ಮೊಣಕೈಯಲ್ಲಿ ನೋವು (Pain in Elbow): ಸ್ಮಾರ್ಟ್ ಫೋನ್ ಅನ್ನು ನಿಮ್ಮ ಕೈಯಲ್ಲಿ ಗಂಟೆಗಳ ಕಾಲ ಹಿಡಿದಿಟ್ಟುಕೊಳ್ಳುವುದು ನಿಮ್ಮ ಕೈಗಳನ್ನು ಹೆಚ್ಚಿನ ಸಮಯ ಬಾಗಿಸುತ್ತದೆ. ಇದು ಈ ನೋವಿಗೆ ಕಾರಣವಾಗುತ್ತದೆ. ನಿಮ್ಮ ಮೊಣಕೈಗೆ ಆಗಾಗ್ಗೆ ನೋವು, ಅಥವಾ ಜುಮ್ಮೆನಿಸಿದರೆ, ನಿಮ್ಮ ಫೋನ್ ನಿಂದ ಹೀಗೆಲ್ಲಾ ಆಗುತ್ತಿದೆ ಅನ್ನೋದನ್ನು ತಿಳಿಯಿರಿ.
ಇದನ್ನು ತಪ್ಪಿಸುವುದು ಹೇಗೆ?: ಇದಕ್ಕಾಗಿ, ನೀವು ಫೋನ್ ಬಳಕೆಯನ್ನು ಸಹ ಕಡಿಮೆ ಮಾಡಬೇಕು. ಅಲ್ಲದೆ, ಪ್ರತಿದಿನ ಕೈಗಳಿಗೆ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡಿ, ಇದರಿಂದ ರಕ್ತ ಪರಿಚಲನೆ ಉತ್ತಮವಾಗಿರುತ್ತದೆ.