ನೀವು ಊಟ ಮಾಡಿದ ನಂತರ ಹಣ್ಣುಗಳನ್ನು ಸೇವಿಸಿದರೆ, ಅದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ವಾಸ್ತವವಾಗಿ, ಆಹಾರವನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಮತ್ತೊಂದೆಡೆ, ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಇರುತ್ತದೆ ಮತ್ತು ಅವು ಹೊಟ್ಟೆ ಮತ್ತು ದೇಹವನ್ನು ತಂಪಾಗಿಸುತ್ತವೆ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬೆಳಗ್ಗೆ ನೀವು ಹಣ್ಣುಗಳನ್ನು ತಿನ್ನಬಹುದು. ಹೆಚ್ಚಿನ ಸಮಸ್ಯೆಗಳಿದ್ದರೆ ವೈದ್ಯರನ್ನುಸಂಪರ್ಕಿಸಿ.