ಶೇ.99 ರಷ್ಟು ಜನ ಎದ್ದ ತಕ್ಷಣ ಸ್ಮಾರ್ಟ್‌ಫೋನ್ ನೋಡುತ್ತಾರೆ. ಫೋನ್ ನೋಡುತ್ತಾ ಮಲಗಿ ಬಳಿಕ ಏಳುವ ಮಂದಿ ಸಂಖ್ಯೆ ಹೆಚ್ಚು. ಈ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ, ಕಾರಣ ಇದರಿಂದ ಸಮಸ್ಯೆ ಒಂದೆರೆಡಲ್ಲ.
ಸೆಲ್ ಫೋನ್ ಈಗ ನಮ್ಮ ಜೀವನದಲ್ಲಿ ಅತಿ ಮುಖ್ಯವಾದ ವಸ್ತು. ಏನೇ ಮರೆತರೂ ಸೆಲ್ ಫೋನ್ ಮರೆಯೋಕೆ ಆಗಲ್ಲ. ಆಕಸ್ಮಿಕವಾಗಿ ಮರೆತರೆ ಪ್ರಾಣ ಹೋದಂಗೆ ಆಗುತ್ತೆ. ಮನೆಯಲ್ಲೆಲ್ಲಾ ಹುಡುಕಿ ಕಂಡುಹಿಡಿಯುತ್ತೇವೆ. ಅಷ್ಟರ ಮಟ್ಟಿಗೆ ಸೆಲ್ ಫೋನ್ ಜೀವನದ ಭಾಗವಾಗಿದೆ. ಅದಕ್ಕೇ ಎದ್ದ ತಕ್ಷಣ ಫೋನ್ ನೋಡದೆ ಇರೋಕೆ ಆಗಲ್ಲ. ಪದೇ ಪದೇ ಫೋನ್ ನೋಡುವುದು ಸಾಮಾನ್ಯವಾಗಿದೆ.
26
ಬೇಕೆ ಬೇಕು ಫೋನ್
ಸೆಲ್ ಫೋನ್ ಬರೋ ಮೊದಲು ಎಲ್ಲಾ ಕೆಲಸ ನಾವೇ ಮಾಡ್ಕೋಬೇಕಿತ್ತು. ಯಾರ ಜೊತೆ ಮಾತಾಡ್ಬೇಕಂದ್ರೆ ಅವರ ಮನೆಗೆ ಹೋಗ್ಬೇಕಿತ್ತು. ಏನಾದ್ರು ಕೊಂಡುಕೊಳ್ಳಬೇಕಂದ್ರೆ ಅಂಗಡಿಗೆ ಹೋಗಿ ದುಡ್ಡು ಕೊಟ್ಟು ತಗೋಬೇಕಿತ್ತು. ಸೆಲ್ ಫೋನ್ ಬಂದ ಮೇಲೆ ಎಲ್ಲಾ ಬದಲಾಗಿದೆ. ಮನೆಯಿಂದ ಹೊರಗೆ ಹೋಗದೇನೆ ಎಲ್ಲಾ ಕೆಲಸ ಮಾಡ್ಕೋಬಹುದು. ಎಷ್ಟೇ ದೂರದಲ್ಲಿ ಇದ್ರೂ ಮಾತಾಡಬಹುದು. ಯಾವ ದೇಶದ ವಸ್ತುವನ್ನಾದ್ರೂ ಆನ್‌ಲೈನ್‌ನಲ್ಲಿ ಕೊಂಡುಕೊಳ್ಳಬಹುದು.
36
ನಿದ್ರೆ ಎದ್ದ ತಕ್ಷಣ ನೋಡಬಾರದು
ಇಷ್ಟು ಮುಖ್ಯವಾದ ಸೆಲ್ ಫೋನ್ ಎದ್ದ ತಕ್ಷಣ ನೋಡದಿದ್ರೆ ಕೆಲಸಗಳು ನಿಂತು ಹೋಗುತ್ತೆ. ಮೆಸೇಜ್, ಕಾಲ್, ನೋಟಿಫಿಕೇಶನ್ ನೋಡದಿದ್ರೆ ಮುಖ್ಯವಾದ ಕೆಲಸ ಮಿಸ್ ಆಗಬಹುದು. ಆದ್ರೆ ಎದ್ದ ತಕ್ಷಣ ಫೋನ್ ನೋಡೋದ್ರಿಂದ ಹಲವು ಆರೋಗ್ಯ ಸಮಸ್ಯಗಳು ಕಾಡಲಿದೆ ಎಂದು ವೈದ್ಯರು ಹೇಳುತ್ತಾರೆ.
