"Sorry ! ನನಗೆ ರಿಪ್ಲೈ ಮಾಡಲು ಮನಸಿಲ್ಲ: ಇದು ಖಿನ್ನತೆಯ ಹೊಸ ಲಕ್ಷಣ!

First Published | Nov 26, 2022, 5:23 PM IST

ಖಿನ್ನತೆಯ ಲಕ್ಷಣಗಳು ಇನ್ನು ಮುಂದೆ ಒಂದೇ ಆಗಿರೋದಿಲ್ಲ. ಎಕ್ಸ್ಪರ್ಟ್ ಪ್ರಕಾರ, ಜನರು ಈಗ ಸಾಕಷ್ಟು ಬದಲಾಗಿದ್ದಾರೆ. ಖಿನ್ನತೆಯಲ್ಲಿ, ರೋಗಿಯ ವರ್ತನೆಯು ವಿಭಿನ್ನವಾಗಿರುತ್ತೆ, ಇದು ಈಗ ಸ್ಮಾರ್ಟ್ಫೋನ್ಗಳು ಮತ್ತು ಇಂಟರ್ನೆಟ್ನಲ್ಲಿ ರೋಗಲಕ್ಷಣಗಳಾಗಿ ಗೋಚರಿಸುತ್ತೆ. ಖಿನ್ನತೆಯ ಆಧುನಿಕ ರೋಗಲಕ್ಷಣಗಳ ಬಗ್ಗೆ ಇಲ್ಲಿ ಕಲಿಯೋಣ.

ಒಬ್ಬರ ಮಾನಸಿಕ ಆರೋಗ್ಯವನ್ನು ಊಹಿಸೋದು ತುಂಬಾ ಕಷ್ಟ. ನಿಮ್ಮ ಮುಂದೆ ಇರುವ ವ್ಯಕ್ತಿ ಏನು ಎಂದು ಯಾರಿಗೂ ತಿಳಿದಿರೋದಿಲ್ಲ. ಖಿನ್ನತೆಯ (depression) ಬಗ್ಗೆ ಹಿಂದೆಂದಿಗಿಂತಲೂ ಈಗ ಹೆಚ್ಚು ಮಾತನಾಡೋದು ಒಳ್ಳೆಯದು. ಆದರೆ ಖಿನ್ನತೆಯ ರೋಗಲಕ್ಷಣಗಳ ಬಗ್ಗೆ ನಮಗೆ ಸಂಪೂರ್ಣವಾಗಿ ತಿಳಿದಿದ್ಯಾ? ರಾಷ್ಟ್ರೀಯ ಆರೋಗ್ಯ ಸೇವೆಯ ಕನ್ಸಲ್ಟೆಂಟ್ ಥೆರಪಿಸ್ಟ್ ಖಿನ್ನತೆಯ ಹೊಸ ರೋಗಲಕ್ಷಣಗಳ (modern symptoms of depression) ಬಗ್ಗೆ ಹೀಗೆ ಹೇಳಿದ್ದಾರೆ. ಇವುಗಳ ಬಗ್ಗೆ ತಿಳಿದುಕೊಂಡ್ರೆ ನೀವು ಸುಲಭವಾಗಿ ಖಿನ್ನತೆಯಿಂದ ಹೊರ ಬರಬಹುದು.

ಖಿನ್ನತೆಯ ದೀರ್ಘಕಾಲದ ರೋಗಲಕ್ಷಣಗಳು ಯಾವುವು?: ವೈದ್ಯಕೀಯ ಪರಿಭಾಷೆಯಲ್ಲಿ ಖಿನ್ನತೆಯನ್ನು ಮೇಜರ್ ಡಿಪ್ರೆಸಿವ್ ಡಿಸಾರ್ಡರ್ (major depressive disorder) ಎಂದು ಕರೆಯಲಾಗುತ್ತೆ. ಎಕ್ಸ್ಪರ್ಟ್ ಪ್ರಕಾರ, ಖಿನ್ನತೆ ಇದ್ದಾಗ ರೋಗಿಯು ನಿರಂತರವಾಗಿ ದುಃಖ ಮತ್ತು ನಿರಾಸಕ್ತಿಯ ಸ್ಥಿತಿಯಲ್ಲಿರುತ್ತಾನೆ. ಇದರೊಂದಿಗೆ, ರೋಗಿ ಅಳುವುದು, ಶೂನ್ಯತೆ, ಹತಾಶೆ, ದಣಿವು, ನಿದ್ರಾಹೀನತೆ, ಆಲೋಚನೆಯ ನಿಧಾನಗತಿಯ ವೇಗ, ಹಸಿವಾಗದಿರೋದು, ಹಠಾತ್ ತೂಕ ನಷ್ಟದಂತಹ ದೈಹಿಕ ಮತ್ತು ಮಾನಸಿಕ ಅನುಭವಗಳನ್ನು ಹೊಂದಬಹುದು.

