ಕಣ್ಣುಗಳ ಸಹಾಯದಿಂದ, ಹೃದಯದ ಒಳಗೆ ರೂಪುಗೊಳ್ಳುವ ರೋಗವನ್ನು (heart problem) ಕಂಡುಹಿಡಿಯಬಹುದು. ಹೌದು, ಹೃದಯಕ್ಕೆ ಏನಾದರು ಸಮಸ್ಯೆ ಉಂಟಾಗುತ್ತೆ ಅನ್ನೋದಾದ್ರೆ, ಮೊದಲಿಗೆ ಕಣ್ಣುಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತೆ, ಬಳಿಕ ನಿಧಾನವಾಗಿ ಅದು ಎದೆನೋವಿನ ಲಕ್ಷಣಗಳನ್ನು ಸಹ ತೋರಿಸುತ್ತೆ. ಹೃದಯವನ್ನು ಆರೋಗ್ಯವಾಗಿಡಲು ನೀವು ಮೊದಲನೆಯದಾಗಿ ಕಣ್ಣುಗಳ ಆರೋಗ್ಯದ ಕಡೆಗೆ ಗಮನ ಹರಿಸಬೇಕು.
ಹೃದ್ರೋಗದ ಅತಿದೊಡ್ಡ ಲಕ್ಷಣವೆಂದರೆ ಎದೆ ನೋವು, ಆದರೆ ರೋಗವು ಸಾಕಷ್ಟು ತೀವ್ರವಾದ ನಂತರ ಇದು ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ ಹೃದಯಾಘಾತವೂ (heart attack) ಬರಬಹುದು. ಅನೇಕ ಬಾರಿ ವೈದ್ಯರು ವಿವಿಧ ಆರೋಗ್ಯ ಪರೀಕ್ಷೆಗಳ ಸಹಾಯದಿಂದ ಹೃದ್ರೋಗಗಳನ್ನು ಪತ್ತೆಹಚ್ಚುತ್ತಾರೆ, ಆದರೆ ಇದಕ್ಕೆ ಸಾಕಷ್ಟು ಹಣ ಖರ್ಚಾಗಬಹುದು.
ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಪ್ರಕಾರ, ಕಣ್ಣುಗಳು ಹೃದಯದ ಕನ್ನಡಿಯಾಗಿದೆ ಮತ್ತು ಇದು ಹೃದಯದಲ್ಲಿನ ತೊಂದರೆಯನ್ನು ಸಹ ಸೂಚಿಸುತ್ತದೆ ಎಂದು ತಿಳಿಸಿದೆ. ಕಣ್ಣುಗಳಲ್ಲಿ ಉಂಟಾಗುವ (problems in eyes) ಕೆಲವು ಬದಲಾವಣೆಗಳ ಕಡೆಗೆ ಗಮನ ನೀಡುವ ಮೂಲಕ ಹೃದ್ರೋಗಗಳನ್ನು ಕಂಡು ಹಿಡಿಯಬಹುದು. ಅವುಗಳ ಬಗ್ಗೆ ತಿಳಿಯೋಣ.
ರೆಟಿನಾದಲ್ಲಿನ ಬದಲಾವಣೆಗಳು: ಕಣ್ಣಿನ ಪೊರೆಯ ಹಿಂದೆ ಸೂಕ್ಷ್ಮ ರೆಟಿನಾ ಇದೆ ಮತ್ತು ಅಧಿಕ ರಕ್ತದೊತ್ತಡವು (high blood pressure) ಅದನ್ನು ಹಾನಿಗೊಳಿಸುತ್ತದೆ. ಏಕೆಂದರೆ, ಅಧಿಕ ರಕ್ತದೊತ್ತಡವು ರೆಟಿನಾಕ್ಕೆ ರಕ್ತವನ್ನು ಸಾಗಿಸುವ ಸಣ್ಣ ರಕ್ತನಾಳಗಳನ್ನು ದುರ್ಬಲಗೊಳಿಸಬಹುದು ಮತ್ತು ಅವು ಒಡೆದು ರೆಟಿನಾದಲ್ಲಿ ರಕ್ತಸ್ರಾವವಾಗಬಹುದು.
