Deepavali: ತೂಕ ಹೆಚ್ಚಾಗದಂತೆ ಹಬ್ಬದೂಟ ಎಂಜಾಯ್ ಮಾಡಲು ತಜ್ಞರ ಟಿಪ್ಸ್ ಇವು

First Published | Nov 3, 2021, 3:42 PM IST

ದೀಪಾವಳಿ (Deepavali) ಹಬ್ಬವು ಬಂದಿದೆ. ನಾವೆಲ್ಲರೂ ಈ ಹಬ್ಬಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿದ್ದೇವೆ ಮತ್ತು ಅದನ್ನು ಆಚರಿಸಲು ತುಂಬಾ ಉತ್ಸುಕರಾಗಿದ್ದೇವೆ. ಆದರೆ ಈ ಹಬ್ಬದ ಬಗ್ಗೆ ಬಹಳಷ್ಟು ಜನರು ತುಂಬಾ ಭಯಪಡುತ್ತಾರೆ. ಯಾಕೆಂದರೆ ಹಬ್ಬವನ್ನು ಆನಂದಿಸಿದರೆ ಹಬ್ಬದ ವಿವಿಧ ಭೋಜನ ತಿಂದು ಅವರು ದಪ್ಪಗಾಗುತ್ತಾರೆ ಅಥವಾ ಅವರ ಜೀರ್ಣಾಂಗ ವ್ಯವಸ್ಥೆಗೆ (digestive system) ಹಾನಿಯಾಗುತ್ತದೆ ಎಂದು ಅವರು ಭಾವಿಸುತ್ತಾರೆ.

ನೀವು ಕೂಡ ಈ ಆಲೋಚನೆಯೊಂದಿಗೆ ದೀಪಾವಳಿಯಂದು (Diwali 2021) ತಿನ್ನುವುದನ್ನು ಮತ್ತು ಕುಡಿಯುವುದನ್ನು ತಪ್ಪಿಸಿದರೆ ಅಥವಾ ತಡರಾತ್ರಿಯ ಭೋಜನವನ್ನು ಆನಂದಿಸಲು ಸಾಧ್ಯವಾಗದಿದ್ದರೆ, ಪ್ರಸಿದ್ಧ ಪೌಷ್ಟಿಕತಜ್ಞರಾದ ರುಜುತಾ
ದಿವೇಕರ್ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ದೀಪಾವಳಿ ವಾರದಲ್ಲಿ ತೂಕ ಹೆಚ್ಚಳ (weight gain)  ಅಥವಾ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಜನರ ಆಹಾರ ಸಮಸ್ಯೆಗಳನ್ನು ಪರಿಹರಿಸಲು ಇದು ತುಂಬಾ ಒಳ್ಳೆಯದು.
 

ಲೇಟ್ ನೈಟ್ ಡಿನ್ನರ್ ಗೆ ಸಲಹೆಗಳು
ಸಾಮಾನ್ಯ ಆಹಾರ ಸೇವಿಸಿ 
ಅನೇಕ ಜನರು ತಡರಾತ್ರಿಯ ಭೋಜನಕ್ಕಾಗಿ (late night dinner) ದಿನದ ಊಟವನ್ನು ಬಿಟ್ಟುಬಿಡುತ್ತಾರೆ ಅಥವಾ ಪ್ರತಿ ದಿನಕ್ಕಿಂತ  ಹಗಲಿನಲ್ಲಿ ತುಂಬಾ ಕಡಿಮೆ ತಿನ್ನುತ್ತಾರೆ. ಇದರಿಂದ ಅವರು ರಾತ್ರಿ ಸಮಯದಲ್ಲಿ ಆಹಾರವನ್ನು ಸರಿಯಾಗಿ
ಆನಂದಿಸಬಹುದು. ಆದರೆ ತಜ್ಞರು ಈ ಸಿದ್ಧಾಂತವನ್ನು ತಪ್ಪು ಎಂದು ಹೇಳುತ್ತಾರೆ.

Tap to resize

ಆಹಾರ ತಜ್ಞರ  ಪ್ರಕಾರ ಹಗಲಿನಲ್ಲಿ ಕಡಿಮೆ ತಿಂದರೆ ಸಹಜವಾಗಿಯೇ ರಾತ್ರಿ ವೇಳೆ ಹೆಚ್ಚು ತಿನ್ನುತ್ತೀರಿ. ನೀವು
ಹೆಚ್ಚು ವ್ಯಾಯಾಮ ಮಾಡಿದರೂ, ರಾತ್ರಿ ವೇಳೆ ಹೆಚ್ಚು ತಿಂದರೆ ಸಮಸ್ಯೆಗಳು ಸಂಭವಿಸುತ್ತದೆ. ಇದರಿಂದ ನಿಮಗೆ
ಅಸಿಡಿಟಿ (acidity) ಮತ್ತು ಕಿರಿಕಿರಿ ಅನುಭವವಾಗಬಹುದು. ಇದರಿಂದ ರಾತ್ರಿ ನಿದ್ರೆ ಮಾಡಲು ಸಾಧ್ಯವಾಗದೆ ಇರಬಹುದು. 

