ಆಹಾರ ಸೇವಿಸೋವಾಗ ನೀವು ಮಾಡೋ ಈ ತಪ್ಪಿನಿಂದಾನೆ ನಿಮಗೆ ರೋಗ ಬರೋದು!

First Published | Sep 30, 2023, 4:50 PM IST

ಆರೋಗ್ಯಕರ ಆಹಾರವನ್ನು ತೆಗೆದುಕೊಂಡರೂ, ನಿಮಗೆ ಆರೋಗ್ಯವೂ ಸಿಗುವುದಿಲ್ಲವೇ? ಇದಕ್ಕೆ ಕಾರಣ ಏನು ಗೊತ್ತಾ? ಆಹಾರ ತೆಗೆದುಕೊಳ್ಳುವಾಗ ನೀವು ಮಾಡುವ ತಪ್ಪುಗಳು. ಅವುಗಳ ಬಗ್ಗೆ ತಿಳಿಯೋಣ ಬನ್ನಿ. 

ಕೆಲವರು ತಾವು ಎಷ್ಟು ಆರೋಗ್ಯಕರ ಆಹಾರವನ್ನು (healthy food) ಸೇವಿಸಿದರೂ ಮತ್ತು ಸರಿಯಾದ ದಿನಚರಿಯನ್ನು ಅನುಸರಿಸಿದರೂ, ಆರೋಗ್ಯವು ಉತ್ತಮವಾಗಿಲ್ಲ ಎಂದು ದೂರುತ್ತಾರೆ. ವಾಸ್ತವವಾಗಿ, ಇದರ ಹಿಂದಿನ ಕಾರಣ ನಿಮ್ಮ ಕೆಲವು ತಪ್ಪುಗಳಾಗಿರಬಹುದು. ಆಹಾರ ತಜ್ಞರು ಆಹಾರ ತಿನ್ನುವಾಗ ಸಂಭವಿಸುವ ಐದು ತಪ್ಪುಗಳ ಬಗ್ಗೆ ಹೇಳಿದ್ದಾರೆ, ಇದರಿಂದಾಗಿ ನಿಮ್ಮ ಆರೋಗ್ಯ ಉತ್ತಮವಾಗಿರೋದಿಲ್ಲ. ಆರೋಗ್ಯಕರ ಆಹಾರ ತಿನ್ನುತ್ತಿದ್ದರೂ, ಆರೋಗ್ಯ ಸರಿ ಇಲ್ಲ, ಅನ್ನೋದಕ್ಕೆ ಏನೆಲ್ಲಾ ಕಾರಣಗಳಿವೆ ಅನ್ನೋದನ್ನು ನೋಡೋಣ. 

ತಿನ್ನುವಾಗ ನೀರು ಕುಡಿಯುವುದು ಮೊದಲ ತಪ್ಪು: ತಜ್ಞರ ಪ್ರಕಾರ, ಆಹಾರದೊಂದಿಗೆ ನೀರನ್ನು ಕುಡಿಯುವಾಗ, ಅದು ನಿಮಗೆ ಹಾನಿ ಮಾಡುತ್ತದೆ. ನೀರು ಕುಡಿಯುವುದರಿಂದ ಲಾಲಾರಸ (saliva) ಸ್ರವಿಸುವಿಕೆ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ಜೀರ್ಣಕಾರಿ ರಸಗಳು ಹೊಟ್ಟೆಯಲ್ಲಿ ಬಿಡುಗಡೆಯಾಗುವುದಿಲ್ಲ, ಇದರಿಂದಾಗಿ ಪೌಷ್ಠಿಕಾಂಶವನ್ನು ಹೀರಿಕೊಳ್ಳಲಾಗುವುದಿಲ್ಲ. 

Tap to resize

ನೀವು ಏನನ್ನು ತಿಂದಿದ್ದೀರೋ ಅದು ಹೊಟ್ಟೆಯ ಒಳಪದರದಲ್ಲಿ ಸಿಲುಕಿಕೊಳ್ಳುತ್ತದೆ, ಅದು ಲೋಳೆಯನ್ನು ರೂಪಿಸಲು ಪ್ರಾರಂಭಿಸುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಆದುದರಿಂದಾ ಆಹಾರವನ್ನು ತಿನ್ನುವ ಅರ್ಧ ಗಂಟೆ ಮೊದಲು ಅಥವಾ ಆಹಾರವನ್ನು ಸೇವಿಸಿದ ಅರ್ಧ ಗಂಟೆಯ ನಂತರ ಮಾತ್ರ ನೀರು ಕುಡಿಯಿರಿ.

