ಕಪ್ಪು ಒಣದ್ರಾಕ್ಷಿ ನೀರು ಸೇವಿಸಿದ್ರೆ ಗರ್ಭಧಾರಣೆ ಸುಲಭ, ಲೈಂಗಿಕ ಆರೋಗ್ಯಕ್ಕೂ ಬೆಸ್ಟ್ ಮದ್ದು!

First Published | Oct 28, 2023, 7:00 AM IST

ನೆನೆಸಿದ ಕಪ್ಪು ಒಣದ್ರಾಕ್ಷಿಯಲ್ಲಿ ಜೀವಸತ್ವಗಳು ಮತ್ತು ಅನೇಕ ಖನಿಜಗಳು ಬಂಜೆತನ, ಗರ್ಭಧಾರಣೆ ಸಮಸ್ಯೆಗಳು, ಪಿಸಿಒಎಸ್, ಚರ್ಮದ ಸಮಸ್ಯೆಗಳಂತಹ ಮಹಿಳೆಯರ ಅನೇಕ ಸಮಸ್ಯೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
 

ಒಣದ್ರಾಕ್ಷಿ ರುಚಿಯಲ್ಲಿ (black raisins) ಅದ್ಭುತವಾಗಿದೆ, ಸುಲಭವಾಗಿ ಲಭ್ಯವಾಗುವ ವಸ್ತುವೂ ಆಗಿದೆ, ಆರೋಗ್ಯಕರವಾಗಿದೆ ಮತ್ತು ವಿವಿಧ ರೀತಿಯಲ್ಲಿ ಸೇವಿಸಬಹುದು. ಕೆಂಪು ಒಣದ್ರಾಕ್ಷಿಯಂತೆ, ಕಪ್ಪು ಒಣದ್ರಾಕ್ಷಿ ಕೂಡ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ನೀರಿನಲ್ಲಿ ನೆನೆಸಿ ಸರಿಯಾಗಿ ಸೇವಿಸಿದರೆ, ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತೆ.
 

ಕಪ್ಪು ಒಣದ್ರಾಕ್ಷಿ ನೀರು ಆರೋಗ್ಯಕ್ಕೆ ಉತ್ತಮ
ಕಪ್ಪು ಒಣದ್ರಾಕ್ಷಿಯನ್ನು ರಾತ್ರಿಯಿಡೀ ನೆನೆಸಿ ಮರುದಿನ ಫಿಲ್ಟರ್ ಮಾಡುವ ಮೂಲಕ ಕಪ್ಪು ಒಣದ್ರಾಕ್ಷಿ ನೀರನ್ನು ತಯಾರಿಸಲಾಗುತ್ತದೆ. ನೆನೆಸುವುದರಿಂದ ಒಣದ್ರಾಕ್ಷಿಯ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳನ್ನು ನೀರಿನಲ್ಲಿ ಸೇರುತ್ತವೆ. ಈ ನೀರನ್ನು ಸೇವಿಸೋದ್ರಿಂದ ದೇಹ, ಕೂದಲಿನ ಬೆಳವಣಿಗೆ ಮತ್ತು ಚರ್ಮಕ್ಕೆ ಹೆಚ್ಚಿನ ಪ್ರಯೋಜನಗಳು ಸಿಗುತ್ತವೆ. 

Tap to resize

ಕಪ್ಪು ಒಣದ್ರಾಕ್ಷಿ ಪ್ರಯೋಜನಗಳು 
ಕಪ್ಪು ಒಣದ್ರಾಕ್ಷಿ ಕಬ್ಬಿಣ, ತಾಮ್ರ ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿದೆ, ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ದೇಹವನ್ನು ನಿರ್ವಿಷಗೊಳಿಸುತ್ತದೆ. ಅಲ್ಲದೇ ರಕ್ತ ಶುದ್ಧೀಕರಣವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಪಿಸಿಒಎಸ್ (PCOS), ಅನಿಯಮಿತ ಋತುಚಕ್ರ ಮತ್ತು ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಂತಹ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ರಕ್ತಹೀನತೆಯನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯಿಂದ ರಕ್ತಹೀನತೆಯನ್ನು ತಪ್ಪಿಸಬಹುದು. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಮಹಿಳೆಯರ ಆರೋಗ್ಯಕ್ಕೆ ಕಪ್ಪು ಒಣದ್ರಾಕ್ಷಿ
ಕಪ್ಪು ಒಣದ್ರಾಕ್ಷಿಯಲ್ಲಿ ಅಮೈನೋ ಆಮ್ಲಗಳಿವೆ, ಇದು ಲೈಂಗಿಕ ಆರೋಗ್ಯವನ್ನು ಸುಧಾರಿಸುತ್ತದೆ. ಅಮೈನೋ ಆಮ್ಲಗಳು ಗರ್ಭಧರಿಸುವ ಸಾಧ್ಯತೆ ಹೆಚ್ಚಿಸುತ್ತವೆ. ಇದರಲ್ಲಿರುವ ಎಲ್-ಅರ್ಜಿನೈನ್ ಗರ್ಭಾಶಯ ಮತ್ತು ಅಂಡಾಶಯಗಳಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ. ಲೈಂಗಿಕ ಕ್ರಿಯೆಗೆ (physical relationship) ಎರಡರಿಂದ ಮೂರು ಗಂಟೆಗಳ ಮೊದಲು ಇದನ್ನು ಸೇವಿಸುವುದರಿಂದ ಕಾಮೋತ್ತೇಜಕವಾಗಿಯೂ ಕಾರ್ಯನಿರ್ವಹಿಸಬಹುದು.
 

