ಕೆಲವೇ ನಿಮಿಷಗಳಲ್ಲಿ ಕಟ್ಟಿದ ಮೂಗಿಗೆ ಪರಿಹಾರ ಕಂಡುಕೊಳ್ಳಿ...

First Published Nov 3, 2021, 3:53 PM IST

ಶೀತ ಹವಾಮಾನದಲ್ಲಿ ಮೂಗು ಮುಚ್ಚುವುದು ಸಾಮಾನ್ಯ, ಆದರೆ ಮೂಗು ಮುಚ್ಚಿದಾಗ (blocked nose) ಉಸಿರಾಟ ತುಂಬಾ ಕಷ್ಟ. ಆದ್ದರಿಂದ ಮುಖದ ಸುತ್ತಲಿನ ರಕ್ತನಾಳಗಳೂ ಉರಿಯೂತಕ್ಕೆ ಒಳಗಾಗಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು, ಕೆಳಗೆ ಉಲ್ಲೇಖಿಸಲಾದ ಕೆಲವು ಮನೆಮದ್ದುಗಳ ಸಹಾಯವನ್ನು ತೆಗೆದುಕೊಳ್ಳಬಹುದು.

ಮುಚ್ಚಿದ ಮೂಗನ್ನು ತೆರೆಯಲು ಮನೆಮದ್ದುಗಳು

1. ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ (drink luke warm water)
ಉಗುರು ಬೆಚ್ಚಗಿನ ನೀರಿನ ಸಹಾಯವನ್ನು ತೆಗೆದುಕೊಳ್ಳಬೇಕು  ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮೂಗನ್ನು ಸಡಿಲಗೊಳಿಸಲು ಇವು ಅತ್ಯುತ್ತಮ ಮಾರ್ಗ. ಇದು ದೇಹದಲ್ಲಿ ಉಷ್ಣತೆಯನ್ನು ಸೃಷ್ಟಿಸುತ್ತದೆ ಮತ್ತು ಮುಚ್ಚಿದ ಮೂಗಿನ ಸಮಸ್ಯೆ ಮತ್ತು ಶೀತವನ್ನು ನಿವಾರಿಸುತ್ತದೆ.  

ನಿಮಗೆ ಇಷ್ಟವಿದ್ದರೆ ಉಗುರು ಬೆಚ್ಚಗಿನ ನೀರಿನಲ್ಲಿ ಶುಂಠಿ ಅಥವಾ ಗ್ರೀನ್ ಟೀಯನ್ನು (green tea) ಸಹ ಮಿಶ್ರಣ ಮಾಡಬಹುದು. ಇದು ಮೂಗು ತೆರೆಯಲು ಸಹಾಯ ಮಾಡುತ್ತದೆ ಮತ್ತು ಮೂಗು ಮತ್ತು ಗಂಟಲಿನ ಪೊರೆಯ ಉರಿಯೂತವನ್ನು ಕಡಿಮೆ ಮಾಡುತ್ತದೆ. ಶುಂಠಿ, ಕರಿಮೆಣಸು ಬೆರೆಸಿ ಕಷಾಯ ಮಾಡಿ ಸೇವನೆ ಮಾಡುವುದು ಸಹ ಉತ್ತಮ ವಿಧಾನ.

