ಮನೆಯಲ್ಲೊಬ್ಬರಿಗೆ ಕೊರೋನಾ ಬಂದರೇನು ಮಾಡಬೇಕು?

First Published May 28, 2020, 10:17 AM IST

ಜ್ವರ, ಒಣಕೆಮ್ಮು, ಉಸಿರಾಟದ ಸಮಸ್ಯೆ ಇತ್ಯಾದಿ ಕೋವಿಡ್‌ 19ನ ಲಕ್ಷಣಗಳು ಅನ್ನೋದು ನಮ್ಮೆಲ್ಲರಿಗೂ ಗೊತ್ತು. ಕೊರೋನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಒಂದು ವೇಳೆ ನಮ್ಮ ಮನೆಯಲ್ಲೇ ಯಾರಿಗಾದರೂ ಕೊರೋನಾದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಏನು ಮಾಡಬೇಕು ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.

ಆ ವ್ಯಕ್ತಿಯನ್ನು ಚೆನ್ನಾಗಿ ಗಾಳಿ ಬೆಳಕು ಇರುವ ಕೋಣೆಯಲ್ಲಿ ಪ್ರತ್ಯೇಕಿಸಿ ಇಡಬೇಕು.
undefined
ತಕ್ಷಣ ವೈದ್ಯರಲ್ಲಿ ಕರೆದೊಯ್ಯಬೇಕು, ಅವರು ರೋಗಿಯನ್ನು ಪರೀಕ್ಷಿಸಿ ಮುಂದಿನ ಹಂತಗಳ ಬಗ್ಗೆ ತಿಳಿಸುತ್ತಾರೆ.
undefined
ಆರೋಗ್ಯಾಧಿಕಾರಿಗಳಿಗೂ ವಿಷಯ ತಿಳಿಸಬೇಕು.
undefined
ಇವರನ್ನು ಐದಾರು ದಿನಗಳ ಕಾಲ ಮನೆಯಲ್ಲೇ ಇರಿಸಿಕೊಳ್ಳಲು ಹೇಳಿದರೆ 24*7 ಯಾರಾದರೊಬ್ಬರು ಅವರ ಆರೈಕೆ ನೋಡಿಕೊಳ್ಳಬೇಕು.
undefined
ಪ್ರತ್ಯೇಕ ಬಾತ್‌ರೂಮ್‌, ಶೌಚಾಲಯ, ಇವರ ಪ್ರತೀ ವಸ್ತುವನ್ನೂ ಪ್ರತ್ಯೇಕವಾಗಿಡೋದು, ಯಾರೂ ಸಂಪರ್ಕಕ್ಕೆ ಬರದಿರುವ ಹಾಗೆ ಮಾಡಬೇಕಾದದ್ದು ಅತ್ಯವಶ್ಯಕ.
undefined
ಇವರಿಗೆ ನೀಡುವ ಊಟ, ತಿಂಡಿಗಳೂ ಸ್ವಚ್ಛವಾಗಿರಬೇಕು.
undefined
ಇವರು ರೂಮ್‌ನಿಂದ ಹೊರಬರದ ಹಾಗೆ ಮಾಡೋದು ಬಹಳ ಮುಖ್ಯ.
undefined
ಒಂದು ವೇಳೆ ಹೊರಬಂದರೆ ಇವರು ಓಡಾಡಿದ, ಮುಟ್ಟಿದ ಜಾಗಗಳನ್ನು ಸ್ಯಾನಿಟೈಸ್‌ ಮಾಡಲೇಬೇಕು.
undefined
click me!