ಗರ್ಭಾವಸ್ಥೆಯಲ್ಲಿ ಫಾಸ್ಟ್ ಫುಡ್ ಸೇವಿಸಿದ್ರೆ… ಹುಟ್ಟೋ ಮಕ್ಕಳಲ್ಲಿ ಸಮಸ್ಯೆ ಬರುತ್ತಂತೆ!

First Published | Feb 22, 2024, 7:00 AM IST

ಗರ್ಭಾವಸ್ಥೆಯಲ್ಲಿ ಮಹಿಳೆಯರು ಅಲ್ಟ್ರಾ ಪ್ರೊಸೆಸ್ಡ್ ಮತ್ತು ಫಾಸ್ಟ್ ಫುಡ್ ಸೇವಿಸುವುದನ್ನು ತಪ್ಪಿಸಬೇಕು. ಈ ಆಹಾರಗಳಲ್ಲಿ ಅನಾರೋಗ್ಯಕರ ಕೊಬ್ಬುಗಳು (Unhealthy Cholesterol) ಹೆಚ್ಚಿನ ಸಕ್ಕರೆ (Excess Sugar) ಮತ್ತು ಉಪ್ಪು (Salt) ಹೆಚ್ಚಾಗಿರುತ್ತೆ. ಇದು ಮಗುವಿನ ಬೆಳವಣಿಗೆ ಮೇಲೂ ಪರಿಣಾಮ ಬೀರುತ್ತದೆ. 

ನೀವು ಗರ್ಭಿಣಿಯಾಗಿದ್ದರೆ, ಔಷಧಿಗಳ ಆರೈಕೆಯ ಜೊತೆಗೆ ಆಹಾರದ ಬಗ್ಗೆ ಕಾಳಜಿ ವಹಿಸುವುದು ತುಂಬಾನೆ ಮುಖ್ಯ. ನಿಮ್ಮೊಂದಿಗೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸರಿಯಾದ ಆಹಾರವನ್ನು ತೆಗೆದುಕೊಳ್ಳುವುದು ಅವಶ್ಯಕ. ಪ್ರೆಗ್ನೆಂಟ್ ಆಗಿದ್ರೆ ಮಹಿಳೆಯರು ಹುಳಿ, ಸಿಹಿ ಮತ್ತು ಮಸಾಲೆಯುಕ್ತ ವಸ್ತುಗಳನ್ನು ಹಂಬಲಿಸೋದಕ್ಕೆ ಆರಂಭಿಸುತ್ತಾರೆ. ಆದರೆ ದೇಹವು ಅನೇಕ ಸಮಸ್ಯೆಗಳಿಂದ ಬಳಲುವಂತೆ ಮಾಡುವ ಕೆಲವು ಆಹಾರಗಳಿವೆ. ಎನ್ವಿರಾನ್ಮೆಂಟಲ್ ಇಂಟರ್ನ್ಯಾಷನಲ್ ಜರ್ನಲ್‌ಗಳ ಸಂಶೋಧನೆಯ ಪ್ರಕಾರ, ಗರ್ಭಾವಸ್ಥೆಯಲ್ಲಿ ಮಹಿಳೆಯರು (pregnant women) ಅಲ್ಟ್ರಾ-ಪ್ರೊಸೆಸ್ಡ್ ಮತ್ತು ಫಾಸ್ಟ್ ಫುಡ್ ಸೇವನೆಯನ್ನು ತಪ್ಪಿಸಬೇಕು.  ಇಲ್ಲಾಂದ್ರೆ ಮಗುವಿಗೆ ಹಾನಿಯಾಗುತ್ತೆ.

ಗರ್ಭಾವಸ್ಥೆಯಲ್ಲಿ ಅಲ್ಟ್ರಾ-ಪ್ರೋಸೆಸ್ಡ್ ಮತ್ತು ಫಾಸ್ಟ್ ಫುಡ್ ಸೇವನೆ ಏಕೆ ಹಾನಿಕಾರಕ?  
ಗರ್ಭಾವಸ್ಥೆಯಲ್ಲಿ ಆಹಾರದಲ್ಲಿ ಸಮತೋಲಿತ (Balanced Food) ಮತ್ತು ಪೌಷ್ಟಿಕ ಆಹಾರವನ್ನು (Nutritious Food) ಸೇವಿಸೋದು ಮುಖ್ಯ. ಆದರೆ ಅಲ್ಟ್ರಾ-ಪ್ರೋಸೆಸ್ಡ್ ಮತ್ತು ಫಾಸ್ಟ್ ಫುಡ್ ತಿನ್ನುವುದು ದೇಹಕ್ಕೆ ಅನೇಕ ರೀತಿಯ ಹಾನಿಯನ್ನುಂಟು ಮಾಡುತ್ತದೆ. ಎನ್ವಿರಾನ್ಮೆಂಟಲ್ ಇಂಟರ್ನ್ಯಾಷನಲ್ ಜರ್ನಲ್ನಲ್ಲಿನ ಅಧ್ಯಯನದ ಪ್ರಕಾರ, ಈ ಆಹಾರಗಳಲ್ಲಿ ಕಂಡುಬರುವ ಥಾಲೇಟ್ (Phthalates) ರಾಸಾಯನಿಕವನ್ನು ಪ್ಲಾಸ್ಟಿಕ್ ಸರಕುಗಳನ್ನು ತಯಾರಿಸಲು ಬಳಸಲಾಗುತ್ತದೆ.  

