107 ಕೆಜಿ ತೂಕ ಇಳಿಸಿಕೊಂಡ ಬಾಲಕನ ಫಿಟ್ನೆಸ್‌ ಜರ್ನಿ !

First Published | Dec 23, 2020, 4:19 PM IST

ಆರ್ಯ ಪರ್ಮನಾ ಎಂಬ ಈ ಹುಡುಗನಿಗೆ ವರ್ಲ್ಡ್‌ನ ಫ್ಯಾಟೇಸ್ಟ್‌  ಮಗು ಎಂಬ ಬಿರುದು ಸಿಕ್ಕಿತ್ತು. 14 ವರ್ಷದ ಬಾಲಕನ ತೂಕ 2016ರಲ್ಲಿ 190 ಕೆ.ಜಿ ಇತ್ತು. ಆದರೆ ಆತ  4 ವರ್ಷಗಳಲ್ಲಿ ಸುಮಾರು 107 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾನೆ. ಈಗ 83 ಕೆಜಿ ತೂಗುವ ಆರ್ಯನ ಫಿಟ್ನೆಸ್‌ ಜರ್ನಿ ಇಲ್ಲಿದೆ. 
 

ವಿಶ್ವದ ಅತ್ಯಂತ ಫ್ಯಾಟ್‌ ಕಿಡ್‌ ಎಂಬ ಬಿರುದಿನಿಂದ ಆರ್ಯ ಪೆರ್ಮನಾ ಸಾಕಷ್ಟು ಪ್ರಸಿದ್ಧಿಯಾಗಿದ್ದನು.
ಈ ಬಾಲಕನ ತೂಕ ಎಂದಿಗೂ ಕಡಿಮೆಯಾಗುವುದಿಲ್ಲ ಅಥವಾ ಡಯಟ್‌ ಅಥವಾ ಜಿಮ್‌ಗೆ ಹೋಗುವುದು ಎಂದಿಗೂ ಸಾಧ್ಯವಿಲ್ಲ ಎಂದೇ ಎಲ್ಲರೂಭಾವಿಸಿದ್ದರು. ಆದರೆ ಈಗ ಆರ್ಯ ತನ್ನ ಡೇಡಿಕೇಶನ್‌ನಿಂದ 0-20 ಕೆಜಿ ಬದಲಿಗೆ 107 ಕೆಜಿ ಇಳಿಸಿಕೊಂಡಿದ್ದಾನೆ.
Tap to resize

