ಕರೋನಾ ನಂತರ ದುಪ್ಪಟ್ಟು ವೇಗದಲ್ಲಿ ಹೆಚ್ಚುತ್ತಿದೆ ಈ ರೋಗ, ಎಚ್ಚರವಿರಲಿ!

First Published | Nov 27, 2022, 12:49 PM IST

ಕರೋನಾ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಅಸ್ತಮಾ ದಾಳಿ ಹೆಚ್ಚಾಗಿದೆ. ಅಧ್ಯಯನದ ಪ್ರಕಾರ, ಅಸ್ತಮಾ ರೋಗಿಗಳು ಅವುಗಳನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಸ್ತಮಾ ಅಟ್ಯಾಕ್ ತೀವ್ರ ಅನಾರೋಗ್ಯ ಸಮಸ್ಯೆ ಉಂಟುಮಾಡಬಹುದು.ಅವುಗಳ ಬಗ್ಗೆ ಇಲ್ಲಿ ತಿಳಿಯಿರಿ.  

ಕರೋನಾ ಮುಗಿತಾನೇ ಇಲ್ಲ, ಆದರೆ ಕೆಲವು ದೇಶಗಳಲ್ಲಿ ಈ ರೋಗವು ಕಡಿಮೆಯಾಗಲು ಪ್ರಾರಂಭಿಸಿದೆ. ಅಂತಹ ದೇಶಗಳಲ್ಲಿ ಲಾಕ್ಡೌನ್, ಸಾಮಾಜಿಕ ಅಂತರ ಮತ್ತು ಇತರ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಆದರೆ, ಕರೋನಾ ನಿಷೇಧವನ್ನು ತೆಗೆದುಹಾಕಿದ ತಕ್ಷಣ, ಅಸ್ತಮಾ ಅಟ್ಯಾಕ್ (Asthma Attack) ದ್ವಿಗುಣಗೊಂಡಿವೆ. ಲಂಡನ್ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಕರೋನಾ ನಿಷೇಧ ತೆಗೆದುಹಾಕಿದ ನಂತರ ಅಸ್ತಮಾ ರೋಗಿಗಳು ಡಬಲ್ ಅಟ್ಯಾಕ್ಗಳನ್ನು ಎದುರಿಸುತ್ತಿದ್ದಾರೆ.

300 ಮಿಲಿಯನ್ ಜನರು ಅಪಾಯದಲ್ಲಿ: ಕ್ವೀನ್ ಮೇರಿ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ವಿಶ್ವದಾದ್ಯಂತ 300 ಮಿಲಿಯನ್ ಜನರು ಒಂದು ಹಂತದಲ್ಲಿ ಅಸ್ತಮಾ ಅನುಭವಿಸಿದ್ದಾರೆ. ಅಧ್ಯಯನವನ್ನು ನಡೆಸಿದ ಸಂಶೋಧಕರು ಅಂತಹ ಜನರಲ್ಲಿ ಅಸ್ತಮಾ ರೋಗಲಕ್ಷಣಗಳು ತೀವ್ರವಾಗುತ್ತಿವೆ ಮತ್ತು ಅವರು ಮಾರಣಾಂತಿಕ ಅಸ್ತಮಾ ಅಟ್ಯಾಕ್  ಹೊಂದುವ ಸಾಧ್ಯತೆ ಎರಡು ಪಟ್ಟು ಹೆಚ್ಚಾಗಿದೆ ಎಂದು ಗಮನಿಸಿದ್ದಾರೆ. ಅಂತಹ ಜನರು ಅಸ್ತಮಾದ ಗಂಭೀರ ಲಕ್ಷಣಗಳು ಮತ್ತು ಅದನ್ನು ತಡೆಗಟ್ಟುವ ಮಾರ್ಗಗಳನ್ನು ತಿಳಿದಿರಬೇಕು.