Tap to resize

ಪ್ಲಾಸ್ಟಿಕ್ ಸರಕುಗಳನ್ನು ಬಲಪಡಿಸುವುದು(durability of plastic) ಥಾಲೇಟ್ ರಾಸಾಯನಿಕದ ಉದ್ದೇಶ. ಸಂಶೋಧನೆಯ ಪ್ರಕಾರ, ನೀವು ಗರ್ಭಾವಸ್ಥೆಯಲ್ಲಿ ಫಾಸ್ಟ್ ಫುಡ್ ಸೇವಿಸಿದರೆ ಈ ರಾಸಾಯನಿಕಗಳು ಗರ್ಭಾವಸ್ಥೆಯಲ್ಲಿ ರಕ್ತಪ್ರವಾಹವನ್ನು ಪ್ರವೇಶಿಸುತ್ತವೆ ಮತ್ತು ಪ್ಲೆಕ್ಟೋ ಮೂಲಕ ಭ್ರೂಣದ ರಕ್ತಪ್ರವಾಹವನ್ನು ತಲುಪುತ್ತವೆ.
 

ಗರ್ಭಾವಸ್ಥೆಯಲ್ಲಿ ಥಾಲೇಟ್ ಸೇವನೆಯು ಭ್ರೂಣದಲ್ಲಿ ಆಕ್ಸಿಡೇಟಿವ್ ಒತ್ತಡ (Oxidative Pressure) ಮತ್ತು ಉರಿಯೂತದ ಸಮಸ್ಯೆಯನ್ನು (Inflammation) ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಈ ಕಾರಣದಿಂದಾಗಿ, ಮಗುವು ಕಡಿಮೆ ಜನನ ತೂಕ, ಅವಧಿಪೂರ್ವ ಜನನ, ಆಟಿಸಂ (Autism) ಮತ್ತು ಹೈಪರ್ಆಕ್ಟಿವಿಟಿ (Hyper Activity) ಮೊದಲಾದ ಮಾನಸಿಕ ಆರೋಗ್ಯ (mental health problem) ಸಮಸ್ಯೆಗಳನ್ನು ಸಹ ಹೊಂದಬಹುದು. ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.ಹಾಗಾಗಿ ಗರ್ಭಾವಸ್ಥೆಯಲ್ಲಿ, ಈ ರೀತಿಯ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ.

ಗರ್ಭಾವಸ್ಥೆಯಲ್ಲಿ ಫಾಸ್ಟ್ ಫುಡ್ ತಿನ್ನುವುದರಿಂದ ಉಂಟಾಗುವ ಅಡ್ಡಪರಿಣಾಮಗಳು 

ಪೌಷ್ಠಿಕಾಂಶದ ಕೊರತೆ
ಫಾಸ್ಟ್ ಫುಡ್ (fast food) ಸೇವನೆಯು ಮಗುವಿಗೆ ಒಟ್ಟಾರೆ ಬೆಳವಣಿಗೆಗೆ ಬೇಕಾದ ವಿಟಮಿನ್ ಗಳು, ಖನಿಜಗಳು ಮತ್ತು ಫೈಬರ್ ಕೊರತೆಯನ್ನು ಹೆಚ್ಚಿಸುತ್ತದೆ. ಇದು ಕಡಿಮೆ ಜನನ ತೂಕ, ಬೆಳವಣಿಗೆಯ ವಿಳಂಬ ಮತ್ತು ಜನನ ದೋಷಗಳಂತಹ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತದೆ. ದೇಹದಲ್ಲಿ ಪೌಷ್ಠಿಕಾಂಶದ ಕೊರತೆಯನ್ನು ನೀಗಿಸಲು, ಆಹಾರದಲ್ಲಿ ಪೋಷಕಾಂಶಗಳನ್ನು ಸೇರಿಸುವುದು ಅವಶ್ಯಕ.
 

