ಚಳಿಗಾಲದಲ್ಲಿ ಈ ರೀತಿ ಸ್ನಾನ ಮಾಡಿದ್ರೆ ಹಾರ್ಟ್ ಅಟ್ಯಾಕ್ ಆಗುತ್ತಂತೆ ಹುಷಾರ್ !

First Published | Dec 29, 2024, 5:14 PM IST

ಸ್ನಾನವು ದೇಹದಿಂದ ಕೊಳೆಯನ್ನು ತೆಗೆದುಹಾಕುತ್ತದೆ ಮತ್ತು ತಾಜಾತನವನ್ನು ನೀಡುತ್ತದೆ. ಆದರೆ ಚಳಿಯಲ್ಲಿ ತಪ್ಪಾಗಿ ಸ್ನಾನ ಮಾಡುವುದರಿಂದ ಹೃದಯಾಘಾತದ ಅಪಾಯವೂ ಹೆಚ್ಚಾಗುತ್ತೆ ಎನ್ನುತ್ತಾರೆ ವೈದ್ಯರು. 
 

bathing in winter

ಚಳಿಗಾಲದಲ್ಲಿ ಹೃದಯಾಘಾತ (Heart attack in winter)ಪ್ರಕರಣಗಳು ಬಹಳ ಸಾಮಾನ್ಯ. ಈ ಅನೇಕ ಸಂದರ್ಭಗಳಲ್ಲಿ, ಸ್ನಾನಗೃಹದೊಳಗೆ ಹೃದಯಾಘಾತ ಸಂಭವಿಸುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ. ಇಲ್ಲಿವರೆಗೆ ಸಾವನ್ನಪ್ಪಿದ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಆದರೆ ಸ್ನಾನ ಮಾಡುವಾಗ ನೀವು ಈ ತಪ್ಪನ್ನು ಮಾಡದೇ ಇದ್ದರೆ, ಜೀವ ಉಳಿಸಬಹುದು. ಸುಮಾರು 90% ದಷ್ಟು ಜನರು ತಪ್ಪಾಗಿ ಸ್ನಾನ ಮಾಡುತ್ತಾರೆ. ಇದೇ ಕಾರಣದಿಂದ ಹೆಚ್ಚಾಗಿ ಹೃದಯಾಘಾತ ಸಂಭವಿಸುತ್ತೆ. 
 

ಶೀತದಲ್ಲಿ, ರಕ್ತನಾಳಗಳು ಕುಗ್ಗುತ್ತವೆ ಮತ್ತು ರಕ್ತವನ್ನು ಪಂಪ್ ಮಾಡಲು ಹೃದಯವು ಶ್ರಮಿಸಬೇಕಾಗುತ್ತದೆ. ಇದು ಹೃದಯದ ಮೇಲೆ ಒತ್ತಡವನ್ನು (pressure on heart) ಹೆಚ್ಚಿಸುತ್ತದೆ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು. ಕೊಲೆಸ್ಟ್ರಾಲ್ ಸಮಸ್ಯೆಗಳು ಈ ಅಪಾಯವನ್ನು ಹೆಚ್ಚಿಸುತ್ತವೆ.
 

Tap to resize

ಈ ಋತುವಿನಲ್ಲಿ ಸ್ನಾನ ಮಾಡುವಾಗ ತಪ್ಪು ಮಾಡುವುದು ವಿಪರೀತವಾಗಿರುತ್ತದೆ. ತಜ್ಞರೊಬ್ಬರು ಬಿಸಿನೀರು ಸಹ ಈ ಅಪಾಯದಿಂದ ಉಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ತಣ್ಣೀರು ಅಥವಾ ಬಿಸಿ ನೀರಿನಿಂದ ಸ್ನಾನ ಮಾಡಿ, ವಿಧಾನವು ಸರಿಯಾಗಿಲ್ಲದಿದ್ದರೆ ಅಪಾಯವು ಹೆಚ್ಚಾಗುವುದು ಖಚಿತ ಎಂದಿದ್ದಾರೆ. 
 