ಮಸಾಲೆಯುಕ್ತ ಆಹಾರವನ್ನು ಸೇವಿಸಿ (spicy fod)
ಶೀತವನ್ನು ನಿವಾರಿಸಲು ಮತ್ತು  ಮೂಗನ್ನು ತೆರೆಯಲು ಮಸಾಲೆಯುಕ್ತ ಆಹಾರದ ಸಹಾಯವನ್ನು ಸಹ ಪಡೆದು ಕೊಳ್ಳಬಹುದು. ಏಕೆಂದರೆ ಮೆಣಸಿನಕಾಯಿಗಳು ಕ್ಯಾಪ್ಸೈಸಿನ್ ಎಂಬ ಘಟಕವನ್ನು ಹೊಂದಿರುತ್ತವೆ, ಇದು ಶಾಖ-ಉಂಟುಮಾಡುವ ಪರಿಣಾಮಗಳಿಗೆ ಹೆಸರುವಾಸಿ. ಇದು ಮೂಗಿನ ಹಾದಿಗಳನ್ನು ತೆರೆಯಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಬೆಯನ್ನು (steam) ತೆಗೆದುಕೊಳ್ಳಿ
ಯಾರದ್ದಾದರೂ ಮೂಗು ಕಟ್ಟಿದಾಗ, ಅವನ ಸೈನಸ್ ರಕ್ತನಾಳಗಳು ಉರಿಯೂತಕ್ಕೆ ಒಳಗಾಗುತ್ತವೆ. ಈ ಸಂದರ್ಭದಲ್ಲಿ, ಹಬೆಯ ಸಹಾಯವನ್ನು ಪಡೆಯಬಹುದು. ಹಬೆಯನ್ನು ತೆಗೆದುಕೊಳ್ಳುವುದರಿಂದ ಮೂಗು ತೆರೆಯಲು ಸುಲಭವಾಗುತ್ತದೆ. ಅದೇ ಸಮಯದಲ್ಲಿ, ಟ್ಯೂಬ್‌ಗಳಲ್ಲಿ ಶೇಖರಣೆಯಾದ ಲೋಳೆಯನ್ನು ಸಹ ಹೊರಹಾಕಲು ಪ್ರಾರಂಭಿಸುತ್ತದೆ. ಆದ್ದರಿಂದ ಸಾಕಷ್ಟು ನಿರಾಳತೆಯನ್ನು ಅನುಭವಿಸುತ್ತೀರಿ. 

ಏನು ಮಾಡಬೇಕು?
ಒಂದು ಮಡಕೆಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಹಬೆಯು ಅದರಿಂದ ಹೊರ ಬರಲು ಪ್ರಾರಂಭಿಸಿದಾಗ, ಮಡಕೆಯನ್ನು ಗ್ಯಾಸ್‌ನಿಂದ ಕೆಳಗಿಳಿಸಿ ಮತ್ತು ಸ್ವಲ್ಪ ಎತ್ತರದಲ್ಲಿ ನಿಮ್ಮ ಮುಖವನ್ನು ಇಡಿ. ಈ ಸಮಯದಲ್ಲಿ ತಲೆ ಮತ್ತು ಮುಖವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ. ನೀವು ಬಯಸಿದರೆ ಉಗಿಯನ್ನು ತೆಗೆದುಕೊಳ್ಳಲು ವೇಪರೈಸರ್ ಸಹಾಯವನ್ನು ಸಹ ತೆಗೆದುಕೊಳ್ಳಬಹುದು.

ಸೆಲೈನ್ ಸ್ಪ್ರೇ (saline spray) ತೆಗೆದುಕೊಳ್ಳಿ
ಶೀತವನ್ನು ತೊಡೆದುಹಾಕಲು  ಸೆಲೈನ್ ಸ್ಪ್ರೇಯ ಸಹಾಯವನ್ನು ತೆಗೆದುಕೊಳ್ಳಬಹುದು. ಮೂಗಿನ ಹಾದಿಗಳನ್ನು ತೆರವುಗೊಳಿಸಲು ಇವು ಉತ್ತಮ ಮಾರ್ಗ. ಅದನ್ನು ಮಾರುಕಟ್ಟೆಯಿಂದ ಖರೀದಿಸಬಹುದು. ಮುಚ್ಚಿದ ಮೂಗು ತೆರೆಯುವಲ್ಲಿ ಉಪ್ಪು ನೀರು ಸಹ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದನ್ನು ದಿನಕ್ಕೆ ಹಲವಾರು ಬಾರಿ ಬಳಸಬೇಕಾಗುತ್ತದೆ.

ಶೀತದ ಸಮಯದಲ್ಲಿ ಮೂಗಿನ ಮುಚ್ಚುವಿಕೆಯಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಬಿಸಿ ನೀರನ್ನು ಉಪಯೋಗಿಸಬಹುದು. ಬಿಸಿ ನೀರಿನಲ್ಲಿ ಬಟ್ಟೆಯನ್ನು ನೆನೆಸಿ ಮತ್ತು ಅದರೊಂದಿಗೆ ನಿಮ್ಮ ಮೂಗನ್ನು ಇಡಿ. ಇದರಿಂದ ಮೂಗು ತೆರೆಯುವುದಲ್ಲದೆ ಮೂಗಿನ ಸುತ್ತಲಿನ ನರಗಳು ಸಡಿಲವಾಗುತ್ತದೆ.

click me!