ಬಾಯಲ್ಲಿ ನೀರೂರಿಸುವ ತಿಂಡಿಗಳು
ಚಳಿಗಾಲದಲ್ಲಿ ಕರಿದ ಪದಾರ್ಥ, ಇವ್‌ನಿಂಗ್ ತಿನಿಸುಗಳ ಹೆಚ್ಚು ರುಚಿಕರವೆನಿಸುತ್ತದೆ. ಚುಮುಚುಮು ಚಳಿಗೆ ಒಂದು ಕಪ್ ಚಹಾ ಅಥವಾ ರುಚಿಕರ ತಿಂಡಿಗಳು ತಿಂದರೆ ಸ್ವರ್ಗಕ್ಕೆ ಮೂರೇಗೇಣು.ತಿಂಡಿಗಳನ್ನು ಆಯ್ಕೆ ಮಾಡುವಾಗ ನಮ್ಮಲ್ಲಿ ಆಯ್ಕೆಗಳ ಕೊರತೆಯಿಲ್ಲ. ಚಳಿಗಾಲದಲ್ಲಿ ವಿಶೇಷವಾಗಿ ಕೆಲವು ತಿನಿಸುಗಳು ಇವೆ ಅವು ಯಾವೆಂದು ಇಲ್ಲಿ ನೋಡೋಣ.
ಪನ್ನೀರ್ ಪಕೋಡ
ಪಕೋಡಗಳನ್ನು ತುಂಬಾ ಮಿಸ್ ಮಾಡ್ಕೊಳ್ತೀವಿ. ಯಾವ ಪಕೋಡ ಅಂತ ಹೇಳೋಕೆ ಆಯ್ಕೆಗಳೇ ಇಲ್ಲ, ಎಲ್ಲಾನೂ ಇಷ್ಟ! ಈ ರುಚಿಕರ ಪನ್ನೀರ್ ಪಕೋಡ ಮಾಡೋದು ಕಷ್ಟನೂ ಅಲ್ಲ. ಪನ್ನೀರ್ ಅನ್ನು ಮಸಾಲೆ ಕಡ್ಲೆ ಹಿಟ್ಟಿನಲ್ಲಿ ಅದ್ದಿ, ಚಿನ್ನದ ಬಣ್ಣ ಬರುವವರೆಗೆ ಕರಿಯಬೇಕು.ಚಳಿಗಾಲದಲ್ಲಿ ತಿಂಡಿಗೆ ಹಾಂಬಲಿಸುತ್ತಿದ್ದರೆ, ಈ ಉತ್ತಮ ತಿಂಡಿಗಳನ್ನು ಈಗಲೇ ಆರ್ಡರ್ ಮಾಡಿ ಅಂತ ನಮ್ಮ ಸಲಹೆ.
ಬ್ರೆಡ್ ಪಕೋಡ
ಕೆಲವು ತಿಂಡಿಗಳು ನಮಗೆ ತಕ್ಷಣ ಖುಷಿ ಕೊಡುತ್ತವೆ, ಅದರಲ್ಲಿ ಒಂದು ಬ್ರೆಡ್ ಪಕೋಡ. ಈ ರುಚಿಕರ ತಿಂಡಿ ನಮ್ಮ ಸಂಜೆ ಚಹಾ ಮತ್ತು ಚಳಿಗೆ ಉತ್ತಮ ಜೋಡಿ. ಪುದೀನಾ ಚಟ್ನಿಯೊಂದಿಗೆ ಸವಿಯಲು ಮರೆಯಬೇಡಿ.
ಸಮೋಸ ಚಾಟ್
ಸಂಜೆ ಸಮೋಸ ತಿನ್ನದೇ ಇರಲು ಸಾಧ್ಯವೇ ಇಲ್ಲ. ಸಮೋಸಾ ಬಹುತೇಕರಿಗೆ ಇಷ್ಟ. ಹಾಗಾಗಿ ಈ ಹೊಸ ಸಮೋಸ ಚಾಟ್ ಅನ್ನು ಟ್ರೈ ಮಾಡಲೇಬೇಕು! ಸಮೋಸದ ಮೇಲೆ ಮಸಾಲೆ ಚನಾ, ಮೊಸರು, ಈರುಳ್ಳಿ, ಕೊತ್ತಂಬರಿ ಮತ್ತು ಸೇವ್ ಹಾಕಿ, ಅದರ ರುಚಿಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ. ಒಮ್ಮೆ ಈ ತಿಂಡಿಯನ್ನು ಬಿಸಿ ಬಿಸಿ ತಿಂದರೆ, ನೀವು ಮತ್ತೆ ಮತ್ತೆ ತಿನ್ನಬೇಕೆಂದು ಬಯಸುತ್ತೀರಿ ಎಂದು ನಮಗೆ ಖಾತ್ರಿ.
ದಾಲ್ ಕಚೋರಿ
ಇನ್ನೊಂದು ತುಂಬಾ ಇಷ್ಟಪಡುವ ತಿಂಡಿ ಕಚೋರಿ. ಇದು ಗರಿಗರಿಯಾದ, ಮಸಾಲೆಯುಕ್ತ ಮತ್ತು ರುಚಿಕರವಾದ ಹೆಸರುಬೇಳೆಯಿಂದ ತುಂಬಿರುತ್ತದೆ. ಮಸಾಲೆ ರುಚಿಯನ್ನು ಸಮತೋಲನಗೊಳಿಸಲು ನೀವು ಇದನ್ನು ಹಾಗೆಯೇ ಅಥವಾ ಸ್ವಲ್ಪ ಸಿಹಿ ಚಟ್ನಿಯೊಂದಿಗೆ ತಿನ್ನಬಹುದು. ಸಂಜೆಯಲ್ಲಿ ಈ ಕ್ಲಾಸಿಕ್ ರಾಜಸ್ಥಾನಿ ತಿಂಡಿಯನ್ನು ಆನಂದಿಸಿ.
ಟಿಕ್ಕಿ
ಭಾರತೀಯರ ಆಲೂ ಟಿಕ್ಕಿ ಪ್ರೀತಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಮೊಸರು ಮತ್ತು ಸಿಹಿ ಮತ್ತು ಖಾರದ ಚಟ್ನಿಯೊಂದಿಗೆ ಗರಿಗರಿಯಾದ ಟಿಕ್ಕಿಯನ್ನು ತಿನ್ನುವ ಖುಷಿಯನ್ನು ವರ್ಣಿಸಲು ಸಾಧ್ಯವಿಲ್ಲ. ನಾವು ವರ್ಷಪೂರ್ತಿ ಈ ಕ್ಲಾಸಿಕ್ ಸ್ಟ್ರೀಟ್ ಫುಡ್ ಅನ್ನು ಸವಿಯಬಹುದು. ಅದರಲ್ಲೂ ಚಳಿಗಾಲದಲ್ಲಿ ಬಿಸಿಬಿಸಿಯಾಗಿ ಚಹಾದೊಂದಿಗೆ ತಿನ್ನುತ್ತಿದ್ದರೆ ಆಹಾ.. ಎನಿಸದಿರದು.