Published : Aug 06, 2025, 09:32 AM ISTUpdated : Aug 06, 2025, 02:26 PM IST
ಹೈ ಬಿಪಿ ಮತ್ತು ಹೃದಯ ಸಂಬಂಧಿ ಸಮಸ್ಯೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಾಗಿಬಿಟ್ಟಿದೆ. ಇದಕ್ಕೆ ಕಾರಣಗಳು ಹಲವಾರು ಇದ್ದರೂ, ಮನೆಯಲ್ಲಿಯೇ ಕೆಲವೊಂದು ಪರಿಹಾರ ಮಾಡಿಕೊಳ್ಳಬಹುದು. ಅದರ ಬಗ್ಗೆ ಇಲ್ಲಿ ತಿಳಿಸಿದ್ದಾರೆ ಡಾ.ಜೈನ್.
ಹೈ ಬಿಪಿ ಮತ್ತು ಹೃದಯಾಘಾತ ಇತ್ತೀಚಿನ ದಿನಗಳಲ್ಲಿ ಮಾಮೂಲು ಆಗಿಬಿಟ್ಟಿದೆ. ಅದರಲ್ಲಿಯೂ ಬಿಪಿ ಇಲ್ಲದ ಮನೆಯೇ ಇರುವುದು ಕಡಿಮೆ ಎನ್ನಿಸುವಷ್ಟರ ಮಟ್ಟಿಗೆ ಸ್ಥಿತಿ ಇದೆ. ಇದೇ ಕಾರಣಕ್ಕೆ ಬಿಪಿ ಮಾತ್ರೆಯ ದೊಡ್ಡ ಮಾರುಕಟ್ಟೆಯೇ ಕಾರ್ಯ ನಿರ್ವಹಿಸುತ್ತಿದೆ. ಆದರೆ ಈ ಮಾತ್ರೆಗಳನ್ನು ವರ್ಷಾನುಗಟ್ಟಲೆ ತೆಗೆದುಕೊಂಡರೆ ಅದು ಖಂಡಿತವಾಗಿಯೂ ನಮ್ಮ ಹೃದಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇನ್ನು ಬಿಪಿ ಹೆಚ್ಚಾದರೆ ಅದರಿಂದಲೂ ಸಮಸ್ಯೆ ಇದೆ.
29
ಬಿಪಿ ಮತ್ತು ಹೃದಯ ಸಂಬಂಧಿ ಸಮಸ್ಯೆ ಒಂದಕ್ಕೊಂದು ಪೂರಕ
ಅಷ್ಟಕ್ಕೂ ಬಿಪಿ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಒಂದಕ್ಕೊಂದು ಪೂರಕವಾಗಿಯೇ ಇವೆ. ಅಧಿಕ ರಕ್ತದೊತ್ತಡವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಹೈಬಿಪಿಯಿಂದ ಪ್ರಾಣ ಕಳೆದುಕೊಳ್ಳುವ ಸಂಭವ ಕೂಡಾ ಇರುತ್ತದೆ. ಹೈ ಬಿಪಿ , ಲೋ ಬಿಪಿ ಎರಡೂ ಹೃದಯಾಘಾತಕ್ಕೆ ಕಾರಣವಾಗುತ್ತೆ ಎನ್ನುವುದು ಕೂಡ ಸತ್ಯ.
39
ಚಿಕ್ಕ ವಯಸ್ಸಿನಲ್ಲಿಯೇ ಮುತ್ತಿಕ್ಕುವ ಸಮಸ್ಯೆ
ಇವು ಇಂದು-ನಿನ್ನೆಯ ಸಮಸ್ಯೆಗಳಲ್ಲ. ಆದರೆ ಒಂದು ಹಂತದ ವಯಸ್ಸಾದ ಮೇಲೆ ಇವೆಲ್ಲಾ ಅನಾರೋಗ್ಯಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಇದೀಗ, ಒತ್ತಡದ ಜೀವನಶೈಲಿ, ಕೆಟ್ಟ ಆಹಾರಪದ್ಧತಿ, ಹೆಚ್ಚುತ್ತಿರುವ ಮಾನಸಿಕ ಒತ್ತಡ ದಿಂದಾಗಿ ಬಿಪಿ ಮತ್ತು ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಜಾಸ್ತಿಯಾಗುತ್ತಿದೆ. ಚಿಕ್ಕವಯಸ್ಸಿನಲ್ಲಿಯೇ ಜನರು ಜೀವ ಕಳೆದುಕೊಳ್ಳುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
49
ಹೃದಯಾಘಾತ ಮತ್ತು ಬಿಪಿಗೆ ಕೆಲವೊಂದು ಮದ್ದು
ಆದರೆ, ವ್ಯಾಯಾಮ, ಧ್ಯಾನ, ಪ್ರಾಣಾಯಾಮ... ಯಾವುದೂ ಇಲ್ಲದಿದ್ದರೆ ಒಂದರ್ಧ ಗಂಟೆ ವಾಕಿಂಗ್ ಇವೆಲ್ಲವೂ ಮಾಡಿದರೆ ಬಿಪಿ, ಮಧುಮೇಹ, ಹೃದಯ ಸಂಬಂಧ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ತಡೆಗಟ್ಟಬಹುದು ಎಂದು ಇದಾಗಲೇ ಸಾಕಷ್ಟು ವೈದ್ಯರು ಹೇಳಿದ್ದಾರೆ. ಇದರ ಹೊರತಾಗಿಯೂ ಬಿಪಿ ಮತ್ತು ಹೃದಯ ಸಂಬಂಧ ತೊಂದರೆ ಕಡಿಮೆ ಮಾಡಿಕೊಳ್ಳಲು ಕೆಲವೊಂದು ಹೋಮ್ ರೆಮಿಡಿ ಹೇಳಿದ್ದಾರೆ ಖ್ಯಾತ ಆಯುರ್ವೇದ ವೈದ್ಯರಾಗಿರುವ ಡಾ.ಆರ್.ಆರ್. ಜೈನ್.
