಯವಿಲ್ಲ, ಆದರೆ ದುರ್ಬಲ ಶಕ್ತಿ ಹೊಂದಿರುವ ಇತರರು ನಕಾರಾತ್ಮಕ ಶಕ್ತಿಗೆ (negative energy) ಬಲಿಯಾಗುತ್ತಾರೆ. ಒಬ್ಬ ವ್ಯಕ್ತಿಯಲ್ಲಿ ಕಂಡು ಬರುವ ನಕಾರಾತ್ಮಕ ಶಕ್ತಿಯ ಚಿಹ್ನೆಗಳು ಯಾವುವು ಅನ್ನೋದನ್ನು ತಿಳಿಯೋಣ. 

ನಿರಂತರವಾಗಿ ನಕಾರಾತ್ಮಕತೆಯನ್ನು ಅನುಭವಿಸೋದು
ನಿಮ್ಮೊಳಗೆ ಯಾವಾಗಲೂ ನಕಾರಾತ್ಮಕ ಆಲೋಚನೆಗಳ (negative thinking) ಭಾವನೆ ಇದ್ದರೆ, ಅದು ನಿಮ್ಮೊಳಗಿನ ನಕಾರಾತ್ಮಕ ಶಕ್ತಿಯಿಂದಲೂ ಆಗಿರಬಹುದು. ಇದು ನಿಮ್ಮ ಆಲೋಚನೆಗಳು, ಮಾತನಾಡುವ ವಿಧಾನ ಮತ್ತು ನೀವು ಏನನ್ನಾದರೂ ಅರ್ಥಮಾಡಿಕೊಳ್ಳುವ ವಿಧಾನದಿಂದ ತಿಳಿಯಬಹುದು. ನಿಮ್ಮ ಮನಸ್ಸಿನಲ್ಲಿ ನಿರಂತರ ನಕಾರಾತ್ಮಕ ಆಲೋಚನೆಗಳು, ನಿರಾಶಾವಾದ ಮತ್ತು ಸಾಮಾನ್ಯವಾಗಿ ಜೀವನದ ಬಗ್ಗೆ ನಕಾರಾತ್ಮಕ ಮನೋಭಾವಗಳು ದೇಹದಲ್ಲಿ ನಕಾರಾತ್ಮಕ ಶಕ್ತಿ ಇರೋದನ್ನು ಸೂಚಿಸುತ್ತೆ. 

ಸಣ್ಣ ವಿಷಯಗಳಿಗೆ ಕೋಪಗೊಳ್ಳುವುದು  (easily getting angry) 
ಯಾವುದೇ ಕಾರಣವಿಲ್ಲದೆ ನೀವು ತುಂಬಾ ಕೋಪಗೊಂಡರೆ ಮತ್ತು ಅದನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಅದು ನಕಾರಾತ್ಮಕ ಶಕ್ತಿಯಿಂದ ಆಗಿರಬಹುದು ಎಂದು ನೀವು ತಿಳಿದುಕೊಳ್ಳಬೇಕು. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಕೋಪವನ್ನು ಯಾರ ಮೇಲೂ ಹೊರಹಾಕಬಹುದು. ನಿಮಗೆ ಮಕ್ಕಳ ಮೇಲೆ ಅಥವಾ ಸಂಗಾತಿಯ ಮೇಲೆ ಕೋಪ ಬರಬಹುದು, ಆದರೆ ಅದು ನಿಮ್ಮೊಳಗಿನ ಕೆಟ್ಟ ಶಕ್ತಿಯ ಸಂಕೇತವಾಗಿರಬಹುದು. 
 

ರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಎದ್ದೇಳುವುದು 
ರಾತ್ರಿಯಲ್ಲಿ ನಿಮ್ಮ ನಿದ್ರೆಯಿಂದ ಇದ್ದಕ್ಕಿದ್ದಂತೆ ಎಚ್ಚರವಾದರೆ ಮತ್ತು ನಿಮಗೆ ನಿದ್ರಾಹೀನತೆಯ ಸಮಸ್ಯೆ ಇದ್ದರೆ, ಅದು ನಿಮ್ಮೊಳಗಿನ ನಕಾರಾತ್ಮಕ ಶಕ್ತಿಯಿಂದಾಗಿರಬಹುದು ಎಂದು ಅರ್ಥಮಾಡಿಕೊಳ್ಳಿ. ನೀವು ಸೋಶಿಯಲ್ ಆಗೋದನ್ನು ತಪ್ಪಿಸುವುದು, ಸ್ನೇಹಿತರು ಮತ್ತು ಕುಟುಂಬದಿಂದ ದೂರವಿರುವುದು ಮತ್ತು ಇತರರಿಂದ ನಿಮ್ಮನ್ನು ಪ್ರತ್ಯೇಕಿಸುವುದು ನಿಮ್ಮೊಳಗಿನ ಕೆಟ್ಟ ಶಕ್ತಿಯ ಸಂಕೇತ.
 

