ಸೂಪರ್ ಫುಡ್ ಮೊಸರು - ಪ್ರತಿದಿನ ಸೇವಿಸಿದರೆ ಹೇಗಿರುತ್ತೆ ಆರೋಗ್ಯ?
First Published | Apr 15, 2020, 6:04 PM ISTಪ್ರತಿದಿನ ಊಟಕ್ಕೆ ಮೊಸರು ಬೇಕೆ ಬೇಕು. ಮೊಸರು ಇಲ್ಲದೆ ಊಟ ಕಂಪ್ಲೀಟ್ ಅನ್ಸೋದೇ ಇಲ್ಲ ಅಂತಾರೆ ಎಷ್ಟೋ ಜನ. ಹೆಚ್ಚಿನ ಮನೆಗಳಲ್ಲಿ ಮೊಸರು ಯಾ ಮಜ್ಜಿಗೆಯನ್ನು ನಿತ್ತ ಸೇವಿಸುವ ಅಭ್ಯಾಸ ರೂಡಿಸಿಕೊಂಡಿರುವುದು ಸಾಮಾನ್ಯ. ಅದರಲ್ಲೂ ದಕ್ಷಿಣ ಭಾರತದಲ್ಲಿ ಊಟದ ಕೊನೆಯಲ್ಲಿ ಮೊಸರು ಇಲ್ಲವಾದಲ್ಲಿ ಊಟ ಪೂರ್ತಿಯಾಗೋದೇ ಇಲ್ಲ. ಕ್ಯಾಲ್ಷಿಯಂ, ವಿಟಮಿನ್ B- 2,12 ಪೊಟಾಷಿಯಂ ಮತ್ತು ಮ್ಯಾಗ್ನೇಷಿಯಂಗಳನ್ನು ಒಳಗೊಂಡು ಹಲವು ಆರೋಗ್ಯ ಅಂಶಗಳನ್ನು ಹೊಂದಿರುವ ಮೊಸರು ಒಂದು ಸೂಪರ್ ಫುಡ್. ಮೊಸರನ್ನು ಡೈಲಿ ತಿಂದು ಆರೋಗ್ಯವಂತರಾಗಿ.