ಮಣ್ಣಿನ ಮೇಲೆ ಬರಿಗಾಲಿನಿಂದ ನಡೆದ್ರೆ ಪ್ರಯೋಜನಗಳೆಷ್ಟು ಗೊತ್ತಾ?

First Published Dec 24, 2020, 12:45 PM IST

ಸೊಂಪಾದ ತೋಟಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಅಥವಾ ಸಮುದ್ರ ತೀರದಲ್ಲಿ ನಡೆಯುವುದು ಏಕೆ ಒಳ್ಳೆಯದು ಎಂದು ಎಂದಾದರೂ ಯೋಚಿಸಿದ್ದೀರಾ? ನೀವು ಪ್ರಕೃತಿಗೆ ಹತ್ತಿರವಿರುವುದೇ ಇದಕ್ಕೆ ಮುಖ್ಯ ಕಾರಣ. ಪ್ರಕೃತಿಯೊಂದಿಗೆ ಹತ್ತಿರವಾಗಿದ್ದರೆ, ಸಂತೋಷದಿಂದ ಮತ್ತು ಆರೋಗ್ಯವಾಗಿರುತ್ತೀರಿ ಎಂದು ಹೇಳಲಾಗುತ್ತದೆ. ಆದರೆ, ನಮ್ಮ ಆಧುನಿಕ ಜೀವನಶೈಲಿ ಇಂತಹ ಸೌಲಭ್ಯಗಳಿಂದ ನಾವು ವಂಚಿತರಾಗಿದ್ದೇವೆ. 