Tap to resize

ಅಸ್ತಮಾದ ತೀವ್ರ ರೋಗಲಕ್ಷಣಗಳು ಹೇಗೆ?: ಅಸ್ತಮಾದ ತೀವ್ರ ರೋಗಲಕ್ಷಣಗಳು ಸಾಮಾನ್ಯ ಅನಾರೋಗ್ಯದ ಲಕ್ಷಣಗಳನ್ನು ಹೋಲುತ್ತವೆ, ಅವು ಹೆಚ್ಚು ಆಕ್ರಮಣಕಾರಿಯಾಗುತ್ತವೆ ಅಷ್ಟೇ. ಅವುಗಳಂದ್ರೆ 

ಹೆಚ್ಚುವ ಉಸಿರಾಟದ ತೊಂದರೆ (Breathing Problem)

ಹೆಚ್ಚಿದ ಎದೆ ನೋವು ಮತ್ತು ಬಿಗಿತ

ಆಗಾಗ್ಗೆ ಕೆಮ್ಮು

ಇನ್ಹೇಲರ್ ತೆಗೆದುಕೊಂಡ ನಂತರವೂ ಪರಿಹಾರ ಪಡೆಯದಿರೋದು

ಉಸಿರಾಟದೊಂದಿಗೆ ಸೌಂಡ್ ಬರೋದು, ಇತ್ಯಾದಿ.

ಅಸ್ತಮಾ ರೋಗಿಗಳು ಏನು ಮಾಡಬೇಕು?: ನೀವು ಜೀವನದಲ್ಲಿ ಎಂದಾದರೂ ಅಸ್ತಮಾ ಹೊಂದಿದ್ದರೆ, ಹೆಚ್ಚು ಜಾಗರೂಕರಾಗಿರಬೇಕು. ಯಾಕಂದ್ರೆ, ಕರೋನಾ ನಿಷೇಧವನ್ನು ತೆಗೆದುಹಾಕಿದ ನಂತರ, ಕಾಳಜಿ ವಹಿಸದಿರೋದು ಅಸ್ತಮಾ ಅಟ್ಯಾಕ್ ಅಪಾಯವನ್ನು ಹೆಚ್ಚಿಸುತ್ತೆ. ಹಾಗಾಗಿ ಅಸ್ತಮಾ ತಡೆಗಟ್ಟಲು ಅಗತ್ಯ ಟಿಪ್ಸ್ ಅಳವಡಿಸಿಕೊಳ್ಳಿ ಮತ್ತು ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನು ಬಳಸುತ್ತಲೇ ಇರಿ

ಶ್ವಾಸಕೋಶ ಬಲಪಡಿಸಲು (Healthy Lungs) ಈ ಆಹಾರ ಸೇವಿಸಿ: ಅಸ್ತಮಾ ಅಟ್ಯಾಕ್ ತಪ್ಪಿಸಲು ಶ್ವಾಸಕೋಶ ಬಲಪಡಿಸಬೇಕು. ಇದಕ್ಕಾಗಿ,  ವಿಟಮಿನ್ ಡಿ ಆಹಾರಗಳು (ಸಾಲ್ಮನ್ ಮೀನು, ಮೊಟ್ಟೆ, ಹಾಲು), ವಿಟಮಿನ್ ಎ ಆಹಾರಗಳು (ಕ್ಯಾರಟ್, ಗೆಣಸು, ಪಾಲಕ್, ಬ್ರೊಕೋಲಿ), ಮೆಗ್ನೀಸಿಯಮ್ ಆಹಾರಗಳು (ಪಾಲಕ್, ಕುಂಬಳಕಾಯಿ ಬೀಜ, ಡಾರ್ಕ್ ಚಾಕೊಲೇಟ್), ಸೇಬು, ಬಾಳೆಹಣ್ಣುಗಳನ್ನು ಆಹಾರದಲ್ಲಿ ಸೇವಿಸಬೇಕು.

