1940 Women Gym Video: ವ್ಯಾಯಾಮವೂ ಬೇಡ, ಡಯೆಟ್‌ ಬೇಡ; ಆ ಮಶಿನ್ ಮೇಲೆ ಕೂತು, ಮಲಗಿ ಸಣ್ಣ ಆಗ್ತಿದ್ದ ಮಹಿಳೆಯರು!

Published : Nov 26, 2025, 03:19 PM IST

1940 Women Gym Video: ಸಾಮಾನ್ಯ ಜನರಿಂದ ಸೆಲೆಬ್ರಿಟಿಗಳವರೆಗೆ ಅನೇಕರು ಜಿಮ್‌ ಮೊರೆ ಹೋಗೊದುಂಟು. ಸಾಮಾನ್ಯ ಜನರು ಫಿಟ್‌ನೆಸ್‌ ಕಡೆಗೆ ಗಮನ ಕೊಡುತ್ತಾರೆ. ಆದರೆ 1940 ರಲ್ಲಿ ಜಿಮ್‌ ಇರಲಿಲ್ಲ. "ಸ್ಲೆಂಡರೈಸಿಂಗ್ ಸಲೂನ್‌ಗಳು" (Slenderizing Salons) ಇದ್ದವು. 

PREV
16
1940 ರಲ್ಲಿ ಜಿಮ್‌ ಇರಲಿಲ್ಲ

ಇಂದು ಸಾಮಾನ್ಯ ಜನರಿಂದ ಸೆಲೆಬ್ರಿಟಿಗಳವರೆಗೆ ಅನೇಕರು ಜಿಮ್‌ ಮೊರೆ ಹೋಗೊದುಂಟು. ಸಾಮಾನ್ಯ ಜನರು ಕೂಡ ಫಿಟ್‌ನೆಸ್‌ ಕಡೆಗೆ ಗಮನ ಕೊಡುತ್ತಾರೆ. ಆದರೆ 1940 ರಲ್ಲಿ ಜಿಮ್‌ ಇರಲಿಲ್ಲ. "ಸ್ಲೆಂಡರೈಸಿಂಗ್ ಸಲೂನ್‌ಗಳು" (Slenderizing Salons) ಇದ್ದವು. ಅಂದಿನ ಸಲೂನ್‌ ವಿಡಿಯೋ ಈಗ ವೈರಲ್‌ ಆಗ್ತಿದೆ.

26
ರೋಲರ್‌ಗಳು, ಮಸಾಜರ್‌

ಈ ಸಲೂನ್‌ಗಳಲ್ಲಿ ರೋಲರ್‌ಗಳು, ಮಸಾಜರ್‌ಗಳಂತಹ ಯಾಂತ್ರಿಕ ಸಾಧನಗಳಿದ್ದವು. ಇವುಗಳಿಂದ ಮಹಿಳೆಯರು ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಆಗ ಮಹಿಳೆಯರಿಗೆ ಇವು ಜಿಮ್‌ಗಳ ಥರ ಇರುತ್ತಿರಲಿಲ್ಲ. ಆಹಾರ ಪದ್ಧತಿ ಕೂಡ ಅಷ್ಟು ವಿಭಿನ್ನವಾಗಿ ಇರುತ್ತಿರಲಿಲ್ಲ. ವ್ಯಾಯಾಮವಿಲ್ಲದೆ ತೂಕ ಇಳಿಸಿಕೊಳ್ಳುತ್ತಿದ್ದರು. ದೇಹದ ಆಕಾರ ಕೂಡ ಬದಲಾಗುತ್ತಿತ್ತು.

