ಹಲ್ಲಿನ ಆರೋಗ್ಯ
ಸುಂದರ ಮುಖದ ಜೊತೆಗೆ ನಗು ನಿಮ್ಮ ವ್ಯಕ್ತಿತ್ವದ ಮೇಲೆ ಆಳವಾದ ಪ್ರಭಾವ ಬೀರುತ್ತದೆ.ನೀವು ಯಾರನ್ನಾದರೂ ಮೊದಲ ಬಾರಿಗೆ ಭೇಟಿಯಾದರೆ.. ನಿಮ್ಮ ಹಳದಿ ಹಲ್ಲುಗಳು ಅವರಿಗೆ ಕಾಣಿಸಿಕೊಂಡರೆ, ನೀವು ಹಲವು ಬಾರಿ ಮುಜುಗರಕ್ಕೊಳಗಾಗಬೇಕಾಗುತ್ತದೆ. ಆದರೆ, ನೈಸರ್ಗಿಕವಾಗಿಯೇ ಕೆಲವನ್ನು ತಿನ್ನುವುದರಿಂದ ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಬಹುದು ಮತ್ತು ಪಳಪಳ ಹೊಳೆಯುವಂಟೆ ಮಾಡಬಹುದು.
ಹಲ್ಲುಗಳ ಹಳದಿ ತೆಗೆಯಲು ಹಲವರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಕಡಿಮೆ ಸಮಯದಲ್ಲಿ ನಿಮ್ಮ ಹಲ್ಲುಗಳಿಂದ ಹಳದಿ ಪದರವನ್ನು ತೆಗೆದುಹಾಕುವ ಸಲಹೆಗಳನ್ನು ಈಗ ತಿಳಿದುಕೊಳ್ಳೋಣ. ಕೆಲವು ಆಹಾರಗಳನ್ನು ತಿನ್ನುವುದರಿಂದ ನಿಮ್ಮ ಹಲ್ಲುಗಳ ಮೇಲಿನ ಹಳದಿ ಬಣ್ಣದ ಪದರವು ತಾನಾಗಿಯೇ ಹೋಗುತ್ತದೆ. ಇದರಿಂದ ನಿಮ್ಮ ಹಲ್ಲುಗಳು ನೈಸರ್ಗಿಕವಾಗಿ ಮುತ್ತುಗಳಂತೆ ಬಿಳಿಯಾಗಿ ಕಾಣುತ್ತವೆ. ಅದಕ್ಕಾಗಿ ನೀವು ಇವುಗಳನ್ನು ತಿನ್ನಬೇಕು.
ಹಲ್ಲುಗಳು
ಬ್ರೊಕೊಲಿ:
ಆರೋಗ್ಯಕರ ತರಕಾರಿಗಳಲ್ಲಿ ಬ್ರೊಕೊಲಿ ಕೂಡ ಒಂದು. ಇದರಲ್ಲಿ ಫೈಬರ್ ಹೇರಳವಾಗಿ ಸಿಗುತ್ತದೆ. ಬ್ರೊಕೊಲಿಯಲ್ಲಿರುವ ಗುಣಗಳು ಉರಿಯೂತವನ್ನು ಕಡಿಮೆ ಮಾಡುತ್ತವೆ. ಅಲ್ಲದೆ, ಹಲ್ಲುಗಳ ಹಳದಿ ತೆಗೆಯಲು ಸಹಾಯ ಮಾಡುತ್ತವೆ.
ಹಾಲಿನ ಉತ್ಪನ್ನಗಳು:
ಹಲ್ಲುಗಳನ್ನು ಆರೋಗ್ಯವಾಗಿಡಲು ಕ್ಯಾಲ್ಸಿಯಂ ತುಂಬಾ ಮುಖ್ಯ. ಆದ್ದರಿಂದ ಕ್ಯಾಲ್ಸಿಯಂ ಹೆಚ್ಚಾಗಿರುವ ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ ಹಲ್ಲುಗಳ ಬಿಳುಪನ್ನು ಕಾಪಾಡುತ್ತದೆ. ಹಲ್ಲುಗಳ ಹಳದಿ ತೆಗೆಯಲು, ನೀವು ಹಾಲು, ಮೊಸರು, ಚೀಸ್ ತಿನ್ನಬೇಕು. ಇವುಗಳಲ್ಲಿರುವ ಪೋಷಕಾಂಶಗಳು ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.
