ಹಾಲಿನ ಚಹಾ ಬಿಡಿ, ಅರಿಶಿನ ಚಹಾ ಕುಡಿದು ಆರೋಗ್ಯ ವೃದ್ಧಿಸಿ!

First Published | Oct 26, 2023, 3:51 PM IST

ಅರಿಶಿನ ಟೀ ಯಾವತ್ತಾದ್ರೂ ಕುಡಿದಿದ್ದೀರಾ? ಇಲ್ಲಾ ಅಂದ್ರೆ ಇವತ್ತೆ ಅರಿಶಿನ ಟಿ ಕುಡಿಯಲು ಆರಂಭಿಸಿ, ಯಾಕಂದ್ರೆ ಇದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಅವುಗಳ ಬಗ್ಗೆ ತಿಳಿಯೋಣ. 
 

ಅರಿಶಿನವನ್ನು ಬಹುತೇಕ ಎಲ್ಲಾ ಆಹಾರಗಳಲ್ಲಿ ಬಳಸಲಾಗುತ್ತದೆ. ರುಚಿ ಮತ್ತು ಬಣ್ಣ ಹೆಚ್ಚಿಸುವ ಜೊತೆಗೆ ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿ ಅನ್ನೋದು ನಮಗೆ ಗೊತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಅರಿಶಿನ ಚಹಾ (Turmerci Tea) ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ಇಂದು ನಾವು ನಿಮಗೆ ಹೇಳಲಿದ್ದೇವೆ. 
 

ಸಂಧಿವಾತದಲ್ಲಿ ಪ್ರಯೋಜನಕಾರಿ
ಅರಿಶಿನವು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಹಾಗಾಗಿ ಕೀಲು ನೋವಿನಿಂದ ಪರಿಹಾರ ಪಡೆಯಲು ನೀವು ಅರಿಶಿನ ಚಹಾ ಸೇವಿಸಬಹುದು. ಇದು ಕೀಲುಗಳನ್ನು ಶಕ್ತಿಯುತವನ್ನಾಗಿ ಮಾಡಲು ಸಹ ನೆರವು ನೀಡುತ್ತೆ. 

Tap to resize

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಅರಿಶಿನದಲ್ಲಿ ಕಂಡುಬರುವ ಕರ್ಕ್ಯುಮಿನ್ ಎಂಬ ಅಂಶವು ರೋಗನಿರೋಧಕ ಶಕ್ತಿಯನ್ನು (immunity power) ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, ಅರಿಶಿನ ಚಹಾ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ತೂಕ ಇಳಿಸಿಕೊಳ್ಳಲು ಸಹಾಯ
ಜೀರ್ಣಕ್ರಿಯೆಯನ್ನು ಸುಧಾರಿಸಲು ನೀವು ಅರಿಶಿನ ಚಹಾ ಕುಡಿಯಬಹುದು. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುವ ಮೂಲಕ ತೂಕ (weight loss) ನಷ್ಟಕ್ಕೆ ಸಹಾಯ ಮಾಡುತ್ತದೆ.

ಮಧುಮೇಹ ನಿಯಂತ್ರಿಸುತ್ತೆ
ಅರಿಶಿನ ಚಹಾ ಕುಡಿಯುವುದರಿಂದ ದೇಹದ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇದು ಮಧುಮೇಹ ರೋಗಿಗಳಿಗೆ (diabetes patients) ಪ್ರಯೋಜನಕಾರಿ ಎಂದು ತಿಳಿದು ಬಂದಿದೆ. 

ಹೊಳೆಯುವ ಚರ್ಮಕ್ಕಾಗಿ
ಅರಿಶಿನದಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮಕ್ಕೆ ತುಂಬಾ ಒಳ್ಳೆಯದು. ಚರ್ಮವನ್ನು ಹೊಳೆಯುವಂತೆ (shining skin) ಮತ್ತು ಆರೋಗ್ಯಕರವಾಗಿಡಲು ನೀವು ಅರಿಶಿನ ಚಹಾ ಕುಡಿಯಬಹುದು.  

ಚಹಾ ತಯಾರಿಸುವುದು ಹೇಗೆ?
ಅರಿಶಿನ ಚಹಾ ತಯಾರಿಸಲು, ಮೊದಲು ನೀರನ್ನು ಕುದಿಸಿ. ಕುದಿಸಿದ ನಂತರ, ಅದಕ್ಕೆ ಅರಿಶಿನ, ಕರಿಮೆಣಸು ಮತ್ತು ದಾಲ್ಚಿನ್ನಿ ಪುಡಿ ಸೇರಿಸಿ.
ಈಗ ಈ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ ಮತ್ತು ಚಹಾವನ್ನು ಚೆನ್ನಾಗಿ ಕುದಿಸಿ. ಇದರ ನಂತರ, ಚಹಾವನ್ನು ಫಿಲ್ಟರ್ ಮಾಡಿ ಮತ್ತು ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯಿರಿ.
 

Latest Videos

click me!