ಎರಡನೇ ತಪ್ಪು - ಹಸಿ ತರಕಾರಿಗಳನ್ನು ತಿನ್ನುವುದು: ಸೌತೆಕಾಯಿಗಳಂತಹ ಹಸಿ ತರಕಾರಿಗಳನ್ನು (green vegetables) ಎಂದಿಗೂ ಆಹಾರದೊಂದಿಗೆ ಸೇವಿಸಬಾರದು ಎಂದು ತಜ್ಞರು ಹೇಳುತ್ತಾರೆ. ಇದು ಹಸಿವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಸೌತೆಕಾಯಿಗಳಲ್ಲಿ ನೀರಿನ ಅಂಶವಿದೆ, ಇವು ಜೀರ್ಣಕ್ರಿಯೆಗೆ ಅಡ್ಡಿಪಡಿಸುವ ಜೀವರಾಸಾಯನಿಕ ಸಂಯುಕ್ತಗಳಾಗಿವೆ, ಇದರಿಂದಾಗಿ ಆಸಿಡಿಟಿ ಉಂಟಾಗುವ ಸಾಧ್ಯತೆ ಇದೆ.

ಮೂರನೆಯ ತಪ್ಪು - ಆಹಾರದೊಂದಿಗೆ ಹಣ್ಣು ತಿನ್ನುವುದು: ಆಹಾರದ ಜೊತೆಗೆ ಮಾವಿನಹಣ್ಣಿನಂತಹ (Mango) ಹಣ್ಣನ್ನು ತಿನ್ನುವ ತಿನ್ನೋದರಿಂದ ಹೊಟ್ಟೆಯಲ್ಲಿ ಫರ್ಮೆಂಟೇಶನ್ ಉಂಟಾಗುತ್ತೆ. ಇದು ಒಳ್ಳೆಯ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ ಮತ್ತು ಕೆಟ್ಟ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ.  ಫರ್ಮೆಂಟೇಶನ್ ಗ್ಲೂಕೋಸ್ ಹೆಚ್ಚಾಗಲು ಕಾರಣವಾಗಬಹುದು. ಇದರಿಂದಾಗಿ ಪೌಷ್ಠಿಕಾಂಶದ ಹೀರಿಕೊಳ್ಳುವಿಕೆಯೂ ಕಡಿಮೆಯಾಗಲು ಪ್ರಾರಂಭಿಸುತ್ತದೆ.

ನಾಲ್ಕನೇ ತಪ್ಪು - ನಕಾರಾತ್ಮಕ ಮನಸ್ಥಿತಿಯಲ್ಲಿ ತಿನ್ನುವುದು: ಕೋಪ ಅಥವಾ ನಕಾರಾತ್ಮಕ ಭಾವನೆಗಳೊಂದಿಗೆ (negative mood) ಆಹಾರವನ್ನು ಸೇವಿಸಿದಾಗಲೆಲ್ಲಾ, ಪೌಷ್ಠಿಕಾಂಶದ ಹೀರಿಕೊಳ್ಳುವಿಕೆ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಆಹಾರವನ್ನು ಯಾವಾಗಲೂ ಉತ್ತಮ ಮನಸ್ಥಿತಿಯಲ್ಲಿ ತಿನ್ನಬೇಕು, ಇದರಿಂದಾಗಿ ಆಹಾರವು ದೇಹಕ್ಕೆ ಶಕ್ತಿ ನೀಡುತ್ತದೆ. 

ಐದನೇ ತಪ್ಪು - ಕೆಟ್ಟ ಭಂಗಿಯಲ್ಲಿ ತಿನ್ನುವುದು: ಕೆಲವರು ಮಲಗಿ ತಿನ್ನುತ್ತಾರೆ, ಕೆಲವರು ನಿಂತು ತಿನ್ನುತ್ತಾರೆ. ಇನ್ನೂ ಕೆಲವರು ಯಾವುದೋ ಭಂಗಿಯಲ್ಲಿ ತಿನ್ನುತ್ತಾರೆ. ಇವೆಲ್ಲವೂ ಆಹಾರದ ಪೌಷ್ಟಿಕಾಂಶ ದೇಹವನ್ನು ಸರಿಯಾಗಿ ಸೇರೋದನ್ನು ತಪ್ಪಿಸುತ್ತೆ. ಹಾಗಾಗಿ ಇನ್ನು ಮುಂದೆ ಆಹಾರ ಸೇವಿಸುವಾಗ ಸರಿಯಾಗಿ ಕುಳಿತು ಸೇವಿಸಿ. 

Latest Videos

click me!