Tap to resize

ಖಿನ್ನತೆಯ ಲಕ್ಷಣಗಳು ಬದಲಾಗಿವೆ: ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯು ತನ್ನ ಮಾನಸಿಕ ಸ್ಥಿತಿಯನ್ನು (mental status) ಮರೆಮಾಚಲು ಪ್ರಯತ್ನಿಸುತ್ತಾನೆ. ಆದ್ದರಿಂದ ಅಂತಹ ಜನರು ಹೆಚ್ಚಾಗಿ ನಗೋದನ್ನು ಮತ್ತು ಸಾಮಾನ್ಯವಾಗಿರೋದನ್ನು  ಕಾಣಬಹುದು. ಆದರೆ, ಆಗಾಗ್ಗೆ ಅವರು ಖಿನ್ನತೆಯ ತೀವ್ರ ಅನುಭವ ಎದುರಿಸೋದನ್ನು ಕಾಣಬಹುದು. 

ಈಗ ಸ್ಮಾರ್ಟ್ಫೋನ್ಗಳು ಮತ್ತು ಇಂಟರ್ನೆಟ್ ಕಮ್ಯುನಿಕೇಷನ್ ನ ಹೊಸ ಮಾರ್ಗಗಳಾಗಿ ಮಾರ್ಪಟ್ಟಿವೆ ಮತ್ತು ಭೌತಿಕವಾಗಿ ಭೇಟಿಯಾಗೋದು ಕಡಿಮೆಯಾಗಿದೆ. ಹಾಗಾಗಿ, ಖಿನ್ನತೆಯ ರೋಗಲಕ್ಷಣಗಳು ಸಹ ಬದಲಾಗಿವೆ, ಇದು ಸ್ಮಾರ್ಟ್ಫೋನ್ಗಳು ಮತ್ತು ಇಂಟರ್ನೆಟ್ನಲ್ಲಿ ಕಾಣಿಸಿಕೊಳ್ಳಬಹುದು.

'sorry, ನನಗೆ ರಿಪ್ಲೈ ಮಾಡಲು ಸಾಧ್ಯವಾಗಲಿಲ್ಲ..' ಇದು ಖಿನ್ನತೆಯ ಸಂಕೇತವಾಗಿದೆ. ಇತರ ಡಿಪ್ರೆಶನ್ ನ ಮೆಸೇಜ್ಗಳು ಹೀಗಿರುತ್ತವೆಏನು ಹೇಳಬೇಕೆಂದು ನನಗೆ ಗೊತ್ತಿಲ್ಲ? ನಾನು ನಿಮಗೆ ತೊಂದರೆ ನೀಡಲು ಬಯಸೋದಿಲ್ಲ. ನನ್ನಿಂದ ನಿಮ್ಮ ಮನಸ್ಥಿತಿ ಹಾಳಾಗಬಹುದು ಎಂದು ನನಗೆ ಭಯವಾಗುತ್ತೆ. ಸರಿಯಾಗಲು ನನಗೆ ಸ್ವಲ್ಪ ಸಮಯ ಬೇಕು. ನನ್ನ ಸಮಸ್ಯೆಯನ್ನು ಯಾರಿಗೂ ಹೇಳಲು ನಾನು ಬಯಸೋದಿಲ್ಲ. ನಾನು ತುಂಬಾ ಡಿಸಪಾಯಿಂಟ್ ಆಗಿದ್ದೇನೆ ಮತ್ತು ಕೆಲವು ದಿನಗಳವರೆಗೆ ಎಲ್ಲರಿಂದಲೂ ದೂರವಿರಲು ಬಯಸುತ್ತೇನೆ. ಮೀಟ್ ಆಗಲು ಅಥವಾ ಮಾತನಾಡಲು ಮನಸ್ಸು/ಶಕ್ತಿ ಇಲ್ಲ. ನನ್ನಿಂದೇನು ಪ್ರಯೋಜನವಿಲ್ಲ.

ರಿಪ್ಲೈ ಮಾಡದಿರೋದು ಸಹ ಒಂದು ಲಕ್ಷಣವಾಗಿರಬಹುದು (not replying also symptom of depression)
ರಿಪ್ಲೈ ಮಾಡಲು ಅಥವಾ ಮೀಟ್ ಆಗಲು ದೈಹಿಕ ಮತ್ತು ಮಾನಸಿಕ ಶಕ್ತಿ ಬೇಕಾಗುತ್ತೆ. ಖಿನ್ನತೆಯಲ್ಲಿ ಶಕ್ತಿಯ ಕೊರತೆ ಉಂಟಾಗುತ್ತೆ, ಇದರಿಂದಾಗಿ ಉತ್ತರಿಸಲು ಅಥವಾ ಭೇಟಿಯಾಗಲು ಬಯಸೋದಿಲ್ಲ. ಇದು ನೋವು ಮತ್ತು ನಕಾರಾತ್ಮಕ ಆಲೋಚನೆಗಳ ಮೂಲಕ ಹಾದುಹೋಗೋದರಿಂದ ಉಂಟಾಗಬಹುದು.
 