ಚರ್ಮಕ್ಕೆ ಪ್ರಯೋಜನಗಳು
ಕಪ್ಪು ಒಣದ್ರಾಕ್ಷಿಯಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್ ಗಳು (anti oxidants) ಚರ್ಮವನ್ನು ಆರೋಗ್ಯಕರವಾಗಿಸುತ್ತದೆ. ಇದರ ನಿರ್ವಿಷೀಕರಣ ಮತ್ತು ಆಂಟಿ ಏಜಿಂಗ್ ಗುಣಲಕ್ಷಣಗಳು ಚರ್ಮವನ್ನು ಸ್ವಚ್ಛ, ಹೊಳೆಯುವಂತೆ ಮಾಡುತ್ತೆ ಮತ್ತು ಬಿಗಿಯಾಗಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮೊಡವೆಗಳನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತದೆ. ನಿಯಮಿತ ಸೇವನೆಯು ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಚರ್ಮಕ್ಕಾಗಿ, 8-10 ನೆನೆಸಿದ ಒಣದ್ರಾಕ್ಷಿಯ ಒಂದು ಕಪ್ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು.
 

ಫರ್ಟಿಲಿಟಿಗಾಗಿ ಒಣದ್ರಾಕ್ಷಿಯನ್ನು ಈ ರೀತಿ ಸೇವಿಸಿ
ಹಾರ್ಮೋನುಗಳ ಅಸಮತೋಲನವು ಕಡಿಮೆ ಫರ್ಟಿಲಿಟಿ ರಚನೆ ಮತ್ತು ಬಂಜೆತನದ ಮೊಟ್ಟೆಗಳಿಗೆ ಕಾರಣವಾಗಬಹುದು. ಫರ್ಟಿಲಿಟಿ (fertility) ಹೆಚ್ಚಿಸಲು 150 ಗ್ರಾಂ ಉತ್ತಮ ಗುಣಮಟ್ಟದ ಕಪ್ಪು ಒಣದ್ರಾಕ್ಷಿಯನ್ನು ತೆಗೆದುಕೊಳ್ಳಿ. ಅದಕ್ಕೆ 2 ಕಪ್ ನೀರನ್ನು ಸೇರಿಸಿ. ಅದನ್ನು ಮುಚ್ಚಿ ರಾತ್ರಿಯಿಡೀ ಬಿಡಿ. ಮರುದಿನ ಅದನ್ನು ಫಿಲ್ಟರ್ ಮಾಡಿ. ಒಣದ್ರಾಕ್ಷಿಯನ್ನು ಜಜ್ಜಿ ಅದರ ರಸವನ್ನು ನೀರಿನ ಜೊತೆ ಸೇರಿಸಿ ಕುಡಿಯಿರಿ. ಗರ್ಭಾವಸ್ಥೆಯಲ್ಲಿ ನೀರಿನಲ್ಲಿ ನೆನೆಸಿದ ಕಪ್ಪು ಒಣದ್ರಾಕ್ಷಿ ಮಲಬದ್ಧತೆಯನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ.

ಗರ್ಭಾವಸ್ಥೆಯಲ್ಲಿ ಸೇವಿಸುವುದು ಹೇಗೆ? 
ಸುಮಾರು ಹತ್ತು ಕಪ್ಪು ಒಣದ್ರಾಕ್ಷಿಗಳನ್ನು 10-15 ನಿಮಿಷಗಳ ಕಾಲ ನೀರಿನಲ್ಲಿಸಿಡಿ. ಇದರ ನಂತರ, ಈ ಒಣದ್ರಾಕ್ಷಿಗಳನ್ನು ಒಂದು ಲೋಟ ಹಾಲಲ್ಲಿ ಕುದಿಸಿ. ಇದರ ಪರಿಣಾಮವನ್ನು ನೋಡಲು, 2-3 ದಿನಗಳವರೆಗೆ ಮಲಗುವ ಮೊದಲು ಈ ಪಾನೀಯ ಸೇವಿಸಿ. ಗರ್ಭಿಣಿಯರು ಪ್ರತಿದಿನ ಒಣದ್ರಾಕ್ಷಿ ನೀರನ್ನು 1.5 ಕಪ್ ಸೇವಿಸಬೇಕು. ನೀವು ಮಧುಮೇಹ ಹೊಂದಿದ್ದರೆ, ಸ್ತ್ರೀರೋಗ ತಜ್ಞರ ಸಲಹೆ ಪಡೆಯುವುದು ಉತ್ತಮ.

PCOS ಗಾಗಿ ಈ ರೀತಿ ಸೇವಿಸಿ
ಕಪ್ಪು ಒಣದ್ರಾಕ್ಷಿ ನೀರಲ್ಲಿ ಬಹಳ ಕಡಿಮೆ ಸಕ್ಕರೆ ಇರುತ್ತದೆ. ಇದು ಹಾರ್ಮೋನ್ ಸಮತೋಲನವನ್ನು ಸುಧಾರಿಸುವ ಮೂಲಕ ಪಿಸಿಒಎಸ್ ಸಮಸ್ಯೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ತೂಕ ನಿರ್ವಹಣೆಗೆ ಕಪ್ಪು ಒಣದ್ರಾಕ್ಷಿಯಲ್ಲಿರುವ ಫೈಬರ್ ಅಂಶ ಸಹಾಯ ಮಾಡುತ್ತದೆ.

Latest Videos

click me!