ತೂಕ ಕಡಿಮೆಮಾಡಿಕೊಳ್ಳುವಲ್ಲಿ ಮೊಟ್ಟೆಗಳು ಮುಖ್ಯ ಪಾತ್ರವಹಿಸುತ್ತವೆ. ಮೊಟ್ಟೆ ಪ್ರೋಟೀನ್‌ನ ಅತ್ಯುತ್ತಮ ಮೂಲ. ಅಲ್ಲದೆ, ಬೆಳಗಿನ ಉಪಾಹಾರಕ್ಕಾಗಿಮೊ ಟ್ಟೆಗಳನ್ನು ಸೇವಿಸಿದರೆ, ದಿನವಿಡೀ ನಿಮ್ಮ ಹೊಟ್ಟೆ ತುಂಬಿರುತ್ತದೆ.
ಮೊಟ್ಟೆ ಮತ್ತು ಪಾಲಕ್: ಪಾಲಕ್ ಅನ್ನು ಮೊಟ್ಟೆಗಳೊಂದಿಗೆ ಸೇವಿಸದರೆ, ಅದು ಹೆಚ್ಚು ಪರಿಣಾಮ ಬೀರುತ್ತದೆ. ಮೊಟ್ಟೆಗಳಲ್ಲಿ ಪ್ರೋಟೀನ್ ಇದ್ದರೆ, ಪಾಲಕ್ ಸೊಪ್ಪಿನಲ್ಲಿ ಸಾಕಷ್ಟು ಕಬ್ಬಿಣಾಂಶವಿದೆ.
ಪೀನಟ್ ಬಟರ್ ಕಡಲೆಕಾಯಿಯಿಂದ ತಯಾರಿಸಲಾಗುತ್ತದೆ. ಪ್ರೋಟೀನ್‌ನ ಉತ್ತಮ ಮೂಲವಾಗಿರುವ ಪೀನಟ್ ಬಟರ್ ಹಸಿವನ್ನು ನಿಯಂತ್ರಿಸುವ ಮೊನೊಸಾಚುರೇಟೆಡ್ ಮತ್ತು ಪಾಲಿಸ್ಯಾಚುರೇಟೆಡ್ ಫ್ಯಾಟ್ ಹೊಂದಿರುತ್ತದೆ. ಅಲ್ಲದೆ, ಇದು ಮೆಟಬಾಲಿಸಂ ಅನ್ನು ಸ್ಟ್ರಾಂಗ್ ಗೊಳಿಸುತ್ತದೆ.
ಸೇಬು ಮತ್ತು ಪೀನಟ್ ಬಟರ್: ಪೀನಟ್ ಬಟರ್ ಹಾಗೂ ಸೇಬು ಜೊತೆಗೆ ಸೇವಿಸಿದರೆ, ತೂಕ ಇಳಿಸುವ ಪ್ರಕ್ರಿಯೆ ಮತ್ತಷ್ಟು ವೇಗಗೊಳ್ಳುತ್ತದೆ.
ಹಸಿರು ಸೊಪ್ಪು ತರಕಾರಿಗಳಲ್ಲಿ ಫೈಬರ್ ಸಮೃದ್ಧವಾಗಿರುತ್ತದೆ. ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ಇವುಗಳ ಸೇವನೆಯಿಂದ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುತ್ತದೆ.
ಹಸಿರು ತರಕಾರಿಗಳು ಮತ್ತು ಆಲಿವ್ ಎಣ್ಣೆ:ತರಕಾರಿಗಳನ್ನು ಆಲಿವ್ ಎಣ್ಣೆಯೊಟ್ಟಿಗೆ ಸೇವಿಸಿದರೆ ಅಥವಾ ಸಲಾಡ್‌ಗೆ ಈ ಎಣ್ಣೆಸೇರಿಸಿದರೆ, ಅದು ತೂಕ ಇಳಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ಮುಂಜಾನೆ ಓಟ್ಸ್ ಆರೋಗ್ಯಕರ ಉಪಹಾರ. ಪ್ರೋಟೀನ್ ಮತ್ತು ಫೈಬರ್ ತುಂಬಿದ ಓಟ್ಸ್ ಹೊಟ್ಟೆಯನ್ನು ತುಂಬಿಸುತ್ತದೆ. ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡುತ್ತದೆ.
ಓಟ್ಸ್ ಮತ್ತು ಹಣ್ಣುಗಳು: ಓಟ್ಸ್‌ನೊಂದಿಗೆ ಹಣ್ಣುಗಳನ್ನು ಬೆರೆಸಿದರೆ ಪರಿಣಾಮ ಹೆಚ್ಚು. ವಾಸ್ತವವಾಗಿ, ಹಣ್ಣುಗಳಲ್ಲಿರುವ ಆಂಟಿ-ಆಕ್ಸಿಡೆಂಟ್ಸ್ ಬೇಗ ತೂಕ ಇಳಿಸಿಕೊಳ್ಳಲು ಸಹಕರಿಸುತ್ತದೆ.
ಬಿಸಿನೀರು ಮತ್ತು ನಿಂಬೆ ಹಣ್ಣು: ಕಡಿಮೆ ಕ್ಯಾಲೊರಿ ಸೇವನೆಯಿಂದಮಾತ್ರ ತೂಕ ನಷ್ಟವಾಗುತ್ತದೆ. ಆದರೆ ಕೆಲವು ಆಹಾರಗಳು ಈ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನ ಜೊತೆ ನಿಂಬೆಹಣ್ಣಿನ ರಸ ಬೆರೆಸಿಕುಡಿಯುವುದು ಇದರಲ್ಲಿ ಒಂದು. ಇದು ದೇಹದ ಟಾಕ್ಸಿನ್ಸ್ ತೆಗೆದುಹಾಕುತ್ತದೆ.
ಗ್ರೀನ್‌ಟೀ ಮೆಟಾಬಲಿಸಂ ಅನ್ನು ಹೆಚ್ಚಿಸುವ ಮೂಲಕ ವೇಯಿಟ್ ಲಾಸ್ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಗ್ರೀನ್ ಟೀನಲ್ಲಿರುವ ಆಂಟಿ-ಆಕ್ಸಿಡೆಂಟ್ಸ್ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ.
ಗ್ರೀನ್ ಟೀ ಮತ್ತು ನಿಂಬೆ ಹಣ್ಣು: ಇದಕ್ಕೆ ತಾಜಾ ನಿಂಬೆ ರಸವನ್ನು ಸೇರಿಸಿದರೆ ಅದರ ಪರಿಣಾಮ ದ್ವಿಗುಣಗೊಳ್ಳುತ್ತದೆ.