ಎಲ್ಲಾ ಜೀವಿಗಳು ನೆಲದೊಂದಿಗೆ ತಮ್ಮ ಒಡನಾಟವನ್ನು ಉಳಿಸಿಕೊಳ್ಳುತ್ತವೆ. ನೆಲದ ಮೇಲೆ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಅಥವಾ ಹುಲ್ಲಿನ ಮೇಲೆ ನಡೆದಾಡುವುದು ನಿಮ್ಮನ್ನು ಪ್ರಕೃತಿಯೊಂದಿಗೆ ನೇರವಾಗಿ ಸಂಪರ್ಕಿಸಲು ಸಹಾಯ ಮಾಡುತ್ತದೆ. ಆದರೆ ಇದರರ್ಥ ನೆಲದ ಮೇಲೆ ಮಲಗುವುದು ಎಂದಲ್ಲ. ವೈಜ್ಞಾನಿಕ ಸಂಶೋಧನೆಯು ಪ್ರಕೃತಿ ಮತ್ತು ಮಾನವರ ನಡುವೆ ಹೆಚ್ಚಾಗಿರುವ ಅಂತರ ದೈಹಿಕ ಸಮಸ್ಯೆ ಮತ್ತು ಕಾಯಿಲೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದೆ.
undefined
ಹಾಗಾದರೆ ಹುಲ್ಲಿನ ಮೇಲೆ ಅಥವಾ ಮಣ್ಣಿನ ಮೇಲೆ ಬರಿ ಕಾಲಿನಿಂದ ನಡೆದರೆ ಏನೆಲ್ಲಾ ಪ್ರಯೋಜನಗಳಿವೆ. ಇದು ಆರೋಗ್ಯದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ. ನೀವು ಬರಿ ಕಾಲಲ್ಲಿ ಒಂದು ತಿಂಗಳು ನಡೆದು ನೋಡಿ ಬದಲಾವಣೆ ನಿಮಗೆ ತಿಳಿಯುತ್ತದೆ.
undefined
ರಕ್ತದೊತ್ತಡ ಕಡಿಮೆಯಾಗುತ್ತದೆಮಣ್ಣಿನ ಮೇಲೆ ಬರಗಾಲಿನಿಂದ ನಡೆದಾಡುವುದರಿಂದ ತಾಜಾತನ, ಶಾಂತಿ ಹಾಗೂ ಸುರಕ್ಷತೆಯ ಅನುಭವ ಉಂಟಾಗುತ್ತದೆ. ಹೀಗಾಗಿ ರಕ್ತದೊತ್ತಡದ ಮೇಲೆ ಇದರಿಂದ ಸಕಾರಾತ್ಮಕ ಪ್ರಭಾವ ಬೀರುತ್ತದೆ.
undefined
ಪ್ರಾಕೃತಿಕ ಚಿಕಿತ್ಸೆಗಳಲ್ಲಿ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತರಲು 10 ರಿಂದ 15 ನಿಮಿಷ ಬರಗಾಲಿನಿಂದ ನಡೆದಾಡುವ ಸಲಹೆ ನೀಡಲಾಗುತ್ತದೆ. ನೀವು ಹಾಗೆ ಮಾಡಿದರೆ ರಕ್ತದೊತ್ತಡ ಕಡಿಮೆಯಾಗುತ್ತದೆ ಜೊತೆಗೆ ಹೃದಯ ಆರೋಗ್ಯದಿಂದಿರುತ್ತದೆ.
undefined
ನೋವು ಹಾಗೂ ಬಾವು ಕಡಿಮೆಯಾಗುತ್ತದೆನೆಲದಲ್ಲಿ ಒಂದು ವಿಶೇಷ ರೀತಿಯ ವಿದ್ಯುತ್ ಶಕ್ತಿ ಇರುತ್ತದೆ. ಇದು ನೆಲದ ಮೇಲೆ ಬರಗಾಲಿನಿಂದ ನಡೆದಾಡುವಾಗ ಒಂದು ಮಹತ್ವಪೂರ್ಣ ಶಕ್ತಿ ಒದಗಿಸುತ್ತದೆ. ವಿಜ್ಞಾನದ ಪ್ರಕಾರ ಬರಿಗಾಲಿನಿಂದ ನಡೆಯುವುದು ಭೂಮಿಯ ಪಾಸಿಟಿವ್ ಎನರ್ಜಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನೇರ ಭೌತಿಕ ಸಂಪರ್ಕದಿಂದಾಗಿ ನೆಲದ ಮೇಲ್ಮೈಯಿಂದ ಎಲೆಕ್ಟ್ರಾನ್ಗಳ ಅಪಾರ ಪೂರೈಕೆಯಾಗುತ್ತದೆ.
undefined
ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆಮಣ್ಣು ಮತ್ತು ಭೂಮಿಗೆ ತನ್ನನ್ನು ತಾನು ಒಡ್ಡಿಕೊಳ್ಳುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಏಕೆಂದರೆ ನೆಲದಲ್ಲಿ ಕಂಡುಬರುವ ಶಕ್ತಿಯುತ ಸೂಕ್ಷ್ಮ ಜೀವಿಗಳು ನೈಸರ್ಗಿಕ ರೀತಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
undefined
ಸೂಕ್ಷ್ಮ ಜೀವಿಗಳು ಚರ್ಮ ಮತ್ತು ಉಗುರುಗಳ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತವೆ. ದೇಹವನ್ನು ತಲುಪಿದ ನಂತರ, ಅವು ನಮ್ಮ ಕರುಳಿನ ಉತ್ತಮ ಬ್ಯಾಕ್ಟೀರಿಯಾಗಳಿಗೆ ಶಕ್ತಿಯನ್ನು ನೀಡುತ್ತವೆ.
undefined
ಕರುಳಿನಲ್ಲಿರುವ ಮೈಕ್ರೋಫ್ಲೋರಾ ಸೂಕ್ಷ್ಮಜೀವಿಯ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಮತ್ತು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ನಮ್ಮನ್ನು ಬಲಶಾಲಿ ಮತ್ತು ಆರೋಗ್ಯಕರವಾಗಿಸುತ್ತದೆ.
undefined
ಪ್ರಕೃತಿಯನ್ನು ತಲುಪಲು ನಿಮಗೆ ಸೌಲಭ್ಯವಿದ್ದರೆ, ಈ ಅಭ್ಯಾಸವನ್ನು ಅನುಸರಿಸಿ, ಇಲ್ಲದಿದ್ದರೆ ಅವಕಾಶ ಸಿಕ್ಕಾಗಲೆಲ್ಲಾ ನೀವು ಖಂಡಿತವಾಗಿಯೂ ಬರಿಗಾಲಿನಲ್ಲಿ ನಡೆಯಿರಿ ಹಾಗು ಆರೋಗ್ಯದಿಂದಿರಿ. .
undefined
click me!