46
ಮೆದುಳು ತುಂಬಾ ಡಿಸ್ಟರ್ಬ್ ಆಗುತ್ತೆ
ಎದ್ದ ತಕ್ಷಣ ಸೆಲ್ ಫೋನ್ ನೋಡಿದ್ರೆ ಮೆದುಳಿಗೆ ತೊಂದರೆ ಆಗುತ್ತೆ. ರೆಸ್ಟ್‌ನಲ್ಲಿ ಇರೋ ಮೆದುಳು ಒಮ್ಮೆಲೇ ಆಕ್ಟಿವೇಟ್ ಆಗಲ್ಲ. ಹೈ ರೆಸೊಲ್ಯೂಶನ್ ಫೋನ್ ಲೈಟ್ ನೋಡಿದ್ರೆ ತುಂಬಾ ಡಿಸ್ಟರ್ಬ್ ಆಗುತ್ತೆ. ಅಪರಾಧ, ಅಪಘಾತ, ಒತ್ತಡದ ವಿಷಯ ತಿಳ್ಕೊಂಡ್ರೆ ಮೆದುಳಿಗೆ ಸ್ಟ್ರೆಸ್ ಆಗುತ್ತೆ. ಹೀಗಾಗಿ ಇನ್ನೂ ಒತ್ತಡ ಆಗುತ್ತೆ.
56
ನರಗಳ ದೌರ್ಬಲ್ಯ ಉಂಟಾಗುತ್ತದೆ
ಪ್ರತಿದಿನ ಬೆಡ್‌ನಿಂದ ಎದ್ದೇಳದೆ ಫೋನ್ ನೋಡಿದ್ರೆ ನರಗಳ ಸಮಸ್ಯೆ ಶುರುವಾಗುತ್ತೆ. ಒಮ್ಮೆಲೇ ದೇಹದಲ್ಲಿ ಬದಲಾವಣೆ ಕಾಣಿಸದೆ ಇರಬಹುದು. ಆದ್ರೆ ಪ್ರತಿದಿನ ಫೋನ್ ನೋಡಿದ್ರೆ ನರಗಳ ದೌರ್ಬಲ್ಯ ಬರಬಹುದು ಅಂತ ಡಾಕ್ಟರ್‌ಗಳು ಹೇಳ್ತಾರೆ. ಕಣ್ಣಿನ ನರಗಳು ಹಾಳಾಗಿ ಕಣ್ಣು ಮಂದ ಆಗಬಹುದು, ಕೈ ಕಾಲುಗಳಲ್ಲಿ ನರಗಳ ದೌರ್ಬಲ್ಯದಿಂದ ಶಕ್ತಿ ಕಡಿಮೆ ಆಗಬಹುದು. ಹೀಗಾಗಿ ಕೆಲವು ದಿನಗಳ ನಂತರ ನೀರಿನ ಬಾಟಲಿ ಎತ್ತೋಕೂ ಆಗಲ್ಲ ಅಂತ ಡಾಕ್ಟರ್‌ಗಳು ಹೇಳ್ತಾರೆ.
66
ಹೀಗೆ ಮಾಡಿದ್ರೆ ಒಳ್ಳೇದು
ಅದಕ್ಕೆ ಪ್ರತಿದಿನ ಎದ್ದ ತಕ್ಷಣ ಮೊಬೈಲ್ ತೆಗೆದು ನೋಟಿಫಿಕೇಶನ್ ನೋಡೋದು ಒಳ್ಳೆಯದಲ್ಲ. ಕನಿಷ್ಠ ಅರ್ಧ ಗಂಟೆ ಮೊಬೈಲ್ ಮುಟ್ಟದೆ ಬೇರೆ ಕೆಲಸ ಮಾಡಿ. ಧ್ಯಾನ, ಯೋಗ, ವಾಕಿಂಗ್ ಮಾಡಿ. ಬಳಿಕ ಮೊಬೈಲ್ ಕಣ್ಣಾಡಿಸಿ. ಆದರೆ ಮೊಬೈಲ್‌ನಲ್ಲೇ ಹೆಚ್ಚು ಹೊತ್ತು ಕಳೆಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ ಎಂದು ವೈದ್ಯರು ಹೇಳುತ್ತಾರೆ.