ಆರ್ಯ ತನ್ನ ದೇಹದ ತೂಕ ಇಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಡಬೇಕಾಯಿತು. ಆದರೆ ಈಗ ಅತ ಸಾಮಾನ್ಯ ಜನರಂತೆ ಫಿಟ್‌ನೆಸ್ ಜೀವನವನ್ನು ನಡೆಸುತ್ತಿದ್ದಾನೆ .
ಗ್ಯಾಸ್ಟ್ರಿಕ್ ಬೈಪಾಸ್, ಜಿಮ್ಮಿಂಗ್ ಮತ್ತು ಡಯಟಿಂಗ್ ಮಾಡುವ ಮೂಲಕ ಆರ್ಯ ತೂಕ ಇಳಿಸಿಕೊಂಡಿದ್ದಾನೆ.
ಅಂತಾರಾಷ್ಟ್ರೀಯ ಫಿಟ್ನೆಸ್ ತರಬೇತುದಾರ ಅಡೆ ರೈ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿದರು.ಅಸಾಧ್ಯವಾದ ಕೆಲಸವನ್ನು ಸುಲಭಗೊಳಿಸಿದ್ದಾರೆ.
ಫಿಟ್ನೆಸ್ ತರಬೇತುದಾರ ಅಡೆ ರೈ ಆರಂಭದಲ್ಲಿ ಆರ್ಯ ಅವರಿಗೆ ಸುಲಭವಾದ ಚಟುವಟಿಕೆಯನ್ನು ನೀಡುತ್ತಿದ್ದರು. ಉದಾಹರಣೆಗೆ - ಸಿಟ್‌ಅಪ್ಸ್‌, ಪಂಚಿಂಗ್‌ ಬ್ಯಾಗ್‌ ಮತ್ತು ವಾಕಿಂಗ್‌ ಇತ್ಯಾದಿ.
ಜೊತೆಗೆ ಆರ್ಯನ ಆಹಾರದಲ್ಲಿ ಬದಲಾವಣೆಗಳನ್ನು ಮಾಡಲಾಯಿತು.
ವ್ಯಾಯಾಮದಿಂದಾಗಿ ಆರ್ಯನ ತೂಕ ವೇಗವಾಗಿ ಕಡಿಮೆಯಾಯಿತು. ಆದರೆ ಹಸಿವನ್ನು ಕಡಿಮೆ ಮಾಡಲು, ಹೊಟ್ಟೆಯ ಗಾತ್ರವನ್ನು ಕಡಿಮೆ ಮಾಡಲು ಮತ್ತು ಹೆಚ್ಚುವರಿ ಚರ್ಮವನ್ನು ಬೇರ್ಪಡಿಸಲು ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನು . ಪ್ರಸ್ತುತ 83 ಕೆಜಿ ಇರುವ ಆರ್ಯ ಮುಂಬರುವ ಸಮಯದಲ್ಲಿ ಹೆಚ್ಚಿನ ತೂಕವನ್ನು ಕಳೆದುಕೊಳ್ಳಬಹುದು.
ಆರ್ಯ ಸರ್ಜರಿ ನಡೆಸಿದ ಡಾಕ್ಟರ್‌ ಮುಂದೆ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಬಹುದೆಂದು ಹೇಳುತ್ತಾರೆ, ಇದು ಅವನ ಕೈ, ಹೊಟ್ಟೆ ಮತ್ತು ಎದೆಯಿಂದ ಹೆಚ್ಚುವರಿ ಚರ್ಮವನ್ನು ತೆಗೆದುಹಾಕುತ್ತದೆ. ಇದು ಅವನ ತೂಕವನ್ನು ಇನ್ನಷ್ಟು ಕಡಿಮೆ ಮಾಡುತ್ತದೆ.ಜಿಮ್ ಮತ್ತು ಡಯಟಿಂಗ್‌ನೊಂದಿಗೆ ಆರ್ಯ 107 ಕೆಜಿ ಕಳೆದುಕೊಂಡಿದ್ದಾನೆ.
ಡೈಲಿಮೇಲ್ ವರದಿಯ ಪ್ರಕಾರ, ಆರ್ಯ ಹುಟ್ಟುವಾಗ ತೂಕವು ಸಾಮಾನ್ಯ ಮಕ್ಕಳಂತೆ 8 ಎಲ್‌ಬಿಎಸ್ ಆಗಿತ್ತು. ಆದರೆ 2014ರಲ್ಲಿ ಪರಿಸ್ಥಿತಿ ಮಿತಿ ಮೀರಿತು. 8 ವರ್ಷ ವಯಸ್ಸಿನಲ್ಲಿ ಅವನ ಹಸಿವು ವೇಗವಾಗಿ ಹೆಚ್ಚಾಯಿತು. ಇದರಿಂದ ಅವನು ಇಡೀ ದಿನ ತಿನ್ನುತ್ತಿದ್ದನು.
ಆತ ತೂಕ ಇಳಿಸದಿದ್ದರೆ ಆತಯ ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದರು. ಮನೆಯ ಬಾತ್‌ರೂಮ್‌ಗೆ ಹೋಗಲು ಆಸಾಧ್ಯವಾದ ಕಾರಣದಿಂದ ಆತನ ಪೋಷಕರು ಮನೆಯ ಹೊರಗೆ ಕೊಳವನ್ನು ನಿರ್ಮಿಸಿದ್ದರು.
ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದಾಗ, ಇಂಡೋನೇಷ್ಯಾದ ಅಧಿಕಾರಿಗಳು ಸಹಾಯ ಮಾಡಿದರು ಮತ್ತು ವೈದ್ಯಕೀಯ ನೆರವು ನೀಡಿದರು.ಇಂದು ಆತನ ನಾರ್ಮಲ್‌ ಜೀವನವನ್ನು ನಡೆಸುತ್ತಿದ್ದು, ನಿರಂತರವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾನೆ. ಆರ್ಯನ ಫಿಟ್ನೆಸ್‌ ಜರ್ನಿಜನರಿಗೆ ಸ್ಫೂರ್ತಿ ನೀಡುತ್ತಿದೆ.

Latest Videos

click me!