ಕೆಲವರಿಗೆ ಬೆಳಗ್ಗೆ ಆಹಾರ ಸೇವನೆಗೂ ಮುಂಚೆಯೇ ಸ್ನಾನ ಮಾಡುತ್ತಾರೆ. ಆದ್ರೆ ಇಂದು ಕೆಲಸದಲ್ಲಿ ಒತ್ತಡದಲ್ಲಿ ಮೊದಲು ಆಹಾರ ಸೇವಿಸಿ ಆನಂತರ ಸ್ನಾನ ಮಾಡುತ್ತಾರೆ. ಆದ್ರೆ ಈ ರೂಢಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ ಎಂದು ತಜ್ಞ ವೈದ್ಯರು ಹೇಳುತ್ತಾರೆ. ಹಾಗಾದ್ರೆ ಸ್ನಾನಕ್ಕೆ ಸೂಕ್ತ ಸಮಯ ಯಾವುದು?
ಆರೋಗ್ಯ ತಜ್ಞರ ಪ್ರಕಾರ, ಒಳ್ಳೆಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಯಾವಾಗಲೂ ಸರಿಯಾದ ಸಮಯದಲ್ಲಿ ಸ್ನಾನ ಮಾಡಬೇಕು. ಬೆಳಗ್ಗೆ ಅಥವಾ ಸಂಜೆ ಸ್ನಾನಕ್ಕೆ ಸೂಕ್ತ ಸಮಯ ಎಂದು ಪರಿಗಣಿಸಲಾಗುತ್ತದೆ. ಕೆಲವರು ರಾತ್ರಿ ನಿದ್ದೆಗೆ ಹೋಗುವ ಮುನ್ನ ಸ್ನಾನ ಮಾಡುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಇದು ತ್ವಚೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ವಿಶೇಷವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಚರ್ಮದ ಮೇಲೆ ಧೂಳು ಸೇರಿದಂತೆ ಗಲೀಜು ನೀರು ತಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಎರಡು ಬಾರಿ ಸ್ನಾನ ಮಾಡೋದು ಅಗತ್ಯವಾಗಿರುತ್ತದೆ. ಹೊರಗಿನಿಂದ ಬಂದ ತಕ್ಷಣ ಮುಖ, ಕೈ-ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಲು ಮನೆಯಲ್ಲಿ ಹಿರಿಯರು ಈ ಕಾರಣದಿಂದಲೇ ಹೇಳುತ್ತಿರುತ್ತಾರೆ.
ರಾತ್ರಿ ಮಲಗುವ ಮುನ್ನ ದೇಹ ಸ್ವಚ್ಛವಾಗಿರಬೇಕು. ಆದ್ದರಿಂದ ಸಂಜೆ ಅಥವಾ ರಾತ್ರಿಯ ಸ್ನಾನವೂ ಒಳ್ಳೆಯದು. ಹಾಗಂತ ಬೆಳಗ್ಗೆ ಸ್ನಾನ ಮಾಡೋದು ತಪ್ಪು ಅಂತಲ್ಲ. ಬೆಳಗ್ಗೆ ಸ್ನಾನ ಮಾಡೋದರಿಂದ ಬೇಗನೆ ನಿದ್ದೆ ಮಂಪರಿನಿಂದ ಹೊರಗೆ ಬರಬಹುದು. ಬೆಳಗ್ಗೆ ಬೇಗ ಎದ್ದು ಕೆಲಸಕ್ಕೆ ತೆರಳುವ ಜನರು ಬೆಳಗ್ಗೆಯ ಸ್ನಾನ ಒಳ್ಳೆಯದು.
ನೀವು ಆಹಾರ ಸೇವಿಸುವ ಮುನ್ನ ಅಥವಾ ನಂತರ ಸ್ನಾನ ಮಾಡುವ ಅಭ್ಯಾಸ ಹೊಂದಿದ್ದರೆ ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು. ಒಂದು ಕೆಟ್ಟ ಪದ್ಧತಿಯಿಂದ ಹಲವು ರೀತಿಯ ಸಮಸ್ಯೆಗಳು ಉಂಟಾಗಬಹುದು. ದೇಹದ ಅನೇಕ ಭಾಗಗಳ ಕಾರ್ಯನಿರ್ವಹಣೆ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ.
ಆಹಾರ ಸೇವಿಸಿದ ಬಳಿಕ ಸ್ನಾನ ಮಾಡೋದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಆಹಾರ ಸೇವನೆ ಬಳಿಕ ಜೀರ್ಣಿಸಿಕೊಳ್ಳಲು ಹೊಟ್ಟೆಯ ಸುತ್ತಲೂ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ನೀವು ಸ್ನಾನ ಮಾಡಿದ್ರೆ ರಕ್ತ ಪರಿಚಲನೆ ಕಡಿಮೆಯಾಗಿ ಜೀರ್ಣಕ್ರಿಯೆಯು ನಿಧಾನಗೊಳ್ಳುತ್ತದೆ. ತದ್ವಿರುದ್ಧ ಪ್ರಕ್ರಿಯೆಯಿಂದಾಗಿ ದೇಹದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.
ಸ್ನಾನ ಮಾಡುವಾಗ, ದೇಹದ ಉಷ್ಣತೆಯು ಗಣನೀಯವಾಗಿ ಕಡಿಮೆಯಾಗುತ್ತದೆ, ಇದು ಜೀರ್ಣಕ್ರಿಯೆಗೆ ಒಳ್ಳೆಯದಲ್ಲ. ಇದರಿಂದಾಗಿಅಸ್ವಸ್ಥತೆ ಮತ್ತು ಎದೆಯುರಿ ಉಂಟಾಗುತ್ತದೆ. ಆಹಾರ ಸೇವನೆ ಬಳಿಕ ಸ್ನಾನ ಮಾಡಿದ್ರೆ ಬೊಜ್ಜು ಹೆಚ್ಚಾಗಬಹುದು.
ಆರೋಗ್ಯ ತಜ್ಞರ ಪ್ರಕಾರ, ಆಹಾರ ಸೇವನೆ ಬಳಿಕ ಒಂದು ಅಥವಾ ಎರಡು ಗಂಟೆಯ ನಂತರ ಸ್ನಾನ ಮಾಡಬೇಕು. ಕನಿಷ್ಠ ಎರಡು ಗಂಟೆಯ ಅಂತರವನ್ನು ಕಾಯ್ದುಕೊಳ್ಳಬೇಕು. ಸ್ನಾನದ ಬಳಿಕ ಆಹಾರ ಸೇವನೆ ಮಾಡಿದರೆ ದೇಹದಲ್ಲಿ ಯಾವುದೇ ನಕಾರಾತ್ಮಕ ಪರಿಣಾಮ ಬೀರಲ್ಲ. ಬದಲಾಗಿ ಜೀರ್ಣಕ್ರಿಯೆ ಪ್ರಕ್ರಿಯೆಯು ಸಹ ಉತ್ತಮವಾಗುತ್ತದೆ.