ತಲೆಯ ಮೇಲೆ ನೀರು ಸುರಿಯುವ ತಪ್ಪು
ಸಾಮಾನ್ಯವಾಗಿ ಸ್ನಾನ ಮಾಡುವಾಗ, ಒಬ್ಬ ವ್ಯಕ್ತಿಯು ಮೊದಲು ತನ್ನ ತಲೆಯ ಮೇಲೆ ನೀರನ್ನು ಸುರಿಯುತ್ತಾನೆ. ಇಲ್ಲಿಯೇ ತಪ್ಪು ಸಂಭವಿಸುತ್ತದೆ. ಸ್ನಾನ ಮಾಡುವ ಜನರು ಹೆಚ್ಚಾಗಿ ಅದೇ ತಪ್ಪನ್ನು ಮಾಡುತ್ತಾರೆ. ತಲೆಗೆ ನೀರು ಹಾಕುವುದರಿಂದ ಹೃದಯಾಘಾತದ ಅಪಾಯವನ್ನು ಅನೇಕ ಪಟ್ಟು ಹೆಚ್ಚಿಸುತ್ತದೆ.

ಸ್ನಾನ ಮಾಡಲು ಉತ್ತಮ ಮಾರ್ಗ
ನೀರು ತಂಪಾಗಿದೆ (cold water)ಅಥವಾ ಬಿಸಿಯಾಗಿದ್ದರೂ ಚಳಿಗಾಲದಲ್ಲಿ ತಕ್ಷಣವೇ ತಲೆಯ ಮೇಲೆ ನೀರನ್ನು ಸುರಿಯಬಾರದು.
ಮೊದಲಿಗೆ, ಪಾದಗಳಿಗೆ ಸ್ವಲ್ಪ ನೀರು ಹಾಕಿ ಉಜ್ಜಿ.
ಇದರ ನಂತರ, ಹೊಟ್ಟೆಯ ಮೇಲೆ ನೀರನ್ನು ಹಾಕಿ ಉಜ್ಜಿ, ನಂತರ ಎದೆಯ ಮೇಲೆ ನೀರು ಹಾಕಿ.
ಇದರ ನಂತರ, ತಲೆಯ ಮೇಲೆ ನೀರನ್ನು ಸುರಿಯಬೇಕು.

ಈ ರೀತಿಯಾಗಿ ಜೀವವನ್ನು ಉಳಿಸಲಾಗುತ್ತದೆ
ಚಳಿಗಾಲದಲ್ಲಿ ಸ್ನಾನ (winter bath) ಮಾಡುವ ಈ ವಿಧಾನವು ದೇಹದೊಳಗೆ ಒಂದು ರೀತಿಯ ಥರ್ಮೋಸ್ಟಾಟ್ ಅನ್ನು ಸೃಷ್ಟಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದು ದೇಹದ ಉಷ್ಣತೆಯನ್ನು ಸಾಮಾನ್ಯವಾಗಿರಿಸುತ್ತದೆ. ಥರ್ಮೋಸ್ಟಾಟ್ ಎಂಬುದು ತಾಪಮಾನವನ್ನು ನಿಯಂತ್ರಿಸಲು ಬಳಸುವ ಸಾಧನವಾಗಿದೆ. 

ಈ ಜನರು ಹೆಚ್ಚು ಜಾಗರೂಕರಾಗಿರಬೇಕು
ಅಧಿಕ ಕೊಲೆಸ್ಟ್ರಾಲ್ ಅಥವಾ ಮಧುಮೇಹ (diabetes) ಹೊಂದಿರುವ ಜನರು ಹೆಚ್ಚು ಜಾಗರೂಕರಾಗಿರಬೇಕು. ಪಾದಗಳಲ್ಲಿ ನೋವು, ಆಯಾಸ, ಶೀತದಲ್ಲಿ ಎದೆ ನೋವು ಮುಂತಾದ ಸಮಸ್ಯೆಗಳು ಹೃದಯದ ಕಳಪೆ ಆರೋಗ್ಯವನ್ನು ಸೂಚಿಸುತ್ತವೆ. ಅದರ ನಂತರ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ.

Latest Videos

click me!