ಪ್ರತಿದಿನ ಪುಶ್-ಅಪ್ ಮಾಡೋದ್ರಿಂದ ನಿಮ್ಮ ದೇಹದಲ್ಲಿ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಬಹುದು, ಇದು ನಿಮ್ಮ ಸ್ನಾಯುವನ್ನು ಸ್ಟ್ರಾಂಗ್ ಮಾಡೋದರಿಂದ ಹಿಡಿದು, ನಿಮ್ಮ ಭಂಗಿಯವರೆಗೆ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಈ ಸರಳ, ಆದರೆ ಪರಿಣಾಮಕಾರಿ ವ್ಯಾಯಾಮವು(exercise) ದೇಹದ ಹೆಚ್ಚಿನ ಸ್ನಾಯುಗಳನ್ನು ಸಕ್ರಿಯಗೊಳಿಸುತ್ತದೆ. ಹಾಗಾಗಿ ಇದನ್ನು ನೀವು ಪ್ರತಿದಿನ ಮಾಡಿದ್ರೆ ಹೆಚ್ಚಿನ ಪ್ರಯೋಜನ ಸಿಗುತ್ತೆ.
ನೀವು ಪ್ರತಿದಿನ ಪುಶ್ ಅಪ್ ಮಾಡೋದ್ರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತೆ ನೋಡಿ…
ಮಸಲ್ ಸ್ಟ್ರೆಂಥ್ ಮತ್ತು ಟೋನ್ ಹೆಚ್ಚುತ್ತೆ (Muscle Strength and Tone)
ಪುಶ್-ಅಪ್ಸ್ ಎದೆ, ಭುಜಗಳು, ಟ್ರೈಸೆಪ್ಸ್ ಮತ್ತು ಕೋರ್‌ನ ಸ್ನಾಯುಗಳನ್ನು ಗುರಿಯಾಗಿಸುತ್ತವೆ, ಇದು ದೇಹದ ಮೇಲ್ಭಾಗದ ಶಕ್ತಿಯನ್ನು ಅಭಿವೃದ್ಧಿಪಡಿಸಲು ಅತ್ಯುತ್ತಮ ವ್ಯಾಯಾಮ. ಪ್ರತಿದಿನ ಪುಶ್ ಅಪ್ ಮಾಡಿದ್ರೆ, ಮಸಲ್ ಸ್ಟ್ರಾಂಗ್ ಆಗುತ್ತೆ. ಅಷ್ಟೇ ಅಲ್ಲ ನಿಮ್ಮ ದೇಹದ ತೂಕವನ್ನು ಎತ್ತುವ ಮತ್ತು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತೆ, ಜೊತೆಗೆ ನಿಮ್ಮ ದೇಹಕ್ಕೆ ಶೇಪ್ ಬರುತ್ತೆ.
ಹೃದಯರಕ್ತನಾಳದ ಆರೋಗ್ಯ (Cardiovascular Health)
ಪುಶ್-ಅಪ್ ಗಳನ್ನು ಶಕ್ತಿ-ನಿರ್ಮಾಣ ವ್ಯಾಯಾಮ ಎಂದು ಕರೆಯಲಾಗಿದ್ದರೂ, ಅವುಗಳನ್ನು ಮಧ್ಯಮದಿಂದ ಹೆಚ್ಚಿನ ತೀವ್ರತೆಯಲ್ಲಿ ಮಾಡೋದ್ರಿಂದ ಹೃದಯರಕ್ತನಾಳಕ್ಕೆ ಹೆಚ್ಚಿನ ಪ್ರಯೋಜನ ಸಿಗುತ್ತೆ. ಪುಶ್ ಅಪ್ ವ್ಯಾಯಾಮವು ಹೆಚ್ಚಿನ ಮಸಲ್ ಗ್ರೂಪ್ ಗಳನ್ನು ಸಕ್ರಿಯವಾಗಿಸೋದರಿಂದ, ಇದು ಸ್ನಾಯುಗಳಿಗೆ ಆಮ್ಲಜನಕವನ್ನು ತಲುಪಿಸಲು ಹೃದಯವು ಹೆಚ್ಚಿನ ರಕ್ತವನ್ನು ಪಂಪ್ ಮಾಡಲು ಉತ್ತೇಜಿಸುತ್ತದೆ. ಇದರಿಂದ ಕ್ರಮೇಣವಾಗಿ ಹೃದಯ ಆರೋಗ್ಯ, ಹೃದಯ ರಕ್ತನಾಳದ ಸಮಸ್ಯೆ ನಿವಾರಣೆಯಾಗುತ್ತೆ.
