ಬೆಳಗ್ಗೆ ಮಾಡೋ ಈ 5 ತಪ್ಪುಗಳು ಜೀವನ ಪೂರ್ತಿ ನಿಮ್ಮನ್ನ ರೋಗಿಗಳನ್ನಾಗಿಸುತ್ತೆ

ಬೆಳಿಗ್ಗೆ ಎದ್ದ ತಕ್ಷಣ, ನಾವು ಮಾಡುವಂತಹ ಕೆಲವೊಂದು ಕೆಲಸಗಳು, ನಿಮಗೆ ಜೀವನ ಪೂರ್ತಿ ಅನಾರೋಗ್ಯವನ್ನು ಉಂಟು ಮಾಡುವ ಸಾಧ್ಯತೆ ಇದೆ. ಅಂತಹ ಅಭ್ಯಾಸಗಳು ಯಾವುವು ನೋಡೋಣ. 
 

Avoid these morning mistakes to keep yourself healthy pav

ನಿಮ್ಮ ದಿನಚರಿ ಉತ್ತಮವಾಗಿದ್ದರೆ, ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ .ನೀವು ಪ್ರತಿ ದಿನ ಎಚ್ಚರಗೊಳ್ಳುವುದರಿಂದ ಹಿಡಿದು ಮಲಗುವುದು, ತಿನ್ನುವುದು ಮತ್ತು ಕುಡಿಯುವುದು ಮತ್ತು ವ್ಯಾಯಾಮ ಮಾಡುವುದು ಎಲ್ಲವೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ನೀವು ಮಾಡುವಂತಹ ಅನೇಕ ಕೆಟ್ಟ ಅಭ್ಯಾಸಗಳು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ, ನೀವು ಬೆಳಿಗ್ಗೆ ಎದ್ದು ಕೆಲವು ಕೆಲಸಗಳನ್ನು ಮಾಡಿದರೆ, ಅದರಿಂದ ನೀವು ತೀವ್ರವಾದ ಅನಾರೋಗ್ಯಕ್ಕೆ (health issues) ಒಳಗಾಗಬಹುದು. ಹಾಗಿದ್ರೆ ಅಂತಹ ಕೆಲಸಗಳು ಯಾವುವು ಅನ್ನೋದನ್ನು ನೋಡೋಣ. 
 

Avoid these morning mistakes to keep yourself healthy pav

ಮೊಬೈಲ್ ಬಳಕೆ ಮಾಡೋದು (using phone):  ಅನೇಕ ಜನರು ಬೆಳಿಗ್ಗೆ ಕಣ್ಣು ತೆರೆಯುವ ಮೊದಲೇ ತಮ್ಮ ಮೊಬೈಲ್ ಫೋನ್ ಆನ್ ಮಾಡುವ ಅಭ್ಯಾಸ  ಹೊಂದಿರುತ್ತಾರೆ. ಫೋನ್ ಹಾಸಿಗೆಯ ಬಳಿ ಇರಿಸಿ , ಎದ್ದ ತಕ್ಷಣ ಅದನ್ನು ಚೆಕ್ ಮಾಡೋದರಿಂದ, ಸಾಕಷ್ಟು ಸಮಯ ವ್ಯರ್ಥ ಆಗುತ್ತೆ. ಇದರಿಂದ ಆಯಾಸ ಮತ್ತು ತಲೆ ಭಾರಕ್ಕೆ ಕಾರಣವಾಗಬಹುದು. ಇದು ನಿಮ್ಮ ದಿನದ ಆರಂಭವನ್ನು ಸಹ ಹಾಳುಮಾಡಬಹುದು.