ಬಾಳೆಹಣ್ಣು ಅಥವಾ ಮೊಸರನ್ನ (curd rice) ತಿನ್ನಿ
ರಾತ್ರಿ ಮಾತ್ರ ತಿನ್ನಬೇಕು ಎಂದು ಕೊಂಡರೆ ಮನೆಯಿಂದ ಹೊರಡುವ ಮುನ್ನ ಬಾಳೆಹಣ್ಣನ್ನು ಸೇವಿಸಿ. ತಡರಾತ್ರಿಯ
ಭೋಜನಕ್ಕೆ ರೆಸ್ಟೋರೆಂಟ್ ಗೆ ಹೋಗಿ ಸ್ವಲ್ಪ ಪಾನೀಯಗಳನ್ನು ಸೇವಿಸುತ್ತಿದ್ದರೆ, ಅದಕ್ಕೂ ಮೊದಲು ಮೊಸರು
ಮತ್ತು ಬಾಳೆಹಣ್ಣನ್ನು ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ. ಇದು ಪ್ರಿಬಯೋಟಿಕ್ ಮತ್ತು ಪ್ರೋಬಯಾಟಿಕ್ ನ
ಅತ್ಯುತ್ತಮ ಸಂಯೋಜನೆ.
 

ದೀಪಾವಳಿಯಂದು ಸಿಹಿ ತಿಂಡಿ ತಿನ್ನಿ
ಚಾಕೊಲೇಟ್, ಕುಕೀಸ್ (coolies)  ಅಥವಾ ಕೇಕ್ ಗಳಂತಹ ತ್ವರಿತ ಸಿಹಿತಿಂಡಿಗಳನ್ನು ತಿನ್ನುವುದಕ್ಕಿಂತ ದೀಪಾವಳಿಯಂದು ಕೆಲವು ಸಿಹಿತಿಂಡಿಗಳನ್ನು ಸೇವಿಸುವುದು ಉತ್ತಮ ಎಂದು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ. ಒಳ್ಳೆಯ
ವಿಷಯವೆಂದರೆ ಸಿಹಿತಿಂಡಿಯು ಆರೋಗ್ಯಕ್ಕೆ ಹಾನಿ ಉಂಟಾಗುವುದನ್ನು ತಪ್ಪಿಸಲು ತುಂಬಾ ಪ್ರಯೋಜನಕಾರಿ.

ಬುದ್ಧಿವಂತಿಕೆಯಿಂದ ಆಹಾರವನ್ನು ಆಯ್ಕೆ ಮಾಡಿ.
ರುಜುತಾ ದಿವೇಕರ್ ಪ್ರಕಾರ, ತಡರಾತ್ರಿಯಲ್ಲಿ ಏನನ್ನಾದರೂ ತಿನ್ನುತ್ತಿದ್ದರೆ, ಒಂದು ಅಥವಾ ಎರಡು ಸ್ಟಾರ್ಟರ್ (starters)
ಗಳನ್ನು ಆಯ್ಕೆ ಮಾಡಿ. ಖಂಡಿತವಾಗಿಯೂ ನೀವು ಸಾಕಷ್ಟು ಭಕ್ಷ್ಯಗಳ ಆಯ್ಕೆಗಳನ್ನು ಹೊಂದಿದ್ದೀರಿ. ,ಆದರೆ
ಎಲ್ಲವನ್ನು ತಿನ್ನುವ ಬದಲು ಕೇವಲ ಒಂದು ಭಕ್ಷ್ಯವನ್ನು ಮಾತ್ರ ಆಯ್ಕೆ ಮಾಡುವುದು ಉತ್ತಮ, ಮತ್ತು ಹೆಚ್ಚೆಂದರೆ
ಮೂರು ವಸ್ತುಗಳನ್ನು ತಿನ್ನಬಹುದು. ಅದರಿಂದ ನಿಮಗೆ ಯಾವುದೇ ಹಾನಿಯಿಲ್ಲ.

ತುಪ್ಪವನ್ನು ಪಾದಗಳಲ್ಲಿ ಉಜ್ಜಿ
ತಡವಾಗಿ ಊಟವಾದ ನಂತರ ಮನೆಗೆ ಹಿಂದಿರುಗಿದಾಗ,  ತುಪ್ಪದಿಂದ ಪಾದಗಳನ್ನು ಮಸಾಜ್ (feet massage) ಮಾಡಬೇಕು.  
ಪಾದಗಳಿಗೆ ಸ್ವಲ್ಪ ತುಪ್ಪವನ್ನು ಮಸಾಜ್ ಮಾಡುವುದರಿಂದ ಗ್ಯಾಸ್ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆ
ನಿವಾರಣೆಯಾಗಿ ಉತ್ತಮ ನಿದ್ರೆ ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ದಿವೇಕರ್ ಹೇಳುತ್ತಾರೆ. ಒಂದು
ಲೋಟ ಬೆಚ್ಚಗಿನ ನೀರು ಕುಡಿಯುವುದು ಸಹ ಒಳ್ಳೆಯದು.  
 

ಹಾಗಾಗಿ ಈಗ ದೀಪಾವಳಿಯಂದು ತಡರಾತ್ರಿ ಭೋಜನಕ್ಕೆ ಹೆದರಬೇಕಾಗಿಲ್ಲ. ನಿಮ್ಮ ಅರೋಗ್ಯ ಪರಿಸ್ಥಿತಿ,
ತೂಕ ಹೆಚ್ಚಳದ ಬಗ್ಗೆ ಹೆದರದೆ ನೀವು ಆರಾಮವಾಗಿ ದೀಪಾವಳಿಯ ರಾತ್ರಿಯ ಭೋಜನವನ್ನು ಎಂಜಾಯ್
ಮಾಡಬಹುದು. ಜೊತೆಗೆ ಉತ್ತಮ ಆರೋಗ್ಯವನ್ನು ಸಹ ಕಾಪಾಡಬಹುದು. ಈ ಸಲಹೆಗಳನ್ನು ನೀವೂ ಅನುಸರಿಸಿ,
ದೀಪಾವಳಿಯನ್ನು ಎಂಜಾಯ್ ಮಾಡಿ. 

Latest Videos

click me!