ಫುಡ್ ಆರ್ಡರ್ ಮಾಡಿದ ಗ್ರಾಹಕರಿಗೆ ಅಚ್ಚರಿ, ಡೆಲಿವರಿಗೆ ಬಂದ ಜೊಮ್ಯಾಟೋ ಸಿಇಒ & ಪತ್ನಿ!

First Published Oct 5, 2024, 3:54 PM IST

ಜೊಮ್ಯಾಟೋ ಮೂಲಕ ಫುಡ್ ಆರ್ಡರ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಹೀಗೆ ಎಂದಿನಂತೆ ಆರ್ಡರ್ ಮಾಡಿದ ಗ್ರಾಹಕರಿಗೆ ಅಚ್ಚರಿಯಾಗಿದೆ. ಕಾರಣ ಡೆಲಿವರಿಗೆ ಜೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಹಾಗೂ ಪತ್ನಿ ಗ್ರೇಸಿಯಾ ಆಗಮಿಸಿ ಸರ್ಪ್ರೈಸ್ ನೀಡಿದ್ದಾರೆ.

ಯಾವುದೇ ಸಮಯದಲ್ಲಿ, ಯಾವುದೇ ಪರಿಸ್ಥಿತಿಯಲ್ಲಿ ಫುಡ್ ಡೆಲಿವರಿ ಆ್ಯಪ್‌ಗಳು ತ್ವರಿತವಾಗಿ ಫುಡ್ ಡೆಲಿವರಿ ಮಾಡುತ್ತಿದೆ. ಈ ಪೈಕಿ ಜೊಮ್ಯಾಟೋ ಮುಂಚೂಣಿಯಲ್ಲಿದೆ. ಮಳೆ, ಜಲಾವೃತ ಪ್ರದೇಶ, ಪ್ರವಾಹದ ನಡುವೆಯೂ ಜೊಮ್ಯೋಟೋ ಡೆಲಿವರಿ ಎಜೆಂಟ್ ಆಹಾರ್ ಡೆಲಿವರಿ ಮಾಡಿ ಗಮನಸೆಳೆದ ಹಲವು ಘಟನೆ ನಡೆದಿದೆ. 
 

ಇದೀಗ ಫುಡ್ ಆರ್ಡರ್ ಮಾಡಿದ ಗ್ರಾಹಕರಿಗೆ ಅಚ್ಚರಿಯಾಗಿದೆ. ಕಾರಣ ಡೆಲಿವರಿ ಎಜೆಂಟ್ ಆಗಿ ಜೊಮ್ಯಾಟೋ ಕಂಪನಿ ಸಿಇಒ ದೀಪಿಂದರ್ ಗೋಯಲ್ ಹಾಗೂ ಪತ್ನಿ ಗ್ರೇಸಿಯಾ ಮುನೋಜ್ ಆಗಮಿಸಿದ್ದಾರೆ. ಈ ಜೋಡಿ ಫುಟ್ ಆರ್ಡರ್ ಮಾಡಿದ ಗ್ರಾಹಕರಿಗೆ ಆಹಾರ ವಿತರಿಸಿದ್ದಾರೆ. ಈ ಮೂಲಕ ಕಂಪನಿ ಸಿಇಒ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿ ಗ್ರಾಹಕರು, ಸಿಬ್ಬಂದಿಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.
 

