ಬ್ರೈನ್ ಸರಿಯಾಗಿರ್ಬೇಕಾ? ಹಾಗಿದ್ರೆ ಹೀಗ್ ತಿನ್ನಿ, ಇಲ್ಲಾಂದ್ರೆ ಹುಚ್ಚರಾಗ್ಬೋದು

First Published | Aug 1, 2023, 6:20 PM IST

ಮೆದುಳು ಒಂದು ನಿಗೂಢ ಅಂಗ. ಸಂಶೋಧಕರು ಇನ್ನೂ ಅದನ್ನ ಉತ್ತಮವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮೆದುಳು ಆರೋಗ್ಯವಾಗಿದ್ದರೆ ಮಾತ್ರ ಮನುಷ್ಯನು ನೆಮ್ಮದಿಯಾಗಿ ಇರಲು ಸಾಧ್ಯ. ಆದರೆ ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸಲು ನೀವು ಈ ಕೆಲಸಗಳನ್ನು ಮಾಡ್ಲೇಬೇಕು. 
 

ಕಲಿಯುತ್ತಲೇ ಇರಿ (learn new things)
ನಿಮ್ಮ ಮೆದುಳು ಆ್ಯಕ್ಟಿವ್ ಆಗಿರಲು ಏನಾದರೊಂದು ಚಟುವಟಿಕೆ ಮಾಡುತ್ತಲೇ ಇರಿ. ಹೊಸ ಹೊಸ ವಿಷಯಗಳನ್ನು ಕಲಿಯಿರಿ. ಇದು ಮೆದುಳಿನ ಉತ್ತಮ ಆರೋಗ್ಯಕ್ಕೆ ಸಹಕಾರಿ. 

ಆರೋಗ್ಯಕರ ಆಹಾರ ಸೇವಿಸಿ (Eat Healthy food)
ಮೆಡಿಟರೇನಿಯನ್ ಆಹಾರ ಸೇವಿಸೋದರಿಂದ ಪಾರ್ಕಿನ್ಸನ್ ಖಾಯಿಲೆ ನಿವಾರಣೆ ಮಾಡಲು ಸಾಧ್ಯ. ಈ ಆಹಾರವು ಮೆದುಳಿಗೆ ಸಹಾಯ ಮಾಡುವುದಲ್ಲದೆ, ರಕ್ತದೊತ್ತಡ (Blood Pressure) ಮತ್ತು ಹೃದಯರಕ್ತನಾಳದ ಕಾಯಿಲೆಯನ್ನು ಕಡಿಮೆ ಮಾಡುತ್ತದೆ.

Tap to resize

ಪುಸ್ತಕ ಓದಿ (Read Books)
ಓದುವುದು ಒಂದು ಸಂಕೀರ್ಣ ಕಾರ್ಯವಾಗಿದ್ದು, ಮೆದುಳಿನ ಅನೇಕ ಭಾಗಗಳು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. ಪುಸ್ತಕ ಓದೋದರಿಂದ ಸ್ಮರಣ ಶಕ್ತಿ ಸುಧಾರಿಸುತ್ತೆ. ಇದರೊಂದಿಗೆ ಮನಸ್ಸಿಗೂ ಆರಾಮ ದೊರೆಯುತ್ತದೆ. 
 

ಸೋಶಿಯಲ್ ಆಗಿರಿ (be social)
ಸೋಶಿಯಲ್ ಆಗಿ ಉಳಿಯುವುದು ಮೆದುಳು ಶಾರ್ಪ್ ಆಗಲು ಸಹಾಯ ಮಾಡುತ್ತದೆ. ನಿಮ್ಮನ್ನು ನಗಿಸುವ, ಮಾನಸಿಕ ನೆಮ್ಮದಿಯನ್ನು ನೀಡುವಂತಹ ಜನರೊಂದಿಗೆ ಸೇರಿ. ಇದರಿಂದ ಮನಸ್ಸು ಹಗುರವಾಗುತ್ತದೆ. 

ಶಾಂತವಾಗಿರಿ (calm)
ಯಾವುದೇ ರೀತಿಯ ಒತ್ತಡವು ಮೆದುಳಿನ ಸಮಸ್ಯೆಯನ್ನು ಮತ್ತಷ್ಟು ಹದಗೆಡಿಸುತ್ತದೆ. ಹಾಗಾಗಿ ದಿನಕ್ಕೆ ಕೇವಲ 15 ನಿಮಿಷಗಳ ಕಾಲ ಧ್ಯಾನ ಮಾಡುವುದನ್ನು ರೂಢಿಸಿ. ಇದರಿಂದ ಮನಸ್ಸು ಶಾಂತವಾಗುತ್ತೆ. 

