Pregnancy Care: ಗರ್ಭಾವಸ್ಥೆಯಲ್ಲಿ ಡಕ್ ವಾಕ್ ಮಾಡೋದ್ರಿಂದ ಇಷ್ಟೆಲ್ಲಾ ಲಾಭವಿದೆ!

First Published Sep 30, 2023, 10:34 AM IST

ಗರ್ಭಾವಸ್ಥೆಯಲ್ಲಿ ಲಘು ವ್ಯಾಯಾಮಗಳನ್ನು ಮಾಡುವುದರಿಂದ ಗರ್ಭಿಣಿ ಮಹಿಳೆರಿಗೆ ಹೆರಿಗೆ ಸುಗಮವಾಗುತ್ತೆ ಎನ್ನುತ್ತಾರೆ. ತಜ್ಞರ ಪ್ರಕಾರ, ಗರ್ಭಿಣಿಯರು ಪ್ರತಿದಿನ ಡಕ್ ವಾಕ್ ಮಾಡಿದ್ರೆ ಉತ್ತಮವಂತೆ. ಡಕ್ ವಾಕ್ ಮಾಡುವುದರಿಂದ ಆಗುವ ಪ್ರಯೋಜನಗಳು ಯಾವುವು ಅನ್ನೋದನ್ನು ತಿಳಿಯೋಣ. 
 

ಗರ್ಭಧಾರಣೆಯು (pregnancy) ಪ್ರತಿಯೊಬ್ಬ ಮಹಿಳೆಗೆ ಸುಂದರವಾದ ಜರ್ನಿಯಾಗಿದೆ, ಜೊತೆಗೆ ಇದು ಸಾಕಷ್ಟು ಸವಾಲಿನಿಂದ ಕೂಡಿರುತ್ತೆ. ಈ ಸಮಯದಲ್ಲಿ, ತಾಯಿ ಸದೃಢವಾಗಿ ಮತ್ತು ಆರೋಗ್ಯವಾಗಿರೋದು ತುಂಬಾನೆ ಮುಖ್ಯ. ಆರೋಗ್ಯದ ಬಗ್ಗೆ ಸಣ್ಣ ನಿರ್ಲಕ್ಷ್ಯವೂ ಮಗುವಿಗೆ ಅಪಾಯಕಾರಿಯಾಗಬಹುದು. 

ಆರೋಗ್ಯ ತಜ್ಞರ ಪ್ರಕಾರ, ಗರ್ಭಿಣಿಯರು ತಿನ್ನುವುದು ಮತ್ತು ಕುಡಿಯುವುದರ ಜೊತೆಗೆ, ಲಘು ವ್ಯಾಯಾಮವನ್ನು ಸಹ ದಿನಚರಿಯಲ್ಲಿ ಸೇರಿಸಬೇಕು. ಈ ವ್ಯಾಯಾಮಗಳು ಹೆರಿಗೆ ನೋವನ್ನು ಎದುರಿಸಲು ಸಹಾಯ ಮಾಡುತ್ತೆ, ಅಂದ್ರೆ ಇದು ಸುಲಭ ಹೆರಿಗೆಗೆ ಸಹಾಯಕವಾಗಿದೆ. ಸ್ತ್ರೀ ರೋಗ ತಜ್ಞರೊಬ್ಬರು ಗರ್ಭಿಣಿಯರಿಗೆ ಡಕ್ ವಾಕ್ ಮಾಡೋದಕ್ಕೆ ಸಲಹೆ ನೀಡುತ್ತಾರೆ. ಡಕ್ ವಾಕ್ (Duck walk) ಎಂದರೇನು ಮತ್ತು ಅದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ.

Latest Videos


ಡಕ್ ವಾಕ್ ಎಂದರೇನು?: ಡಕ್ ವಾಕ್ ಒಂದು ವಿಶೇಷ ರೀತಿಯ ಸ್ಕ್ವಾಟಿಂಗ್ (squating) ವ್ಯಾಯಾಮವಾಗಿದೆ. ಇದರ ಹೆಸರು ಬಾತುಕೋಳಿ ತರಹದ ತಂತ್ರಗಳನ್ನು ಸೂಚಿಸುತ್ತದೆ. ಸ್ಕ್ವಾಟ್ ಭಂಗಿಯಲ್ಲಿ ನಡೆಯುವುದನ್ನು ಡಕ್ ವಾಕ್ ಎಂದು ಕರೆಯಲಾಗುತ್ತದೆ.