ಈ ಆಹಾರಗಳಿಂದ ದೂರವಿರಿ: ಅಸ್ತಮಾವಿದ್ದಲ್ಲಿ, ಹೊಟ್ಟೆಯ ಗ್ಯಾಸ್ ರೂಪಿಸುವ, ಸಲ್ಫೈಟ್ , ಸ್ಯಾಲಿಸೈಲೇಟ್, ಅಲರ್ಜಿಕಾರಕಗಳಿಂದ ದೂರವಿರಬೇಕು. ನಿಮಗೆ ಹಾಲು ಅಲರ್ಜಿಯಾಗಿದ್ದರೆ, ಅದರಿಂದ ದೂರವಿರಿ. ಹಾಗೇ ವೈನ್, ಆಲ್ಕೋಹಾಲ್, ಡ್ರೈ ಫ್ರೂಟ್ಸ್ , ಉಪ್ಪಿನಕಾಯಿ, ಎಲೆಕೋಸು, ಈರುಳ್ಳಿ, ಕರಿದ ಆಹಾರ, ಕಾಫಿ, ಚಹಾ ಇತ್ಯಾದಿಗಳನ್ನು ವೈದ್ಯರ ಸಲಹೆಯಿಲ್ಲದೆ ತಿನ್ನಬಾರದು.

ಸೀಸನಲ್ ಸೋಂಕುಗಳಿಂದ ದೂರವಿರಿ (Seasonal Health Issues): ಪ್ರತಿ ಋತುವಿನಲ್ಲಿ ಕೆಲವು ಸೋಂಕಿನ ಅಪಾಯವು ಹೆಚ್ಚಾಗುತ್ತೆ. ಈ ರೋಗವು ಅಸ್ತಮಾವನ್ನು ಗಂಭೀರವಾಗಿಸಬಹುದು ಮತ್ತು ಅಟ್ಯಾಕ್ ಗೆ ಕಾರಣವಾಗಬಹುದು. ಆದ್ದರಿಂದ, ಋತುಮಾನದ ಸೋಂಕುಗಳನ್ನು ತಪ್ಪಿಸಲು ಮತ್ತು ಅಲರ್ಜಿಗಳಿಂದ ದೂರವಿರಲು ಅಗತ್ಯವಾದ ಮಾರ್ಗಗಳನ್ನು ಅಳವಡಿಸಿಕೊಳ್ಳಿ.

ನಿಮ್ಮ ಉಸಿರಾಟದ ಮೇಲೆ ಒಂದು ಕಣ್ಣಿಡಿ: ಅಸ್ತಮಾ ಅಟ್ಯಾಕ್ ಸಂಭವಿಸಿದಾಗ, ಉಸಿರಾಟದಲ್ಲಿ ಮೊದಲ ಬದಲಾವಣೆ ಪ್ರಾರಂಭವಾಗುತ್ತೆ. ಆದ್ದರಿಂದ ನಿಮ್ಮ ಉಸಿರಾಟದ ಬಗ್ಗೆ ಕಾಳಜಿ ವಹಿಸಿ ಮತ್ತು ತೀವ್ರವಾದ ಅಸ್ತಮಾ ರೋಗಲಕ್ಷಣಗಳು ತೋರಿಸಲು ಪ್ರಾರಂಭಿಸಿವೆ ಎಂದು ನಿಮಗೆ ಅನಿಸಿದ್ರೆ, ಆಸ್ಪತ್ರೆಗೆ ಹೋಗಿ. ಇದನ್ನು ಬೇಗನೆ ಗುರುತಿಸಿದರೆ  ಸುಲಭವಾಗಿ ನಿರ್ವಹಿಸಬಹುದು.

ಔಷಧೋಪಚಾರ ಮತ್ತು ವೈದ್ಯಕೀಯ ಸಲಹೆ ತೆಗೆದುಕೊಳ್ಳಲು ಮರೆಯಬೇಡಿ: ಅಸ್ತಮಾ ಅಟ್ಯಾಕ್ ತಪ್ಪಿಸಲು ಸಕಾಲದಲ್ಲಿ ಔಷಧಿ (medication) ತೆಗೆದುಕೊಳ್ಳಬೇಕು. ಹಾಗೇ  ವೈದ್ಯಕೀಯ ಸಲಹೆಯನ್ನು ನಿರ್ಲಕ್ಷಿಸಬೇಡಿ. ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ನಿಮ್ಮ ವೈದ್ಯರು ಹೇಳಿದ್ದನ್ನು ಅಳವಡಿಸಿಕೊಳ್ಳಿ. ಇದರಿಂದ ಅಸ್ತಮಾ ಅಟ್ಯಾಕ್ ತಡೆಗಟ್ಟಬಹುದು.

Latest Videos

click me!