Bad Habits : ಈ ಅಭ್ಯಾಸಗಳಿದ್ರೆ ರೋಗಗಳು ಬೇಗ ಅಟಕಾಯಿಸುತ್ತೆ

First Published | Nov 18, 2021, 2:02 PM IST

ಪ್ರತಿದಿನ ನಾವು ಮಾಡುವ ಕೆಲಸ ನಮ್ಮ ಆರೋಗ್ಯದ (health)  ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ.   ದೈನಂದಿನ ಕೆಲವು ಅಭ್ಯಾಸಗಳು ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಹುದು. ಯಾವ ಹವ್ಯಾಸಗಳನ್ನು ನೀವು ತಕ್ಷಣ ಬದಲಾಯಿಸಬೇಕು ಎಂಬುದನ್ನು ಕಂಡುಕೊಂಡು, ಅದನ್ನು ಬದಲಾಯಿಸುವುದು ಮುಖ್ಯ. ಇಲ್ಲವಾದರೆ ಸಮಸ್ಯೆಗಳು ಹೆಚ್ಚಾಗುತ್ತೆ ಜೋಕೆ. 

ಆರೋಗ್ಯಕ್ಕೆ ಹಾನಿಮಾಡುವ ಅನೇಕ ದೈನಂದಿನ ಅಭ್ಯಾಸಗಳನ್ನು ನಾವು ಹೊಂದಿದ್ದೇವೆ. ನೀವು ಈ ಅಭ್ಯಾಸಗಳನ್ನು ಬದಲಾಯಿಸದಿದ್ದರೆ ಮತ್ತು ನಿರ್ಲಕ್ಷಿಸಿದರೆ, ಅದು ಅನೇಕ ಗಂಭೀರ ರೋಗಗಳಿಗೆ (serious problem) ಕಾರಣವಾಗಬಹುದು. ಈ ಅಭ್ಯಾಸಗಳಿಂದಾಗಿ ನೀವು ಯಾವಾಗಲೂ ಅನಾರೋಗ್ಯಕ್ಕೆ ಒಳಗಾಗುತ್ತೀರಿ. ನೀವು ತಕ್ಷಣ ಬದಲಾಯಿಸಬೇಕಾದ ಅಭ್ಯಾಸಗಳು ಯಾವುವು ಎಂಬುದನ್ನು ತಿಳಿಯಿರಿ.

ಅತಿಯಾಗಿ ತಿನ್ನುವುದು (over eating), ಕೆಲವೊಂದು ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ವಿಸರ್ಜಿಸುವ ಸಮಸ್ಯೆಗಳನ್ನು ಸೇರಿ ಹಲವಾರು ಅರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ನಿಮಗೆ ಹಾನಿಮಾಡಬಹುದು. ಆದುದರಿಂದ ಈ ಅಭ್ಯಾಸಗಳ ಬಗ್ಗೆ ಅರಿತುಕೊಂಡು ಅವುಗಳನ್ನು ದೂರ ಮಾಡುವುದು ಅತ್ಯುತ್ತಮ ಉಪಾಯವಾಗಿದೆ. 

Latest Videos


ಹೆಚ್ಚು ನೀರು ಕುಡಿಯಿರಿ (drinking more water): ಕುಡಿಯುವ ನೀರು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ, ಪ್ರತಿದಿನ ಎಂಟು ಲೋಟ ನೀರು ಕುಡಿಯಬೇಕು ಎಂದು ಸಹ ಹೇಳಲಾಗುತ್ತದೆ. ಆದರೆ ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಕಡಿಮೆ ಅಂತರದಲ್ಲಿ ಆಗಾಗ್ಗೆ ನೀರು ಕುಡಿಯಬೇಡಿ. ಅಲ್ಲದೆ ಹೆಚ್ಚಿನ ಪ್ರಮಾಣದ ನೀರು ಸೇವಿಸುವುದು ಸಹ ಆರೋಗ್ಯಕ್ಕೆ ಹಾನಿಕಾರಕವಾಗಿದೆ. 

ಗಂಟೆಗಳ ಕಾಲ ಟಿವಿ ನೋಡುವುದು (watching tv): ಗಂಟೆಗಟ್ಟಲೆ ಟಿವಿ ನೋಡುವುದು ಆರೋಗ್ಯಕ್ಕೆ ಹಾನಿಮಾಡುತ್ತದೆ. ಇದು ನಿಮ್ಮನ್ನು ತಾಲೀಮುಗಳಿಂದ ದೂರವಿರಿಸುತ್ತದೆ ಮತ್ತು ವಿವಿಧ ರೋಗಗಳಿಗೆ ಕಾರಣವಾಗುತ್ತದೆ. ತುಂಬಾ ಹೊತ್ತು ಟಿವಿ ನೋಡಿಕೊಂಡಿದ್ದರೆ , ನಮ್ಮ ದೇಹಕ್ಕೆ ಚಾಲನೆ ಇರೋದಿಲ್ಲ. ಇದರಿಂದ ಒಂದೇ ಸ್ಥಿತಿಯಲ್ಲಿದ್ದು, ದೇಹಕ್ಕೆ ಅನೇಕ ರೋಗಗಳು ಅಂಟಿಕೊಳ್ಳುತ್ತವೆ. 