ಇದನ್ನು ಮಾಡಲು, ಒಬ್ಬ ವ್ಯಕ್ತಿಯು ಬಾತುಕೋಳಿಯ ರೂಪವನ್ನು ಹೋಲುವ ಸ್ಕ್ವಾಟ್ ಸ್ಥಾನದಲ್ಲಿ ತನ್ನನ್ನು ತಾನು ತರಬೇಕು. ನಂತರ ನಿಧಾನವಾಗಿ ಕುಳಿತು ಮುಂದೆ ನಡೆಯಬೇಕು. ಇದರಲ್ಲಿ, ನೀವು ಆರಾಮವಾಗಿ ನಡೆಯಬೇಕು. ಈ ವ್ಯಾಯಾಮವನ್ನು ಮಾಡುವಾಗ, ನಿಮಗೆ ವಿಚಿತ್ರವೆನಿಸಬಹುದು, ಆದರೆ ಅದರ ಪ್ರಯೋಜನಗಳು ಹಲವು.  ಒತ್ತಡ ಹೇರಿ ಇದನ್ನು ಮಾಡಬಾರದು. ಮಾಡಲು ಸಾಧ್ಯವಾದರೆ ಮಾತ್ರ ಈ ವ್ಯಾಯಾಮ ಮಾಡಬೇಕು. 

ಗರ್ಭಾವಸ್ಥೆಯಲ್ಲಿ ಡಕ್ ವಾಕ್ ಮಾಡೋದ್ರೆ ಪ್ರಯೋಜನಗಳು ಯಾವುವು?
ಡಕ್ ವಾಕ್ ದೇಹದ ಕೆಳಭಾಗವನ್ನು ಬಲಪಡಿಸುತ್ತದೆ.
ಪೆಲ್ವಿಕ್ ಫ್ಲೋರ್ ನ (pelvic floor) ಸ್ನಾಯುಗಳು ಬಲವಾಗಿರುತ್ತವೆ.
ಹೆರಿಗೆಗೆ ಪೆಲ್ವಿಕ್ ಫ್ಲೋರ್ ಅನ್ನು ಬಲಪಡಿಸುವುದು ಬಹಳ ಮುಖ್ಯ.  
ಡಕ್ ವಾಕ್ ಪೆಲ್ವಿಕ್ ಫ್ಲೋರ್ ಸ್ನಾಯುಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ.

ಗರ್ಭಧಾರಣೆಯಲ್ಲಿ ಉಂಟಾಗುವ ಸೊಂಟ ಮತ್ತು ಬೆನ್ನಿನ ನೋವನ್ನು (back pain) ಸಹ ನಿವಾರಿಸುತ್ತದೆ.
ಬೆನ್ನುಹುರಿಯ ಮೇಲೆ ಒತ್ತಡ ಕಡಿಮೆ ಮಾಡುತ್ತದೆ..
ಡಕ್ ವಾಕ್ ಸೊಂಟ, ತೊಡೆಗಳನ್ನು ವಿಸ್ತರಿಸುತ್ತದೆ, ಇದು ನಮ್ಯತೆಯನ್ನು ಹೆಚ್ಚಿಸುತ್ತದೆ.
ಡಕ್ ವಾಕ್ ಮಾಡುವ ಮೂಲಕ ನೀವು ಹೆರಿಗೆ ನೋವನ್ನು ತಪ್ಪಿಸಬಹುದು.
ಇದು ಸಾಮಾನ್ಯ ಹೆರಿಗೆಗೂ ಸಹಾಯ ಮಾಡುತ್ತದೆ.
 

ಡಕ್ ವಾಕ್ ಮಾಡುವುದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ನಿಜಾ. ಆದರೆ ಯಾವುದೇ ವ್ಯಾಯಾಮ, ಡಕ್ ವಾಕ್ ಮಾಡುವ ಮೊದಲು, ಒಮ್ಮೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಎಲ್ಲರ ಗರ್ಭಧಾರಣೆ ಒಂದೇ ಆಗಿರುವುದಿಲ್ಲ. ಕೆಲವರಿಗೆ ಪ್ರೆಗ್ನೆನ್ಸಿ ಕಾಂಪ್ಲಿಕೇಶನ್ (pregnancy complication) ಇರುತ್ತೆ, ಈ ಸಂದರ್ಭದಲ್ಲಿ ಕೆಲವು ವ್ಯಾಯಾಮ ಮಾಡೋದು ಉತ್ತಮವಾಗಿರೋದಿಲ್ಲ. 
 

click me!