ಹಿಂದೂ ಧರ್ಮದಲ್ಲಿ ಚಿನ್ನ (gold) ಧರಿಸುವುದು ಬಹಳ ವಿಶೇಷ ಮಹತ್ವವನ್ನು ಹೊಂದಿದೆ. ಇದು ಧಾರ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಬಹಳ ಪ್ರಯೋಜನ ನೀಡುತ್ತೆ ಅನ್ನೋದು ನಿಮಗೂ ತಿಳಿದಿದೆ. ಕಿವಿಯಲ್ಲಿ ಚಿನ್ನ ಧರಿಸುವುದರಿಂದ ನಾವು ಯಾವ ಪ್ರಯೋಜನ ಪಡೀಬಹುದು ಅನ್ನೋದನ್ನು ತಜ್ಞರಿಂದ ತಿಳಿದುಕೊಳ್ಳೋಣ.
ಬುಧನೊಂದಿಗಿನ ಸಂಬಂಧ
ಕಿವಿಯು ಬುಧ ಗ್ರಹದೊಂದಿಗೆ ಸಂಬಂಧ ಹೊಂದಿದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಕಿವಿಯಲ್ಲಿ ಚಿನ್ನವನ್ನು ಧರಿಸುವುದು ಬುಧ ಗ್ರಹದ ಸ್ಥಿತಿಯನ್ನು ಸುಧಾರಿಸಲು ಶುಭವೆಂದು ಪರಿಗಣಿಸಲಾಗಿದೆ.
ರಾಹುವಿನ ಕೆಟ್ಟ ಪರಿಣಾಮಗಳನ್ನು ನಿವಾರಿಸುತ್ತೆ
ಚಿನ್ನ ಬುಧನ ಸ್ಥಾನವನ್ನು ಸುಧಾರಿಸುವ ಮತ್ತು ರಾಹುವಿನ ಕೆಟ್ಟ ಪರಿಣಾಮಗಳನ್ನು ನಿವಾರಿಸುವ ಲೋಹವೆಂದು ಹೇಳುತ್ತಾರೆ..
ಕಿವಿ ಸಮಸ್ಯೆ ಬರೋದಿಲ್ಲ
ಕಿವಿಯಲ್ಲಿ ಚಿನ್ನ ಧರಿಸುವ ವ್ಯಕ್ತಿಗೆ ಕಿವಿಗೆ ಸಂಬಂಧಿಸಿದ (ear problem) ಯಾವುದೇ ಕಾಯಿಲೆ ಬರೋದಿಲ್ಲ, ಬರೋದು ಅಪರೂಪ ಎನ್ನುತ್ತಾರೆ. ಅಷ್ಟೇ ಅಲ್ಲ ಇದರಿಂದ, ಕೇಳುವ ಸಾಮರ್ಥ್ಯ ಹೆಚ್ಚಾಗುತ್ತದೆ.
ಗುರುಗ್ರಹದ ಕೃಪೆ
ನೀವು ನಿಮ್ಮ ಕಿವಿಯಲ್ಲಿ ಚಿನ್ನದ ಆಭರಣ ಧರಿಸಿದರೆ, ಅದು ಗುರು ಗ್ರಹದ ಆಶೀರ್ವಾದವನ್ನು ಸಹ ತರುತ್ತದೆ. ಅಲ್ಲದೆ, ಬುಧ ಮತ್ತು ಗುರುವಿನ ಸಂಯೋಜನೆಯು ಶುಭ ಫಲಿತಾಂಶಗಳನ್ನು ನೀಡುತ್ತದೆ.
ಮೆದುಳಿಗೆ ಒಳ್ಳೆಯದು
ಕಿವಿಯನ್ನು ಚುಚ್ಚುವುದು ಮೆದುಳಿನ ಶಕ್ತಿಯನ್ನು (memory power) ತೀಕ್ಷ್ಣಗೊಳಿಸುತ್ತದೆ. ಹೀಗಿರುವಾಗ ಕಿವಿಯಲ್ಲಿ ಚಿನ್ನ ಧರಿಸುವುದರಿಂದ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಬುದ್ಧಿಶಕ್ತಿಯನ್ನು ತೀವ್ರಗೊಳಿಸುತ್ತದೆ ಅಂತಾರೆ ತಜ್ಞರು.
ಕಣ್ಣುಗಳಿಗೆ ಒಳ್ಳೆಯದು
ಕಿವಿಯಲ್ಲಿ ಚಿನ್ನವನ್ನು ಧರಿಸುವುದರಿಂದ ವೈಜ್ಞಾನಿಕ ಪ್ರಯೋಜನಗಳಿವೆ ಅನ್ನೋದು ತಿಳಿದು ಬಂದಿದೆ. ಇದರ ಸಹಾಯದಿಂದ, ಕಣ್ಣಿನ ದೃಷ್ಟಿ ಆರೋಗ್ಯಕರವಾಗಿರುತ್ತದೆ ಮತ್ತು ಒತ್ತಡ ನಿವಾರಿಸುವ ಶಕ್ತಿ ಕೂಡ ಇದಕ್ಕಿದೆ ಅನ್ನೋದು ತಿಳಿದು ಬಂದಿದೆ.
ಈ ಸಮಸ್ಯೆಗಳು ಬರೋದೇ ಇಲ್ಲ
ವೈಜ್ಞಾನಿಕ ಪ್ರಯೋಜನಗಳ ಬಗ್ಗೆ ಮಾತನಾಡೋದಾದ್ರೆ, ಕಿವಿಯಲ್ಲಿ ಚಿನ್ನವನ್ನು ಧರಿಸುವುದರಿಂದ ಆ ವ್ಯಕ್ತಿಗೆ ಪಾರ್ಶ್ವವಾಯು, ಹರ್ನಿಯಾ ಮುಂತಾದ ಗಂಭೀರ ಕಾಯಿಲೆಗಳು ಉಂಟಾಗುವ ಸಾಧ್ಯತೆ ಕೂಡ ಕಡಿಮೆ ಇರುತ್ತೆ.