ಬೋಟಾನಿಕಲ್ ಆಗಿ ಸೌತೆಕಾಯಿಯನ್ನು ಹಣ್ಣು ಎಂದು ಕರೆಯುತ್ತಾರೆ. ಏಕೆಂದರೆ ಇದು ಸೌತೆಕಾಯಿ ಗಿಡದಿಂದ ಹೂವು ಬಂದು ನಂತರ ಅದು ಕಾಯಿಯಾಗಿ ಬದಲಾಗುತ್ತದೆ. ಅಷ್ಟೇ ಅಲ್ಲ. ಅದಕ್ಕೆ ಬೀಜಗಳೂ ಇರುತ್ತವೆ. ಆ ಬೀಜಗಳು ಸಹ, ಕಲ್ಲಂಗಡಿ, ಕರ್ಬೂಜ ಬೀಜಗಳಂತೆ ಕಾಣಿಸುತ್ತವೆ. ಆದರೆ ಎಲ್ಲರೂ ಇದರ ರುಚಿಯ ಕಾರಣದಿಂದಾಗಿ, ಸಿಹಿತಿಂಡಿಗಳಲ್ಲಿ ಬಳಸುವುದಿಲ್ಲ, ಸಲಾಡ್‌ಗಳು, ಸೂಪ್‌ಗಳಲ್ಲಿ ಬಳಸುತ್ತಾರೆ. ಹಾಗಾಗಿ ಇದನ್ನು ತರಕಾರಿ ಎಂದು ಭಾವಿಸುತ್ತಾರೆ. ಇನ್ನು ಈ ಸೌತೆಕಾಯಿಯಲ್ಲಿ ನೀರಿನ ಅಂಶ ತುಂಬಾ ಹೆಚ್ಚಾಗಿರುತ್ತದೆ. ದೇಹವನ್ನು ಯಾವಾಗಲೂ ತಂಪಾಗಿರಿಸುತ್ತದೆ. ಬೇಸಿಗೆಯಲ್ಲಿ ದೇಹವನ್ನು ತೇವಾಂಶದಿಂದ ಕೂಡಿರುವಂತೆ ಮಾಡಲು ಸಹಾಯ ಮಾಡುತ್ತದೆ.