ಅನುಷ್ಕಾ ಯಾವ ರೀತಿಯ ಆಹಾರ ಕ್ರಮ ಅನುಸರಿಸುತ್ತಾರೆ?
ಅನುಷ್ಕಾ ಶರ್ಮಾ (Anushka Sharma) ಸಸ್ಯಾಹಾರಿ ಆಹಾರ ಸೇವಿಸುತ್ತಾರೆ. ಅವರು ಸಂಪೂರ್ಣ ಆರೋಗ್ಯಕರ ಆಹಾರಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಾರೆ ಮತ್ತು ಗ್ಲುಟನ್, ಸಕ್ಕರೆ ಮತ್ತು ಡೈರಿ ಉತ್ಪನ್ನಗಳನ್ನು ಅವಾಯ್ಡ್ ಮಾಡ್ತಾರೆ. ಹಾಗಾದರೆ ಅವರು ಯಾವ ರೀತಿಯ ಆಹಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡೋಣ.
28
ಸಕ್ಕರೆ ಮತ್ತು ಡೈರಿ ಉತ್ಪನ್ನಗಳನ್ನು ಅವಾಯ್ಡ್ ಮಾಡ್ತಾರೆ
ಪ್ರಾಣಿಗಳ ಮೇಲಿನ ಪ್ರೀತಿಯಿಂದ ಪ್ರೇರಿತರಾದ ಅನುಷ್ಕಾ 2015 ರಲ್ಲಿ ಸಸ್ಯಾಹಾರಿಯಾದರು (Vegetarian). ಅವರು ಗ್ಲುಟನ್, ಸಕ್ಕರೆ ಮತ್ತು ಡೈರಿ ಉತ್ಪನ್ನಗಳನ್ನು ಸಹ ತಿನ್ನೋದಿಲ್ಲ
38
ಇಡ್ಲಿ ಇಷ್ಟಪಟ್ಟು ತಿನ್ನುತ್ತಾರೆ
ಇದರ ಜೊತೆಗೆ, ಅನುಷ್ಕಾಗೆ ಇಡ್ಲಿ ತುಂಬಾ ಇಷ್ಟ. ಅನುಷ್ಕಾ ಹೆಚ್ಚಾಗಿ ತಮ್ಮ ಉಪಾಹಾರದಲ್ಲಿ ಸಾಂಬಾರ್ ಮತ್ತು ಚಟ್ನಿಯೊಂದಿಗೆ ಇಡ್ಲಿಯನ್ನು (Idli and Sambar) ತಿನ್ನಲು ಇಷ್ಟಪಡುತ್ತಾರೆ.
ರಾಗಿ ಮತ್ತು ಜೋಳದಿಂದ ಮಾಡಿದ ರೊಟ್ಟಿಗಳನ್ನು ತಿನ್ನುತ್ತಾರೆ
ನಿಮಗೆ ತಿಳಿದರೆ ಅಚ್ಚರಿಯಾಗುತ್ತೆ, ಆದರೆ ಇದು ನಿಜಾ, ಅನುಷ್ಕಾ ಚಪಾತಿ ತಿನ್ನೋದಿಲ್ಲ, ಬದಲಾಗಿ ರಾಗಿ, ಜೋಳ ಮತ್ತು ಕ್ವಿನೋವಾ ರೊಟ್ಟಿಗಳನ್ನು ಸೇವಿಸುತ್ತಾರೆ.
58
ನಟ್ಸ್, ಫ್ರುಟ್ಸ್ ತಿನ್ನುತ್ತಾರೆ
ಅನುಷ್ಕಾ ತನ್ನ ಹಸಿವನ್ನು ನಿಯಂತ್ರಿಸಲು ಮತ್ತು ತನ್ನ ಫಿಟ್ನೆಸ್ ಗುರಿಗಳನ್ನು ಕಾಪಾಡಿಕೊಳ್ಳಲು ಹೆಚ್ಚಾಗಿ ನಟ್ಸ್, ಹಣ್ಣುಗಳು ಅಥವಾ ಪ್ರೋಟೀನ್ ಬಾರ್‌ಗಳಂತಹ ಆರೋಗ್ಯಕರ ತಿಂಡಿಗಳನ್ನು ಸೇವಿಸುತ್ತಾರೆ.
68
ಒಂದೇ ರೀತಿಯ ಆಹಾರ ಸೇವಿಸುತ್ತಾರೆ
ಅನುಷ್ಕಾ ಮೊನೊಟ್ರೋಫಿಕ್ ಆಹಾರ ಅನುಸರಿಸುತ್ತಾರೆ, ಇದರಲ್ಲಿ ಒಂದೇ ರೀತಿಯ ಆಹಾರವನ್ನು ಅಥವಾ ಸೀಮಿತ ಪ್ರಮಾಣದಲ್ಲಿ ಒಂದೇ ರೀತಿಯ ಆಹಾರವನ್ನು ದೀರ್ಘಕಾಲದವರೆಗೆ ಸೇವಿಸಲಾಗುತ್ತದೆ.
78
ಇವುಗಳನ್ನೂ ಸಹ ಆಹಾರದಲ್ಲಿ ಸೇರಿಸುತ್ತಾರೆ
ಅನುಷ್ಕಾ ಶರ್ಮಾ ತಮ್ಮ ಆರೋಗ್ಯಕರ ಆಹಾರದಲ್ಲಿ (healthy foods) ದ್ವಿದಳ ಧಾನ್ಯಗಳು, ಪನೀರ್, ಟೋಫು, ಚಿಯಾ ಬೀಜಗಳು, ಓಟ್ಸ್, ಟೋಸ್ಟ್, ಸೂಪ್, ಸಲಾಡ್ ಅನ್ನು ಸೇವಿಸುತ್ತಾರೆ.
88
ಯೋಗದ ಮೂಲಕ ಫಿಟ್ ಆಗಿರುತ್ತಾರೆ
ಅನುಷ್ಕಾ ಶರ್ಮಾ ತನ್ನ ದೇಹವನ್ನು ಫಿಟ್ ಆಗಿಡಲು ಯೋಗ ಮತ್ತು ನೃತ್ಯದ ಸಹಾಯವನ್ನು ಪಡೆಯುತ್ತಾರೆ. ಇದರೊಂದಿಗೆ, ಅವರು 7 ಗಂಟೆಯ ಹೊತ್ತಿಗೆ ಆಹಾರವನ್ನು ಸೇವಿಸುತ್ತಾರೆ ಮತ್ತು ಪೂರ್ಣ ನಿದ್ರೆ ಮಾಡುತ್ತಾರೆ.