36
ಯಂತ್ರದ ಮೇಲೆ ಮಲಗಬೇಕು/ ಕೂರಬೇಕು

ಆ ಸಲೂನ್‌ಗಳಲ್ಲಿ ದೇಹದ ಕೊಬ್ಬು ಕರಗುತ್ತಿತ್ತು. ಅಷ್ಟೇ ಅಲ್ಲದೆ ದೇಹಕ್ಕೆ ದೃಢತೆ ಕೊಡುತ್ತಿತ್ತು. ಮಹಿಳೆಯರು ಈ ಯಂತ್ರಗಳ ಮೇಲೆ ಕುಳಿತುಕೊಳ್ಳುತ್ತಿದ್ದರು ಅಥವಾ ಮಲಗುತ್ತಿದ್ದರು. ಆಗ ಆ ಯಂತ್ರಗಳು ಅವರ ದೇಹವನ್ನು ವೈಬ್ರೇಟ್ ಮಾಡುತ್ತಿದ್ದವು, ಮಸಾಜ್ ಮಾಡುತ್ತಿದ್ದವು.

46
ಇಂದಿನ ಜಿಮ್‌ ಬೇರೆಯೇ ಇದೆ

ಇಂದು ಜಿಮ್‌ ಅಂದರೆ ಯೋಗ ಸ್ಟುಡಿಯೋಗಳು, ಕಾರ್ಡಿಯೋ ವ್ಯಾಯಾಮ, ಜಿಮ್ನಾಸ್ಟಿಕ್‌ ಮುಂತಾದ ವಿಧಗಳಿವೆ. ಆದರೆ 1940 ರಲ್ಲಿ ಭಾರ ಎತ್ತುವ ಅಥವಾ ಟ್ರೆಡ್‌ಮಿಲ್ ಮೇಲೆ ಓಡುವ ಬದಲು, ವಿಚಿತ್ರವಾದ ಮಶಿನ್‌ಗಳನ್ನು ಬಳಸುತ್ತಿದ್ದರು.

56
ಹೇಗೆ ಸಣ್ಣ ಆಗುತ್ತಿದ್ದರು?

ವೈಬ್ರೇಟಿಂಗ್ ಬೆಲ್ಟ್‌ಗಳನ್ನು ದೇಹದ ಸುತ್ತಲೂ ಬಿಗಿಯಾಗಿ ಕಟ್ಟುತ್ತಿದ್ದರು. ಸ್ವಿಚ್ ಆನ್ ಮಾಡಿದ ತಕ್ಷಣ, ಬೆಲ್ಟ್ ಅತಿಯಾದ ವೇಗದಲ್ಲಿ Vibrate ಆಗುತ್ತಿತ್ತು. ಮಹಿಳೆಯರು ನಿಂತು ಅಥವಾ ಕುಳಿತು ಈ ಬೆಲ್ಟ್‌ಗಳನ್ನು ಹೊಟ್ಟೆ, ಸೊಂಟ, ತೊಡೆಯ ಭಾಗಕ್ಕೆ ಕಟ್ಟಿಕೊಳ್ಳುತ್ತಿದ್ದರು.

66
ವೈಜ್ಞಾನಿಕವಾಗಿ ನಿಜಾನಾ?

ರೋಲರ್ ಮತ್ತು ಮಸಾಜ್ ಯಂತ್ರಗಳು, ರಿಡ್ಯೂಸಿಂಗ್ ಟೇಬಲ್‌ಗಳನ್ನು ಬಳಸುತ್ತಿದ್ದರು. ಆಗ ಶ್ರಮವಿಲ್ಲದೆ ಅವರು ಸಣ್ಣ ಆಗಬಹುದಿತ್ತು, ದೇಹಕ್ಕೆ ಶೇಪ್‌ ಕೊಡಬಹುದಿತ್ತು ಎನ್ನಲಾಗಿದೆ. ವೈಜ್ಞಾನಿಕವಾಗಿ ಹೇಳುವುದಾದರೆ, ವೈಬ್ರೇಟ್‌ ಆಗೋದರಿಂದ ಅಥವಾ ಮಸಾಜ್‌ನಿಂದ ದೇಹದ ಕೊಬ್ಬು ಕರಗುವುದಿಲ್ಲ. ಈ ಯಂತ್ರಗಳು ರಕ್ತ ಪರಿಚಲನೆಯನ್ನು ಸ್ವಲ್ಪಮಟ್ಟಿಗೆ ಸುಧಾರಿಸಬಹುದು, ಆದರೆ ಸಣ್ಣ ಮಾಡುತ್ತಿರಲಿಲ್ಲ.

Read more Photos on
click me!

Recommended Stories