ನಕಾರಾತ್ಮಕ ಆಲೋಚನೆಗಳು (negative thinking)  : ಬೆಳಿಗ್ಗೆ ಎದ್ದ ನಂತರ ನೀವು ಎಂದಾದರೂ ಕಿರಿಕಿರಿ ಮತ್ತು ದುಃಖವನ್ನು ಅನುಭವಿಸಿದರೆ,  ಛೇ ಇವತ್ತಿನ ಪೂರ್ತಿ ದಿನ ಹಾಳಾಗಿ ಹೋಯ್ತು. ಇವತ್ತು ಏನು ಮಾಡಿದ್ರು ಸರಿಯಾಗಿರಲ್ಲ ಎಂದು ನೀವು ಅಂದುಕೊಳ್ಳುತ್ತೀರಿ. ಆದರೆ ಅಂತಹ ಸಂದರ್ಭದಲ್ಲಿ, ಬೆಳಿಗ್ಗೆ ಎದ್ದ ನಂತರ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸನ್ನು ಪ್ರವೇಶಿಸಲು ನೀವು ಎಂದಿಗೂ ಬಿಡಬಾರದು.  ಬದಲಾಗಿ ಪಾಸಿಟಿವ್ ಆಗಿ ಯೋಚಿಸಿ. ನಿಮ್ಮ ಜೀವನದಲ್ಲಿ ಎಲ್ಲವೂ ಚೆನ್ನಾಗಿ ಆಗುತ್ತೆ ಎಂದು ಯೋಚಿಸಿ, ಆ ದಿನ ಚೆನ್ನಾಗಿಯೇ ಇರುತ್ತೆ. 

ವ್ಯಾಯಾಮ ಮಾಡದಿರುವುದು (Not doing Exercise):  ಹೆಚ್ಚಿನ ಜನರು ಬೆಳಿಗ್ಗೆ ಎದ್ದ ನಂತರ ವ್ಯಾಯಾಮ ಮಾಡೋದೆ ಇಲ್ಲ. ಅಂತಹ ಸಂದರ್ಭಗಳಲ್ಲಿ, ನೀವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ.  ವ್ಯಾಯಾಮ ಮಾಡದವರು ಬೊಜ್ಜು ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಬಲಿಯಾಗಬಹುದು, ಇದು ತುಂಬಾ ಗಂಭೀರವಾಗಿರುತ್ತದೆ. ಹಾಗಾಗಿ ಪ್ರತಿದಿನ ವ್ಯಾಯಾಮ ಮಾಡೋದನ್ನು ಮರಿಬೇಡಿ.

ಬ್ರೇಕ್ ಫಾಸ್ಟ್ ಮಾಡದೇ ಇರೋದು (Not having breakfast):  ಅನೇಕ ಜನರು ಬೆಳಿಗ್ಗೆ ತಡವಾಗಿ ಎದ್ದು, ಬೇಗನೆ ರೆಡಿಯಾಗಿ ತಿಂಡಿ ಕೂಡ ಮಾಡದೇ ಖಾಲಿ ಹೊಟ್ಟೆಯಲ್ಲಿ ಕೆಲಸಕ್ಕೆ ಹೋಗ್ತಾರೆ. ಬೆಳಗ್ಗಿನ ಉಪಹಾರ ಬಿಡೋದು ತಪ್ಪು.  ಇದನ್ನು ಮಾಡೋದ್ರಿಂದ ದೌರ್ಬಲ್ಯ ಮತ್ತು ಹಲವಾರು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.

ಯೋಜನೆ ಇಲ್ಲದೆ ಕೆಲಸ ಮಾಡುವುದು (work without plan) : ಅನೇಕ ಜನರು ಯಾವುದೇ ಪ್ಲ್ಯಾನಿಂಗ್ ಇಲ್ಲದೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ, ಅಂತಹ ಜನರು ಯಾವಾಗಲೂ ಒತ್ತಡ, ಆತಂಕ ಮತ್ತು ಚಡಪಡಿಕೆ ಅನುಭವಿಸುತ್ತಾರೆ. ಅವರು ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಸಹ ಎದುರಿಸಬಹುದು. ಅಷ್ಟೇ ಅಲ್ಲ ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು ಸಹ ಉಂಟಾಗಬಹುದು. ಹಾಗಾಗಿ ಜಾಗೃತೆ ವಹಿಸಿ. 

Latest Videos

click me!