ದೇಹದ ಭಂಗಿ ಉತ್ತಮವಾಗುತ್ತೆ (Improved Posture)
ಪುಶ್-ಅಪ್ ಗಳು ದೇಹದ ಪ್ರಮುಖ ಸ್ನಾಯುಗಳನ್ನು ಬಲಪಡಿಸುತ್ತವೆ, ಇದು ಸರಿಯಾದ ದೇಹದ ಭಂಗಿಯನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ವ್ಯಾಯಾಮ ಮಾಡೋದರಿಂದ ಬೆನ್ನು ಹುರಿ ನೇರವಾಗುತ್ತದೆ ಮತ್ತು ಇದರಿಂದ ಬೆನ್ನು ಬಾಗುವುದಿಲ್ಲ. ನಿಯಮಿತವಾಗಿ ಪುಶ್-ಅಪ್ ಗಳನ್ನು ಮಾಡೋದ್ರಿಂದ ಕಳಪೆ ಭಂಗಿಯನ್ನು ಸರಿಪಡಿಸಲು, ಬೆನ್ನುನೋವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಬೆನ್ನುಮೂಳೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಭುಜ, ಮೊಣಕೈಗಳಿಗೆ ಬೆಂಬಲ
ನಿಮ್ಮ ಭುಜಗಳು, ಮೊಣಕೈಗಳು ಮತ್ತು ಮಣಿಕಟ್ಟುಗಳ ಸುತ್ತಲಿನ ಸ್ನಾಯುಗಳು ಪುಶ್-ಅಪ್ ಸಮಯದಲ್ಲಿ ಸಕ್ರಿಯವಾಗಿರುತ್ತವೆ. ಇದರಿಂದಾಗಿ ಜಾಯಿಂಟ್ ಗಳು (Joint Support and Stability)ಬಲಶಾಲಿಯಾಗುತ್ತವೆ, ಅವುಗಳಿಗೆ ಬೆಂಬಲ ಸಿಗುತ್ತವೆ. ಜೊತೆಗೆ ಗಾಯಗಳನ್ನು ತಡೆಗಟ್ಟಲು ಮತ್ತು ಇತರ ದೈಹಿಕ ಚಟುವಟಿಕೆಗಳಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಇದು ಸಹಾಯ ಮಾಡುತ್ತೆ.
ಮೆಟಾಬಾಲಿಸಂ ಹೆಚ್ಚುತ್ತೆ (Boosted Metabolic Rate)
ಪುಶ್-ಅಪ್ ಗಳಂತಹ ಶಕ್ತಿ ತರಬೇತಿ ವ್ಯಾಯಾಮಗಳು ಸ್ನಾಯುಗಳು ಸ್ಟ್ರಾಂಗ್ ಆಗುವಂತೆ ಮಾಡುತ್ತದೆ. ಇದು ನಿಮ್ಮ ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಚಯಾಪಚಯವನ್ನು ಹೊಂದಿರುವುದು ಎಂದರೆ ನಿಮ್ಮ ದೇಹವು ವಿಶ್ರಾಂತಿಯಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ, ತೂಕ ನಿರ್ವಹಣೆ ಮತ್ತು ಕೊಬ್ಬು ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದರ್ಥ.
ಮಾನಸಿಕ ಆರೋಗ್ಯ ಉತ್ತಮವಾಗುತ್ತೆ (Enhanced Mental Health)
ಪುಶ್-ಅಪ್ ಸೇರಿದಂತೆ ವ್ಯಾಯಾಮವು ಮಾನಸಿಕವಾಗಿ ಆರೋಗ್ಯವಾಗಿರಲು ಸಹಾಯ ಮಾಡುವಂತಹ ಎಂಡಾರ್ಫಿನ್ಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ನಿಯಮಿತ ದೈಹಿಕ ಚಟುವಟಿಕೆಯು ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಪ್ರತಿದಿನ ಪುಶ್-ಅಪ್ ಗಳನ್ನು ಮಾಡಲು ಅಗತ್ಯವಿರುವ ಶಿಸ್ತು ಮತ್ತು ಬದ್ಧತೆಯು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಎಚ್ಚರಿಕೆಯಿಂದ ಮಾಡಿ
ಪ್ರತಿದಿನ ಪುಶ್-ಅಪ್ (pushups) ಮಾಡುವುದರಿಂದ ಹಲವಾರು ಪ್ರಯೋಜನಗಳಿದ್ದರೂ, ಇದನ್ನು ಎಚ್ಚರಿಕೆಯಿಂದ ಮಾಡಬೇಕಾದ್ದು ಮುಖ್ಯ. ವಿಶ್ರಾಂತಿ ಇಲ್ಲದೇ ಹೆಚ್ಚು ಬಾರಿ ಪುಶ್ ಅಪ್ ಮಾಡೋದರಿಂದ ಟೆಂಡಿನಿಟಿಸ್ ಅಥವಾ ಸ್ನಾಯು ಒತ್ತಡಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಹೆಚ್ಚು ಒತ್ತಡಕ್ಕೆ ಒಳಗಾಗದೆ ಆರಾಮವಾಗಿ ಪುಶ್ ಅಪ್ ಮಾಡಿ.