ಸಾಕಷ್ಟು ನಿದ್ರೆ ಮಾಡಿ (take good sleep)
ನಿಯಮಿತ ನಿದ್ರೆಯ ವೇಳಾಪಟ್ಟಿಯನ್ನು ಕಾಪಾಡಿಕೊಳ್ಳಿ; ಪ್ರತಿದಿನ ಒಂದೇ ಸಮಯದಲ್ಲಿ ಮಲಗಿ, ಬೆಳಗ್ಗೆ ಬೇಗನೆ ಎದ್ದೇಲಿ. ಇದನ್ನು ಇವತ್ತಿನಿಂದಲೇ ರೂಢಿ ಮಾಡಿ. ಇದರಿಂದ ಮೆದುಳಿನ ಆರೋಗ್ಯ ಉತ್ತಮವಾಗಿರುತ್ತೆ. 

ವ್ಯಾಯಾಮ ಮಾಡಿ (exercise)
ತೀವ್ರವಾದ ವ್ಯಾಯಾಮವು ಡೋಪಮೈನ್ ಬಿಡುಗಡೆಗೆ ಸಹಾಯ ಮಾಡುತ್ತೆ, ಇದರಿಂದ ನಿಮ್ಮ ಮೆದುಳಿನ ಕೋಶಗಳ ದಕ್ಷತೆಯನ್ನು ಸುಧಾರಿಸಬಹುದು ಮತ್ತು ಮೆದುಳಿನ ಸಮಸ್ಯೆಗಳನ್ನು ದೂರ ಮಾಡಲು ಸಹಾಯ ಮಾಡುತ್ತೆ. 

ಮೆದುಳಿಗೆ ತಾಲೀಮು ನೀಡಿ (brain exercise)
ಅಂದ್ರೆ ನಿಮ್ಮ ಮೆದುಳಿಗೆ ಕೆಲಸ ನೀಡಬೇಕು. ಸುಡೋಕು, ಪಜಲ್ ಮೊದಲಾದ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿ. ಮನಸ್ಸನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಡುವ ಚಟುವಟಿಕೆಗಳಲ್ಲಿ ಭಾಗಿಯಾಗಿ. 

ಸಂಗೀತ ಕೇಳಿ (listen to music)
ಸಂಗೀತವನ್ನು ಕೇಳುವುದರಿಂದ ಜ್ಞಾಪಕ ಶಕ್ತಿಯನ್ನು ಸುಧಾರಿಸಬಹುದು. ಹಾಡು ಹಾಡುವುದು, ನೃತ್ಯ ಮಾಡುವುದು ಇವೆಲ್ಲವೂ ಮನಸ್ಸು ಅಥವಾ ಮೆದುಳು ಆರೋಗ್ಯದಿಂದ ಇರಲು ಸಹಾಯ ಮಾಡುತ್ತೆ. ಹಾಗಾಗಿ ಲಯವಾದ ಹಾಡನ್ನು ಕೇಳಿ. 

ಜೋರಾಗಿ ನಗುವುದು (laugh)
ನಗುವುದು ಮೆದುಳಿನ ವಿವಿಧ ಪ್ರದೇಶಗಳನ್ನು ಉತ್ತೇಜಿಸುತ್ತದೆ. ಕೆಲವು ಅಧ್ಯಯನಗಳು ನಗುವುದು ಅಲ್ಪಾವಧಿಯ ಸ್ಮರಣೆಯನ್ನು ಸುಧಾರಿಸುತ್ತದೆ ಎಂದು ತೋರಿಸುತ್ತದೆ. ಕಾಮಿಡಿ ಫಿಲಂ, ಕಾಮಿಡಿ ಶೋ, ನಾಯಿ, ಬೆಕ್ಕು ಗಳ ತಮಾಷೆ ವಿಡೀಯೋ ನೋಡಿ ನಗೋದು ಮನಸ್ಸಿಗೆ ಒಳ್ಳೆಯದು. 

ಒತ್ತಡ ನಿವಾರಿಸಿ (stress free)
ಮನಸ್ಸು ಒತ್ತಡದಲ್ಲಿದ್ದರೆ, ದೇಹವು ಸಂಪೂರ್ಣವಾಗಿ ಸೊರಗಿ ಹೋಗುತ್ತದೆ. ಯಾಕಂದ್ರೆ ನಾವು ಮಾನಸಿಕವಾಗಿ ಆರೋಗ್ಯದಿಂದ ಇದ್ರೆ ಮಾತ್ರ, ದೈಹಿಕವಾಗಿ ಆರೋಗ್ಯದಿಂದ ಇರಲು ಸಾಧ್ಯ. ಹಾಗಾಗಿ ಒತ್ತಡ ಮುಕ್ತವಾಗಿರಿ. 

Latest Videos

click me!