ತುಳಸಿಯಂತೆಯೇ, ಹೆಚ್ಚಿನ ಜನರು ತಮ್ಮ ಕಿಚನ್ ಗಾರ್ಡನ್ನಲ್ಲಿ (kitchen garden) ಕರಿಬೇವಿನ ಎಲೆಗಳನ್ನು ಸಹ ಗಿಡಮೂಲಿಕೆಯಾಗಿ ಬೆಳೆಯುತ್ತಾರೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುವುದಕ್ಕಾಗಿ ಅದನ್ನು ಹೆಚ್ಚಾಗಿ ಅಡುಗೆಯಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ ಬೆಳಿಗ್ಗೆ ಕರಿಬೇವಿನ ಎಲೆಗಳ ನೀರನ್ನು ಕುಡಿಯುವ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಇದನ್ನು ಕುಡಿಯೋದರಿಂದ ತುಂಬಾನೆ ಪ್ರಯೋಜನಗಳಿವೆ.
ಬೆಳಗ್ಗಿನ ಉಪಹಾರ ಎಲ್ಲರಿಗೂ ತುಂಬಾನೆ ಮುಖ್ಯ. ಕೆಲವರು ಹೆಚ್ಚಿನ ಪ್ರಮಾಣದ ಆಹಾರ ಸೇವಿಸಿದ್ರೆ, ಮತ್ತೆ ಕೆಲವರು ಜೀರ್ಣಕ್ರಿಯೆ ಸುಲಭವಾಗುವಂತಹ ಆಹಾರ ಮಾತ್ರ ಸೇವಿಸ್ತಾರೆ. ಆದರೆ ನಿಮ್ಮ ಜೀರ್ಣ ಕ್ರಿಯೆ ಸರಿಯಾಗಿರಬೇಕು ಅನ್ನೋದಾದ್ರೆ ನೀವು ಬೆಳಗ್ಗೆ ಎದ್ದು ಕರಿಬೇವಿನ ಎಲೆಗಳ ನೀರು (curry leaves water) ಸೇವಿಸಬಹುದು.
Image: Freepik
ಬೆಳಿಗ್ಗೆ ಕರಿಬೇವಿನ ಎಲೆಗಳ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ಯಾವುವು ಎಂದು ನೀವು ಯೋಚನೆ ಮಾಡುತ್ತಿದ್ದರೆ, ನಿಮಗಾಗಿ ಇಲ್ಲಿ ಎಲ್ಲಾ ವಿವರಗಳನ್ನು ನೀಡಲಾಗಿದೆ. ಅವುಗಳನ್ನು ಓದಿ, ಇನ್ನು ಮುಂದೆ ಮಿಸ್ ಮಾಡದೇ ಮುಂಜಾನೆ ಕರಿಬೇವಿನ ನೀರು ಕುಡಿಯಿರಿ.
ಕರಿಬೇವಿನ ಎಲೆಗಳ ನೀರಿನಲ್ಲಿ ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿವೆ: ಕರಿಬೇವಿನ ಎಲೆಗಳ ನೀರು ನಿಮ್ಮ ದಿನವನ್ನು ಉತ್ತಮವಾಗಿ ಪ್ರಾರಂಭಿಸಲು ಬೆಸ್ಟ್ ಆಯ್ಕೆಯಾಗಿದೆ. ಉತ್ಕರ್ಷಣ ನಿರೋಧಕಗಳು (anti oxidant) ಮತ್ತು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಇದು ದೇಹವನ್ನು ಎನರ್ಜಿಟಿಕ್ ಆಗಿರಿಸುತ್ತೆ, ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಅಷ್ಟೇ ಅಲ್ಲ ಕರಿಬೇವಿನ ನೀರು ನಮ್ಮ ರೋಗನಿರೋಧಕ ಶಕ್ತಿಯನ್ನು (immunity booster)ಬಲಪಡಿಸುತ್ತದೆ, ಇದರಿಂದಾಗಿ ನಾವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ಕಡಿಮೆಯಾಗುತ್ತೆ ಮತ್ತು ನಾವು ಅನಾರೋಗ್ಯದಿಂದ ಬಳಲುತ್ತಿರುವ ಸಮಯವನ್ನು ಸಹ ಕಡಿಮೆ ಮಾಡುತ್ತದೆ. ಆಂಟಿಆಕ್ಸಿಡೆಂಟ್ಗಳು ಕ್ಯಾನ್ಸರ್ನಂತಹ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗುವ ದೇಹದಲ್ಲಿನ ಫ್ರೀ ರಾಡಿಕಲ್ಗಳ ವಿರುದ್ಧ ಹೋರಾಡುತ್ತವೆ.
ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ: ಕರಿಬೇವಿನ ಎಲೆಗಳು ನಿಮ್ಮ ಕೂದಲಿಗೆ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತವೆ. "ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ, ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಅಕಾಲಿಕ ಬೂದು ಬಣ್ಣವನ್ನು ತಡೆಯುತ್ತದೆ ಮತ್ತು ನೆತ್ತಿಯನ್ನು ಪೋಷಿಸುತ್ತದೆ. ಒಟ್ಟಲ್ಲಿ ಕೂದಲಿನ ಆರೋಗ್ಯ ಸುಧಾರಿಸಲು ಇದು ಉತ್ತಮವಾಗಿದೆ.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಕರಿಬೇವಿನ ಎಲೆಗಳು ಜೀರ್ಣಕ್ರಿಯೆ ಕಿಣ್ವಗಳನ್ನು ಹೊಂದಿರುತ್ತವೆ, ಅದು ಆರೋಗ್ಯಕರ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು (digestion system) ನಿಧಾನವಾಗಿ ಉತ್ತೇಜಿಸುವ ಮೂಲಕ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಇದರ ನೈಸರ್ಗಿಕ ಗುಣಲಕ್ಷಣಗಳು ಕರುಳಿನ ಮೇಲೆ ಕಠಿಣ ಅಥವಾ ಹಠಾತ್ ಪರಿಣಾಮಗಳನ್ನು ಉಂಟುಮಾಡದೆ ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ: ಕರಿಬೇವಿನ ಎಲೆಗಳು ಆಹ್ಲಾದಕರ ಗಿಡಮೂಲಿಕೆ ಸುವಾಸನೆಯನ್ನು ಹೊಂದಿರುತ್ತವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಈ ಸುವಾಸನೆ ನಮ್ಮ ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ಕರಿಬೇವಿನ ಎಲೆಗಳ ನೀರನ್ನು ಕುಡಿಯುವುದರಿಂದ ನಿಮ್ಮ ಸ್ನಾಯುಗಳು ಮತ್ತು ನರಗಳು ಸಡಿಲವಾಗಿ, ಶಾಂತತೆಯ ಭಾವನೆಯನ್ನು ಉತ್ತೇಜಿಸಬಹುದು, ಇದರಿಂದಾಗಿ ಒತ್ತಡವನ್ನು ನಿವಾರಿಸಬಹುದು.
ಶಕ್ತಿಯುತ ಸಸ್ಯ ಸಂಯುಕ್ತಗಳನ್ನು ಹೊಂದಿದೆ: ಕರಿಬೇವಿನ ಎಲೆಗಳು ಆಲ್ಕಲಾಯ್ಡ್ಗಳು, ಗ್ಲೈಕೋಸೈಡ್ಗಳು ಮತ್ತು ಫಿನೋಲಿಕ್ ಸಂಯುಕ್ತಗಳಂತಹ ರಕ್ಷಣಾತ್ಮಕ ಸಸ್ಯ ಪದಾರ್ಥಗಳ ಭಂಡಾರವಾಗಿದೆ. ಈ ವಸ್ತುಗಳು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ, ಇದು ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ.
ಕರಿಬೇವಿನ ಎಲೆಗಳ ನೀರು ತಯಾರಿಸುವುದು ಹೇಗೆ?: ಈ ನೀರನ್ನು ತಯಾರಿಸುವುದು ತುಂಬಾ ಸುಲಭವಾಗಿದೆ. ಬೆರಳೆಣಿಕೆಯಷ್ಟು ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ಬೆಚ್ಚಗಿನ ನೀರಿನಲ್ಲಿ ಮುಳುಗಿಸಿ, ಸ್ವಲ್ಪ ಸಮಯ ಹಾಗೆಯೇ ಬಿಡಿ. ಬಳಿಕ ಅದನ್ನು ಸೋಸಿ ಕುಡಿಯಿರಿ.
ಕರಿಬೇವಿನ ಎಲೆಗಳ ನೀರನ್ನು ಕುಡಿಯುವುದರಿಂದ ಅಡ್ಡಪರಿಣಾಮಗಳು ಇವೆಯೇ?: ಕರಿಬೇವಿನ ಎಲೆಗಳ ನೀರು ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆಯಾದರೂ, ಅತಿಯಾದ ಸೇವನೆಯು ಸಣ್ಣ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಸೂಕ್ಷ್ಮ ವ್ಯಕ್ತಿಗಳಲ್ಲಿ ಗ್ಯಾಸ್ಟ್ರಿಕ್ (gastric) ತೊಂದರೆಗಳು ಅಥವಾ ಅಲರ್ಜಿಯ ಪ್ರತಿಕ್ರಿಯೆಗಳು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ನಿಯಮಿತ ಸೇವನೆ ಮುಖ್ಯ.