ಗರ್ಭಾವಸ್ಥೆಯ ಮಧುಮೇಹ
ಫಾಸ್ಟ್ ಫುಡ್ ನಲ್ಲಿ ಹೆಚ್ಚಿನ ಮಟ್ಟದ ಕಾರ್ಬೋಹೈಡ್ರೇಟ್ ಗಳು ಮತ್ತು ಸಕ್ಕರೆ ಇರೋದರಿಂದ ಇದು ಗರ್ಭಾವಸ್ಥೆಯ ಮಧುಮೇಹಕ್ಕೆ (pregnancy diabetes) ಮುಖ್ಯ ಕಾರಣವೆಂದು ತಿಳಿದು ಬಂದಿದೆ. ತಜ್ಞರ ಪ್ರಕಾರ, ಇದು ತಾಯಿಯ ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೇ, ಮ್ಯಾಕ್ರೋಸೋಮಿಯಾ ಅಂದರೆ ಮಗುವಿನಲ್ಲಿ ಜನನ ತೂಕದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಅತಿಯಾದ ತೂಕ ಹೆಚ್ಚಳ (Over Weight)
ಹೆಚ್ಚಿನ ಪ್ರಮಾಣದ ಕ್ಯಾಲೊರಿಗಳು ತೂಕ ಹೆಚ್ಚಾಗಲು (over weight) ಮುಖ್ಯ ಕಾರಣವಾಗಿದೆ. ಫಾಸ್ಟ್ ಫುಡ್ ಹೆಚ್ಚಿನ ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ, ಗರ್ಭಾವಸ್ಥೆಯಲ್ಲಿ ಅತಿಯಾದ ತೂಕ ಹೆಚ್ಚಾಗುವ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದು ಪ್ರಿಕ್ಲಾಂಪ್ಸಿಯಾ, ಗರ್ಭಾವಸ್ಥೆಯ ಮಧುಮೇಹ ಮತ್ತು ಸಿಸೇರಿಯನ್ ಹೆರಿಗೆಯಂತಹ ಅಪಾಯಗಳನ್ನು ಉಂಟುಮಾಡುತ್ತದೆ.
 

ಜೀರ್ಣಕಾರಿ ಸಮಸ್ಯೆಗಳು (digestive problem)
ಫಾಸ್ಟ್ ಫುಡ್ ನಲ್ಲಿರುವ ಹೆಚ್ಚಿನ ಪ್ರಮಾಣದ ಕೊಬ್ಬು (Excess cholesterol) ಮತ್ತು ಸೋಡಿಯಂ (Sodium) ಜೀರ್ಣ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ, ಗರ್ಭಾವಸ್ಥೆಯಲ್ಲಿ ಅಜೀರ್ಣ ಮತ್ತು ಮಲಬದ್ಧತೆಯ (Constipation) ಸಮಸ್ಯೆ ಹೆಚ್ಚಾಗುತ್ತದೆ. ಅಂತಹ ಸಮಸ್ಯೆಗಳನ್ನು ತಪ್ಪಿಸಲು, ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು.

ಭ್ರೂಣದ ಆರೋಗ್ಯದ ಮೇಲೆ ಪರಿಣಾಮ
ಗರ್ಭಾವಸ್ಥೆಯಲ್ಲಿ ನಿಯಮಿತವಾಗಿ ಫಾಸ್ಟ್ ಫುಡ್ (fast food) ಸೇವಿಸುವ ಮಹಿಳೆಯರ ದೇಹ ಒಮೆಗಾ.3 ಕೊಬ್ಬಿನಾಮ್ಲಗಳು, ಫೋಲೇಟ್ ಮತ್ತು ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳ ಕೊರತೆಯನ್ನು ಅನುಭವಿಸಲು ಪ್ರಾರಂಭಿಸುತ್ತದೆ. ಇದು ಭ್ರೂಣದ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗರ್ಭಿಣಿಯರು ಜೀವಸತ್ವಗಳು (Vitamins), ಖನಿಜಗಳು (Minerals), ಫೈಬರ್ (Fiber) ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಆಹಾರ ಸೇವಿಸಬೇಕು.ಇದಕ್ಕಾಗಿ, ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೋಟೀನ್ಸ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಆಹಾರದಲ್ಲಿ ಸೇವಿಸಬೇಕು.

ಯಾವ ಆಹಾರಗಳನ್ನು ತಿನ್ನಬಾರದು?
ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು, ಕಚ್ಚಾ ಅಥವಾ ಬೇಯಿಸದ ಮಾಂಸ, ಮೊಟ್ಟೆ, ಮೀನು, ಕಚ್ಚಾ ಮೀನು,ಸ್ಮೋಕ್ಡ್ ಸೀ ಫುಡ್ (Sea Food), ತೊಳೆಯದ ಹಣ್ಣುಗಳು ಮತ್ತು ತರಕಾರಿಗಳು, ಅತಿಯಾದ ಕೆಫೀನ್ ಮತ್ತು ಆಲ್ಕೋಹಾಲ್ (alcohol) ಸೇವನೆ ತಪ್ಪಿಸಬೇಕು.  

Latest Videos

click me!