ಅಂತಹ ವ್ಯಕ್ತಿಯನ್ನು ಒಂಟಿಯಾಗಿ ಬಿಡಬೇಡಿ: ಒಬ್ಬ ವ್ಯಕ್ತಿಯಲ್ಲಿ ಹೊಸ ಮತ್ತು ಹಳೆಯ ರೋಗಲಕ್ಷಣಗಳನ್ನು ಒಟ್ಟಿಗೆ ನೋಡಿದರೆ, ಅವನು ಖಿನ್ನತೆ ಹೊಂದಿರಬಹುದು ಎಂದರ್ಥ. ಅಂತಹ ವ್ಯಕ್ತಿಯ ನಡವಳಿಕೆಯನ್ನು ಪೆರ್ಸನಲಾಗಿ ತೊಗೋಬೇಡಿ. ಅವರನ್ನು ಒಂಟಿಯಾಗಿ ಬಿಡಬೇಡಿ. ನೀವು ಅವನೊಂದಿಗೆ ಇದ್ದೀರಿ ಎಂದು ಅವನಿಗೆ ಅನಿಸುವಂತೆ ಮಾಡಿ. ನೀವು ಅವರ ಬಗ್ಗೆ ಕಾಳಜಿ ವಹಿಸಿ ಮತ್ತು ಅವರಿಂದ ಪ್ರತಿಯೊಂದಕ್ಕೂ ಉತ್ತರ ನಿರೀಕ್ಷಿಸಬೇಡಿ. ಅವರು ಬಯಸಿದಾಗಲೆಲ್ಲಾ ಅವರೊಂದಿಗೆ ಮಾತಾಡಿ. ಖಿನ್ನತೆಯ ರೋಗಿಯನ್ನು ಸಾಮಾನ್ಯವಾಗಿ ಭೇಟಿಯಾಗಲು ಅಥವಾ ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಲೇ ಇರಿ.

ರೋಗಿಯು ಖಿನ್ನತೆಯಿಂದ ಹೊರಬರಲು ಸ್ವತಃ ಪ್ರಯತ್ನಿಸಬೇಕು. ಸಮಯ ಮತ್ತು ತೊಂದರೆಗಳು ಯಾವಾಗಲೂ ಬದಲಾಗುತ್ತವೆ ಎಂಬುದನ್ನು ಅವನು ನೆನಪಿನಲ್ಲಿಡಬೇಕು. ಖಿನ್ನತೆಯಿಂದ ಹೊರಬರುವ ಮಾರ್ಗ ಕಾಣದಿದ್ದರೆ, ಇಂದು ಮತ್ತು ಈಗಿನ ಕ್ಷಣದ ಮೇಲೆ ಗಮನ ಹರಿಸಿ. ಇದು ನಕಾರಾತ್ಮಕ ಆಲೋಚನೆಗಳನ್ನು (negative thoughts) ತೊಡೆದುಹಾಕುತ್ತೆ. ನಿಮಗೆ ನೀವೇ  ಸಮಯ ನೀಡಿ ಮತ್ತು ಒಂದಲ್ಲ ಒಂದು ದಿನ ವಿಷಯಗಳು ಸುಧಾರಿಸುತ್ತವೆ ಎಂಬುದನ್ನು ನೆನಪಿನಲ್ಲಿಡಿ.

ತಜ್ಞರನ್ನು ಭೇಟಿಯಾಗೋದನ್ನು ಮರೀಬೇಡಿ: ಖಿನ್ನತೆಯಿಂದ ಹೊರಬರಲು ತಜ್ಞರನ್ನು ಭೇಟಿಯಾಗಬೇಕು. ಎಕ್ಸ್ಪರ್ಟ್ ಅವನ ಅಥವಾ ಅವಳ ಸ್ಥಿತಿಯನ್ನು ಸುಧಾರಿಸಲು ಅಗತ್ಯವಾದ ಚಿಕಿತ್ಸೆ ಮತ್ತು ಔಷಧೋಪಚಾರಗಳನ್ನು ಶಿಫಾರಸು ಮಾಡುತ್ತಾರೆ. ಮಾನಸಿಕ ಸಮಸ್ಯೆಗಳು ಸಹ ಒಂದು ರೀತಿಯ ಕಾಯಿಲೆಗಳಾಗಿವೆ, ಅವುಗಳಿಗೆ ಚಿಕಿತ್ಸೆ ನೀಡಲು ವೃತ್ತಿಪರರ ಅಗತ್ಯವಿದೆ ಎಂಬುದನ್ನು ಮರೀಬೇಡಿ. 

Latest Videos

click me!