ಮರ ಅಥವಾ ಟೂತ್ ಪಿಕ್ ನಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುವುದು: ಮರ ಅಥವಾ ಟೂತ್ ಪಿಕ್ ನಿಂದ (tooth pick) ಹಲ್ಲುಗಳನ್ನು ಸ್ವಚ್ಛಗೊಳಿಸುವುದು ನಿಮಗೆ ಅಪಾಯಕಾರಿ. ಇದರಿಂದ ಸೋಂಕು ಉಂಟಾಗುವ ಅಪಾಯವು ಹೆಚ್ಚಾಗುತ್ತದೆ. ಮರದಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುವುದರಿಂದ ಒಸಡುಗಳು ಹಾನಿಗೊಳಗಾಗುತ್ತವೆ ಮತ್ತು ನಿಮ್ಮ ಹಲ್ಲುಗಳಿಗೆ ಹಾನಿಯಾಗಬಹುದು. ಆದುದರಿಂದ ಇವುಗಳನ್ನು ಅವಾಯ್ಡ್ ಮಾಡಿ. 

ವ್ಯಾಯಾಮ ಮಾಡದೇ ಇರುವುದು ಸಹ ಆರೋಗ್ಯಕ್ಕೆ ಹಾನಿ : ಪ್ರತಿದಿನ ಅರ್ಧ ಗಂಟೆಗಳ ಕಾಲ ವ್ಯಾಯಾಮ (exercise)ಮಾಡಬೇಕೆಂದು ಹೇಳಲಾಗುತ್ತದೆ. ಸರಿಯಾಗಿ ವ್ಯಾಯಾಮ ಮಾಡದಿದ್ದರೆ ಈ ಅಭ್ಯಾಸವು ನಿಮಗೆ ಹಾನಿ ಮಾಡುತ್ತದೆ. ಇದರಿಂದ ರೋಗಗಳು ಬಂದು ನಿಮ್ಮ ವಯಸ್ಸನ್ನು ಕಡಿಮೆ ಮಾಡಬಹುದು.  ಪ್ರತಿದಿನ ಕನಿಷ್ಠ 30 ನಿಮಿಷಗಳ ತಾಲೀಮು ಅಥವಾ ವ್ಯಾಯಾಮ ಮಾಡಿ. ಅಥವಾ ನಡೆಯಿರಿ, ಸೂರ್ಯ ನಮಸ್ಕಾರ ಮಾಡುವುದು ಉತ್ತಮ. 

ಮೂಗಿನ ಕೂದಲನ್ನು  ((nose hair) ತೆಗೆದುಹಾಕುವುದು: ಸುಂದರವಾದ ಲುಕ್ ಗಾಗಿ ಜನರು ಮೂಗಿನ ಕೂದಲನ್ನು ತೆಗೆಯುತ್ತಾರೆ. ಇದು ನಿಮಗೆ ಹಾನಿ ಮಾಡಬಹುದು. ಮೂಗಿನ ಕೂದಲು ಅಪಾಯಕಾರಿ ವಸ್ತುಗಳನ್ನು ದೇಹದ ಒಳಗೆ ಪ್ರವೇಶಿಸದಂತೆ ತಡೆಯುತ್ತದೆ. ಇದನ್ನು ತೆಗೆದುಹಾಕುವುದರಿಂದ ಶ್ವಾಸಕೋಶದ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. 

ಉಗುರು ಕ್ಲೀನ್ (nail clean) ಮಾಡದೇ ಇರೋದು : ಇದು ನಿಮಗೆ ಸಿಲ್ಲಿ ಅನಿಸಬಹುದು. ಆದರೆ ವಾರಕ್ಕೆ ಒಮ್ಮೆಯಾದರೂ ಉಗುರುಗಳನ್ನು ಕ್ಲೀನ್ ಮಾಡೋದನ್ನು ಮರೆಯಬೇಡಿ. ಯಾಕೆಂದರೆ, ಉಗುರು ಬೇಗನೆ ಬೆಳೆಯುತ್ತದೆ. ಉಗುರಿನಲ್ಲಿ ಮಣ್ಣು, ಧೂಳು, ಮತ್ತಿತರ ವಸ್ತುಗಳು ಸೇರಿ ಅಲ್ಲಿ ಸೂಕ್ಷ್ಮ ಜೀವಿ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಇದರ ಜೊತೆ ಆಹಾರ ಸೇವಿಸಿದಾಗ ಅದು ನಮ್ಮ ದೇಹ ಸೇರಿ ಅರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತೆ. 

click me!