ಹಲ್ಲುಗಳಿಗೆ ಆಹಾರ
ಸ್ಟ್ರಾಬೆರಿ:
ನಿಮ್ಮ ಹಲ್ಲುಗಳು ಮುತ್ತುಗಳಂತೆ ಬಿಳಿಯಾಗಿ ಮಿಂಚಬೇಕೆಂದರೆ ಸ್ಟ್ರಾಬೆರಿಗಳನ್ನು ತಿನ್ನಬೇಕು. ಇದರಲ್ಲಿರುವ ಕಿಣ್ವಗಳು, ಮಾಲಿಕ್ ಆಮ್ಲವು ಹಲ್ಲುಗಳ ಹಳದಿ ಪದರವನ್ನು ತೆಗೆದುಹಾಕುತ್ತದೆ. ಇದರಿಂದ ನಿಮ್ಮ ಹಲ್ಲುಗಳು ಬಿಳಿಯಾಗುತ್ತವೆ.
ಸಿಟ್ರಸ್ ಹಣ್ಣುಗಳು:
ಹಲ್ಲುಗಳ ಬಿಳುಪನ್ನು ಕಾಪಾಡುವಲ್ಲಿ ಸಿಟ್ರಸ್ ಹಣ್ಣುಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಇದಕ್ಕಾಗಿ ನೀವು ಕಿತ್ತಳೆ ಜೊತೆಗೆ ಈ ಜಾತಿಗೆ ಸೇರಿದ ಹಣ್ಣುಗಳನ್ನು ಸೇವಿಸಬಹುದು. ಇವು ಬಾಯಿಯ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅಲ್ಲದೆ, ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಹಲ್ಲುಗಳು
ಸೇಬು:
ಬಾಯಿ ಸ್ವಚ್ಛಗೊಳಿಸಲು ತುಂಬಾ ಪ್ರಯೋಜನಕಾರಿ ಹಣ್ಣು ಎಂದು ಪರಿಗಣಿಸಲಾಗಿದೆ. ಇದು ನಮ್ಮ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಹಲ್ಲುಗಳು ಮತ್ತು ಒಸಡುಗಳನ್ನು ಬಲಪಡಿಸಲು ಕೆಲಸ ಮಾಡುತ್ತದೆ. ಇದರೊಂದಿಗೆ ಹಲ್ಲುಗಳಲ್ಲಿ ಸಿಲುಕಿರುವ ಆಹಾರ ಕಣಗಳನ್ನು ತೆಗೆದುಹಾಕುತ್ತದೆ.
ಕೆಂಪು ಕ್ಯಾಪ್ಸಿಕಂ:
ಕೆಂಪು ಕ್ಯಾಪ್ಸಿಕಂನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದನ್ನು ಸೇವಿಸುವುದರಿಂದ ಹಲ್ಲುಗಳು ಮತ್ತು ಒಸಡುಗಳು ಬಲಗೊಳ್ಳುತ್ತವೆ. ಅಲ್ಲದೆ, ಬಾಯಿ ವಾಸನೆ ದೂರವಾಗುತ್ತದೆ. ಹಲ್ಲುಗಳ ಹಳದಿ ಬಣ್ಣ ಕೂಡ ಹೋಗುತ್ತದೆ. ಇದರಿಂದ ನಿಮ್ಮ ಹಲ್ಲುಗಳು ಬಿಳಿಯಾಗಿ ಮಿಂಚುತ್ತವೆ.