ಕಣ್ಣುಗಳ ಮೂಲೆಯಲ್ಲಿ ಹಳದಿ ಉಬ್ಬು: ಕೊಲೆಸ್ಟ್ರಾಲ್ (cholesterol) ಹೆಚ್ಚಾದಾಗ ಹೃದ್ರೋಗದ ಅಪಾಯ ಗಂಭೀರವಾಗುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಕಣ್ಣುಗಳಿಂದ ಸಹ ಸೂಚಿಸಬಹುದು. ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ಗಳಂತಹ ಕೊಳಕು ಜಿಗುಟು ವಸ್ತುಗಳು ಹೆಚ್ಚಾದಾಗ, ಕಣ್ಣುಗಳ ಮೂಲೆಯಲ್ಲಿ ಮೃದುವಾದ ಹಳದಿ ಉಬ್ಬು ಕಾಣಿಸಿಕೊಳ್ಳಬಹುದು ಎಂದು ಹಾರ್ವರ್ಡ್ ಹೇಳುತ್ತದೆ.
ಕಣ್ಣಿನ ಪೊರೆ: ಕಣ್ಣಿನ ಪೊರೆಯಿಂದಾಗಿ, ಕಣ್ಣಿನ ಮಸೂರವು ಮಸುಕಾಗುತ್ತದೆ, ಇದರಿಂದಾಗಿ ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಕಳೆದುಹೋಗುತ್ತದೆ. ಎನ್ಸಿಬಿಐನಲ್ಲಿ ಪ್ರಕಟವಾದ ಅಧ್ಯಯನವು ಕಣ್ಣಿನ ಪೊರೆ ರೋಗಿಗಳಿಗೆ ಹೃದ್ರೋಗದ ಹೆಚ್ಚಿನ ಅಪಾಯವಿದೆ ಎಂದು ಕಂಡುಹಿಡಿದಿದೆ. ಆದ್ದರಿಂದ, ಇದು ಹೃದ್ರೋಗಗಳ ಲಕ್ಷಣವೂ (symptoms of hear problem) ಆಗಿರಬಹುದು.
ದುರ್ಬಲ ದೃಷ್ಟಿ: ಹೃದ್ರೋಗಕ್ಕೆ ಕಾರಣವಾಗುವ ರಕ್ತನಾಳಗಳಲ್ಲಿ ತಡೆ ಉಂಟಾದಾಗ ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ಏಕೆಂದರೆ, ಕಣ್ಣುಗಳಿಗೆ ಸಾಕಷ್ಟು ರಕ್ತ ಮತ್ತು ಆಮ್ಲಜನಕ ಸಿಗುವುದಿಲ್ಲ. ಇದರಿಂದಾ ಜೀವಕೋಶಗಳು ಸಾಯಲು ಪ್ರಾರಂಭಿಸುತ್ತವೆ. ಇದರಿಂದಾಗಿ ಕಣ್ಣಿನ ದೃಷ್ಟಿ (eyesight) ದುರ್ಬಲವಾಗುತ್ತದೆ.
ಹೃದಯ ಮತ್ತು ಕಣ್ಣುಗಳನ್ನು ಆರೋಗ್ಯವಾಗಿಡಲು ಈ ಸಲಹೆ ಪಾಲಿಸಿ
ಧೂಮಪಾನ ಸಂಪೂರ್ಣವಾಗಿ ನಿಲ್ಲಿಸಿ. (stop smoking)
ತೂಕವನ್ನು ನಿಯಂತ್ರಣದಲ್ಲಿಡಿ.
ಹೃದಯ ಮತ್ತು ಕಣ್ಣುಗಳಿಗೆ ಪ್ರಯೋಜನಕಾರಿಯಾದ ಆಹಾರ ಸೇವಿಸಿ.
ನಿಯಮಿತವಾಗಿ ಹೃದಯ ಪರೀಕ್ಷೆಗಳು ಮತ್ತು ಕಣ್ಣಿನ ತಪಾಸಣೆಗಳನ್ನು ಮಾಡಿಸಿಕೊಳ್ಳಿ.