ಸಣ್ಣ ಸಣ್ಣ ವಿಷಯಗಳಿಗೆ ಕಿರಿಕಿರಿ ಉಂಟಾದ್ರೆ ತಜ್ಞರ ಸಲಹೆ ಪಡೆಯಿರಿ
ಹಸಿವಿನ ಕೊರತೆ ಮತ್ತು ಸರಿಯಾಗಿ ತಿನ್ನದಿರುವುದು ನಕಾರಾತ್ಮಕ ಶಕ್ತಿಯ ಸಂಕೇತ. ನೀವು ನಿಮ್ಮ ದಿನಚರಿಯನ್ನು ಸರಿಯಾಗಿ ಅನುಸರಿಸದಿದ್ದರೆ ಮತ್ತು ನಿಮಗೆ ಹಸಿವಾಗದಿದ್ದರೆ, ಸರಿಯಾಗಿ ತಿನ್ನದಿದ್ದರೆ ಅದು ನಿಮ್ಮ ದೇಹದಲ್ಲಿ ನಕಾರಾತ್ಮಕ ಶಕ್ತಿಯ ಸಂಕೇತವಾಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ (getting irritate), ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಮತ್ತು ನಿಮ್ಮ ಆರೋಗ್ಯವು ಹದಗೆಡಬಹುದು. ನೀವು ಅಂತಹ ಯಾವುದೇ ಚಿಹ್ನೆಗಳನ್ನು ನೋಡಿದರೆ, ತಕ್ಷಣ ತಜ್ಞರನ್ನು ಭೇಟಿ ನೀಡಿ. 

ಕೆಲಸದ ಬಗ್ಗೆ ಉತ್ಸಾಹದ ಕೊರತೆ 
ನೀವು ಯಾವುದೇ ಕೆಲಸವನ್ನು ಮಾಡಲು ಉತ್ಸಾಹವನ್ನು ಹೊಂದಿಲ್ಲದಿದ್ದರೆ ಮತ್ತು ಒಲ್ಲದ ಮನಸ್ಸಿನಿಂದ ಕೆಲಸವನ್ನು ಮುಂದುವರಿಸಿದರೆ, ಅದು ನಿಮ್ಮೊಳಗಿನ ನಕಾರಾತ್ಮಕ ಶಕ್ತಿಯಿಂದಾಗಿರಬಹುದು. ಇದರೊಂದಿಗೆ, ತಲೆನೋವು, ಆಯಾಸ ಅಥವಾ ಇತರ ದೈಹಿಕ ಸಮಸ್ಯೆಗಳು (physical problem) ಸಹ ಉಂಟಾಗುವ ಸಾಧ್ಯತೆ ಇದೆ. 

ನಿರಂತರ ದೂರು ಹೇಳುವ ಜನರು (complainig about other people)
ಎಲ್ಲದರ ಬಗ್ಗೆ ನಿರಂತರವಾಗಿ ದೂರುವ ಜನರು ಹೆಚ್ಚಾಗಿ ನಕಾರಾತ್ಮಕ ಶಕ್ತಿಯಿಂದ ತುಂಬಿರುತ್ತಾರೆ. ಅವರು ಯಾವಾಗಲೂ ತಮ್ಮ ಕೆಲಸ, ಸಂಬಂಧಗಳು, ಆರೋಗ್ಯ ಅಥವಾ ಮನಸ್ಸಿಗೆ ಬರುವ ಯಾವುದೇ ವಿಷಯದ ಬಗ್ಗೆ ದೂರು ನೀಡುತ್ತಾರೆ. ಜೊತೆಗೆ ನಿರಂತರವಾಗಿ ಇತರರನ್ನು ಟೀಕಿಸುವುದು ಸಹ ನೆಗೆಟಿವ್ ಎನರ್ಜಿ. 

click me!