59
ಬೀಟ್ರೂಟ್-ಕ್ಯಾರೆಟ್ ಜ್ಯೂಸ್
ವೈದ್ಯರು ಹೇಳಿರುವುದು ಏನೆಂದರೆ: ಒಂದು ಬೀಟ್ರೂಟ್, ಒಂದು ಕ್ಯಾರೆಟ್ ಅದನ್ನು ಚೆನ್ನಾಗಿ ತುರಿದು ಒಂದು ಲೋಟ ನೀರು ಹಾಕಿ ಮಿಕ್ಸಿ ಮಾಡಬೇಕು. ಅ ದಕ್ಕೆ ಬೇಕಿದ್ದರೆ ಶುಂಠಿ ಅಥವಾ ಶುಂಠಿ ರಸ ಹಾಕಬೇಕು. ಬೇಕು ಎಂದರೆ ಬೆಲ್ಲ ಹಾಕಬಹುದು. ಸೋಸಿ, ಲಿಂಬೆಹಾಕಿ ಕುಡಿಯಬೇಕು. ಲಿಂಬೆಹಣ್ಣು ಬಿಪಿಗೂ ಒಳ್ಳೆಯದು. ಇದನ್ನು ವಾರದಲ್ಲಿ 3-4 ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಒಳ್ಳೆಯದು.
69
ರಕ್ತ ಶುದ್ಧಿ ಮಾಡುವ ಬೀಟ್ರೂಟ್-ಕ್ಯಾರೆಟ್
ಬೀಟ್ರೂಟ್ ಮತ್ತು ಕ್ಯಾರೆಟ್ಗಳಲ್ಲಿ ರಕ್ತವನ್ನು ಶುದ್ಧಿ ಮಾಡುವ ಗುಣಗಳಿವೆ. ರಕ್ತನಾಳದ ಶುದ್ಧಿಯಾದರೆ ಈ ಸಮಸ್ಯೆಗಳಿಂದ ಸುಲಭದಲ್ಲಿ ಮುಕ್ತಿ ಪಡೆಯಬಹುದು ಎನ್ನುತ್ತಾರೆ ವೈದ್ಯರು.
79
ವಾಕಿಂಗ್-ಯೋಗಾಭ್ಯಾಸವೂ ಇರಲಿ
ಇದರ ಜೊತೆ 30 ನಿಮಿಷ ವಾಕಿಂಗ್ ಬೇಕೇ ಬೇಕು. ಫೋನ್ ನೋಡಿಕೊಂಡು, ಹರಟೆ ಹೊಡೆದುಕೊಂಡು ಬೇಡ, ಅದನ್ನು ಬಿಟ್ಟು ಫಾಸ್ಟ್ ಆಗಿ ನಡೆದುಹೋಗಿ. ಯೋಗ-ಧ್ಯಾನ ಮಾಡಿದರೆ ತುಂಬಾ ಒಳ್ಳೆಯದು. ಇದು ಅಧಿಕರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
89
ಹೃದಯ ಕಾಪಾಡಲು ಬೆಳ್ಳುಳ್ಳಿ ಸಹಕಾರಿ
ಇದೇ ರೀತಿ ಬೆಳ್ಳುಳ್ಳಿ ಚಟ್ನಿ ಮಾಡಿಕೊಂಡು ತಿನ್ನಬಹುದು. ರಕ್ತನಾಳ ಶುದ್ಧವಾಗುತ್ತದೆ. ಅದೇ ರೀತಿ ವಾಲ್ನಟ್ಸ್ ಕೂಡ ಇವುಗಳನ್ನು ಕಡಿಮೆ ಮಾಡಲು ತುಂಬಾ ಒಳ್ಳೆಯದು. ಇದನ್ನು ಕೂಡ ತಿನ್ನುತ್ತಾ ಬಂದರೆ ಬಿಪಿಯನ್ನು ಕಡಿಮೆ ಮಾಡಬಹುದು. ಬಾಳೆಹಣ್ಣು ಕೂಡ ಆಗಾಗ್ಗೆ ತಿನ್ನುತ್ತಿರಿ.
99
ಮೆದುಳಿಗೂ ಬೇಕು ವಾಲ್ನೆಟ್
ವಾಲ್ನಟ್ಗಳು ಮೆದುಳಿನ ಆಕಾರದಲ್ಲಿ ಇರುವುದನ್ನು ನೋಡಬಹುದು. ಇದು ಹೃದಯಕ್ಕೆ ಮಾತ್ರವಲ್ಲದೇ ಮೆದುಳಿಗು ಕೂಡ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದರ ನಿಯಮಿತ ಸೇವನೆಯಿಂದ ಮೆದುಳು ಸಂಬಂಧಿ ಸಮಸ್ಯೆಗಳನ್ನೂ ಬಗೆಹರಿಸಿಕೊಳ್ಳಬಹುದಾಗಿದೆ.