ದಸರಾ, ದೀಪಾವಳಿಗೆ ಬೆಲ್ಲ-ಸಕ್ಕರೆ ಹಾಕದೇ ತಯಾರಿಸಿ ಆರೋಗ್ಯಕರ ಅಂಜೂರ ರೋಲ್ಸ್

First Published Oct 3, 2024, 8:09 AM IST

ದೀಪಾವಳಿ ಮತ್ತು ನವರಾತ್ರಿಗೆ ಕ್ಷಣಗಣನೆ ಶುರುವಾಗಿದೆ. ಹಬ್ಬ ಆಂದ್ರೆ ವಿಶೇಷ ಅಡುಗೆ ಜೊತೆ ಸಿಹಿ ಪದಾರ್ಥ ಇರಲೇಬೇಕು. ಆದರೆ ಇಂದು ಪ್ರತಿಯೊಂದು ಮನೆಯಲ್ಲಿ ಒಬ್ಬರು ಮಧುಮೇಹಿ ಕಂಡು ಬರುವ ಕಾಲ ಇದಾಗಿದೆ. ಹಬ್ಬ ಅಂತ ಸಿಹಿ ಅಡುಗೆ ತಿಂದು ಮರುದಿನ ಆಸ್ಪತ್ರೆಗೆ ದಾಖಲಾಗುವ ಜನರು ನಮ್ಮ ಜೊತೆಯಲ್ಲಿದ್ದಾರೆ.

ಇಂದು ನಾವು ನಿಮಗೆ ಸಕ್ಕರೆ ಮತ್ತು ಬೆಲ್ಲ ಬಳಸದೇ ಹೇಗೆ ವಿಶೇಷ ಪಾಕ ಹೇಗೆ ತಯಾರಿಸಬೇಕು ಎಂಬುದನ್ನು ಹೇಳುತ್ತಿದ್ದೇವೆ. ಈ ಅಡುಗೆಯನ್ನು ಡ್ರೈಫ್ರೂಟ್ಸ್ ಬಳಸಿ ಮಾಡಲಾಗುತ್ತದೆ. ಮಕ್ಕಳಿಂದ ವೃದ್ಧರವರೆಗೂ ಇದು ಎಲ್ಲರ ಆರೋಗ್ಯಕ್ಕೂ ಒಳ್ಳೆಯದಾಗಿದೆ. ಇದನ್ನು 10-15 ದಿನಗಳವರೆಗೆ ಸ್ಟೋರ್ ಮಾಡಬಹುದಾಗಿದೆ. ಇಂದು ನಾವು ನಿಮಗೆ ಅಂಜುರ್ ರೋಲ್ ಹೇಗೆ ಮಾಡಬೇಕೆಂದು ಹೇಳುತ್ತಿದ್ದೇವೆ.

ಅಂಜುರ್ ರೋಲ್ ಮಾಡಲು ಬೇಕಾಗುವ ಸಾಮಾಗ್ರಿಗಳು

ಒಣ ಅಂಜೂರ -200 ಗ್ರಾಂ, ಖರ್ಜೂರ-200 ಗ್ರಾಂ, ವಾಲ್‌ ನಟ್ಸ್‌- 100 ಗ್ರಾಂ, ಬಾದಾಮ್‌ – 100 ಗ್ರಾಂ, ಗೋಡಂಬಿ-100 ಗ್ರಾಂ, ಪಿಸ್ತಾ- 2 ಟೀ ಸ್ಪೂನ್, ಏಪ್ರಿಕಾಟ್‌(ಜಲ್ದರು ಹಣ್ಣು)- 4, ಒಣದ್ರಾಕ್ಷಿ – 10 ರಿಂದ 15, ಗಸಗಸೆ- 1 ಟೀ ಸ್ಪೂನ್, ತೆಂಗಿನಕಾಯಿ ಪುಡಿ – 2 ಚಮಚ, ತುಪ್ಪ- 4 ಟೀ ಸ್ಪೂನ್, ಏಲಕ್ಕಿ ಪುಡಿ- ಅರ್ಧ ಟೀ ಸ್ಪೂನ್‌, ಸೂರ್ಯಕಾಂತಿ ಬೀಜ- 2 ಟೀ ಸ್ಪೂನ್

Latest Videos


ಅಂಜುರ್ ರೋಲ್ ಮಾಡುವ ವಿಧಾನ

ಮೊದಲಿಗೆ ಒಣ ಅಂಜೂರ ಮತ್ತು ಖರ್ಜೂರ ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಲೆ ಆನ್ ಮಾಡ್ಕೊಂಡು ಬಾಣಲೆ ಇರಿಸಿಕೊಂಡು ಎರಡು ಟೀ ಸ್ಪೂನ್ ತುಪ್ಪ ಹಾಕಿಕೊಳ್ಳಿ. ತುಪ್ಪ ಬಿಸಿ ಆಗುತ್ತಿದ್ದಂತೆ ನುಣ್ಣಗೆ ರುಬ್ಬಿಕೊಂಡಿರುವ ಅಂಜೂರ ಮತ್ತು ಖರ್ಜೂರ ಪೇಸ್ಟ್ ಸೇರಿಸಿ ಕಡಿಮೆ ಉರಿಯಲ್ಲಿ ಸಾಫ್ಟ್ ಆಗೋವರೆಗೂ ಬೇಯಿಸಿಕೊಂಡು ಎತ್ತಿಟ್ಟುಕೊಳ್ಳಿ.

ಈಗ ಇದೇ ಬಾಣಲೆಗೆ ಎರಡು ಟೀ ಸ್ಪೂನ್ ತುಪ್ಪ ಹಾಕಿಕೊಳ್ಳಿ. ಈಗ ಇದಕ್ಕೆ ವಾಲ್‌ ನಟ್ಸ್, ಬಾದಾಮ್, ಗೋಡಂಬಿ, ಎಪ್ರಿಕಾಟ್, ಒಣದ್ರಾಕ್ಷಿ ಮತ್ತು ಸೂರ್ಯಕಾಂತಿ ಬೀಜ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಆನಂತರ ತೆಂಗಿನಪುಡಿ ಮತ್ತು ಗಸಗಸೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

ತದನಂತರ ಒಣ ಅಂಜೂರು ಮತ್ತು ಖರ್ಜೂರ ಪೇಸ್ಟ್ ಸೇರಿಸಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಈ ಮಿಶ್ರಣ ತಣ್ನಗಾದ ನಂತರ ಸಣ್ಣದಾಗಿ ಕತ್ತರಿಸಿಕೊಂಡಿರುವ ಪಿಸ್ತಾ ಸೇರಿಸಿಕೊಂಡು ಮಿಶ್ರಣವನ್ನು ರೋಲ್ ಮಾಡಿಕೊಂಡು ಸ್ಮಾಲ್ ಪೀಸ್‌ಗಳಾಗಿ ಕತ್ತರಿಸಿಕೊಳ್ಳಬೇಕು ಅಥವಾ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡರೆ ರುಚಿಯಾದ ಆರೋಗ್ಯಕರ ಅಂಜುರ್ ರೋಲ್ ಸವಿಯಲು ಸಿದ್ಧವಾಗುತ್ತದೆ.

click me!