Latest Videos


ಜೊಮ್ಯಾಟೋ ಯೂನಿಫಾರ್ಮ್ ಧರಿಸಿದ ಈ ಜೋಡಿ ಬೈಕ್ ಹತ್ತಿದ್ದಾರೆ. ಜೊತೆಗೆ ಜೊಮ್ಯಾಟೋ ಫುಡ್ ಡೆಲಿವರಿ ಬ್ಯಾಗ್ ಬೆನ್ನಿಗೆ ಹಾಕಿಕೊಂಡು ಡೆಲಿವರಿ ಮಾಡಲು ತೆರಳಿದ್ದಾರೆ. ಡೆಲಿವರಿ ಎಜೆಂಟ್ ರೀತಿಯಲ್ಲಿ ಈ ಜೋಡಿ ಗ್ರಾಹಕರಿಗೆ ಆಹಾರ ವಿತರಿಸಿದೆ. ಡೆಲಿವರಿ ಬಾಯ್‌ಗೆ ಎದುರಾಗುವ ಸಮಸ್ಯೆ ಇಲ್ಲಿ ಸಿಇಒಗೆ ಎದುರಾಗಿದೆ.  ವಿಳಾಸ ಹುಡುಕಲು ಜೊಮ್ಯಾಟೋ ಸಿಇಒ ಹಾಗೂ ಪತ್ನಿ ಕೆಲ ಕಾಲ ಪರದಾಡಿದ್ದಾರೆ. 
 

ದೀಪಿಂದರ್ ಗೋಯಲ್ ಹಾಗೂ ಗ್ರೇಸಿಯಾ ನೋಡಿದ ಹಲವು ಗ್ರಾಹಕರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಖುದ್ದು ಡೆಲಿವರಿಗೆ ತೆರಳಿದ ವಿಶೇಷ ಕ್ಷಣಗಳನ್ನು ದೀಪಿಂದರ್ ಗೋಯಲ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಗ್ರೇಸಿಯಾ ಮುನೋಝ್ ಜೊತೆಗೆ ಡೆಲವರಿಗೆ ತೆರಳಿದ್ದೆ ಎಂದು ಬರೆದುಕೊಂಡಿದ್ದಾರೆ. 
 

ದೀಪಿಂದರ್ ಗೋಯಲ್ ಈ ನಡೆದೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕಂಪನಿ ಸಿಇಒ ಡೆಲಿವರಿ ಎಜೆಂಟ್ ರೀತಿ ತೆರಳಿ ಆಹಾರ್ ಡೆಲಿವರಿ ಮಾಡುತ್ತಿರುವುದು ವಿಶೇಷ. ಬಹುತೇಕ ಕಂಪನಿ ಸಿಇಒ ಈ ರೀತಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಆರ್ಡರ್ ಮಾಡಿ ಸರ್, ಲೇಟ್ ಆದರೆ, ಆರ್ಡರ್ ಕ್ಯಾನ್ಸಲ್ ಮಾಡಿದರೆ ನೀವು ಕೆಲಸ ಕಳೆದುಕೊಳ್ಳಬಹುದು ಎಂದು ಕಂಪನಿ ಸಿಇಒಗೆ ಕಮೆಂಟ್ ಮಾಡಿದ್ದಾರೆ.
 

ದೀಪಿಂದರ್ ಗೋಯಲ್‌ನಿಂದ ಆರ್ಡರ್ ಸ್ವೀಕರಿಸಿದ್ದೇನೆ, ತುಂಬಾ ಖುಷಿಯಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ದೀಪಿಂದರ್ ಗೋಯಲ್ ಕಂಪನಿಯ ಮಾರ್ಕೆಟಿಂಗ್ ಚೆನ್ನಾಗಿ ಮಾಡುತ್ತಾರೆ. ಇವರಿಂದ ಹಲವು ಕಂಪನಿಗಳು ಕಲಿಯಬೇಕಿದೆ. ದೀಪಿಂದರ್ ಗೋಯಲ್ ಟ್ರಿಂಪ್ ದುಬಾರಿ ಬೈಕ್‌ನಲ್ಲಿ ಡೆಲಿವರಿಗೆ ತೆರಳಿದ್ದಾರೆ. ಒಂದು ದಿನ ಎಷ್ಟು ಡೆಲಿವರಿ ಮಾಡಿದ್ದೀರಿ ಎಂದು ಹಲವರು ಪ್ರಶ್ನಿಸಿದ್ದಾರೆ. 
 

click me!