ಸಂಜೆ ಸ್ನ್ಯಾಕ್ಸ್‌ಗೆ ಮಾಡ್ಕೊಳ್ಳಿ ಪಕ್ಕಾ ದೇಶಿ ಶೈಲಿಯ ಟೇಸ್ಟೀ ಅಂಡ್ ಯಮ್ಮೀ ಪೆಪ್ಪರ್ ಚಿಕನ್‌

First Published | Oct 1, 2024, 8:46 AM IST

ಸಂಜೆ ಸ್ನ್ಯಾಕ್ಸ್‌ಗೆ ಬಜ್ಜಿ, ಬೋಂಡಾ, ಮಂಡಕ್ಕಿ, ಸಮೋಸಾ, ಪಾನಿಪುರಿ, ಕಚೋರಿ ತಿನ್ನಬೇಕು ಎಂಬ ನಿಯಮವೇನು ಇಲ್ಲ. ನೀವು ನಾನ್ ವೆಜ್ ಪ್ರಿಯರಾಗಿದ್ದರೆ 10-15 ನಿಮಿಷದಲ್ಲಿ ರುಚಿಯಾದ  ಪೆಪ್ಪರ್ ಚಿಕನ್ ಮಾಡಿಕೊಳ್ಳಬಹುದು.

ಪೆಪ್ಪರ್ ಚಿಕನ್ ಎಲ್ಲಾ ಕಡೆಯೂ ಮಾಡುತ್ತಿರುತ್ತಾರೆ. ಇಂದು ನಾವು ನಿಮಗೆ ಪಕ್ಕಾ ದೇಶಿ ಶೈಲಿಯಲ್ಲಿ ಹೇಗೆ ಟೇಸ್ಟೀ ಅಂಡ್ ಯಮ್ಮೀ ಪೆಪ್ಪರ್ ಚಿಕನ್‌ ಹೇಗೆ ಮಾಡೋದು ಅಂತ ಹೇಳುತ್ತಿದ್ದೇವೆ. ಈ ರೀತಿ ಪೆಪ್ಪರ್ ಚಿಕನ್ ಮಾಡಲು ಹೆಚ್ಚು ಸಮಯ ಸಹ ಬೇಕಾಗಲ್ಲ. ಸುಲಭವಾಗಿ ಪೆಪ್ಪರ್ ಚಿಕನ್ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.

ಪೆಪ್ಪರ್ ಚಿಕನ್‌ ಮಾಡಲು ಬೇಕಾಗುವ ಸಾಮಾಗ್ರಿಗಳು

ಚಿಕನ್‌ ಮಾಂಸ: 200 ಗ್ರಾಂ, ಈರುಳ್ಳಿ 1, ಹಸಿ ಮೆಣಸಿನಕಾಯಿ 2, ಅಚ್ಚ ಖಾರದ ಪುಡಿ 1 ಟೀ ಸ್ಪೂನ್, ಎಣ್ಣೆ: 4 ಟೀ ಸ್ಪೂನ್, ನಿಂಬೆ ರಸ: 2 ಟೀ ಸ್ಪೂನ್, ಅರಿಶಿನ ಪುಡಿ: ಚಿಟಿಕೆ, ಕಾಳು ಮೆಣಸಿನ ಪುಡಿ: 1 ಟೀ ಸ್ಪೂನ್, ಸೋಂಪು: 1 ಟೀ ಸ್ಪೂನ್, ಬೆಳ್ಳುಳ್ಳಿ-ಶುಂಠಿ ಪೇಸ್ಟ್‌: ಒಂದು ಟೀ ಸ್ಪೂನ್, ಕೋತಂಬರಿ ಸೊಪ್ಪು, ಧನಿಯಾ ಪುಡಿ: ಅರ್ಧ ಟೀ ಸ್ಪೂನ್,  ಗರಂ ಮಸಾಲಾ: 1 ಟೀ ಸ್ಪೂನ್

Tap to resize

ಪೆಪ್ಪರ್ ಚಿಕನ್ ಮಾಡುವ ವಿಧಾನ

ಮೊದಲು ಚಿಕನ್ ತುಂಡುಗಳನ್ನು ಬಿಸಿ ನೀರಿನಲ್ಲಿ ಸ್ವಚ್ಛಗೊಳಿಸಿ ಕತ್ತರಿಸಿಕೊಂಡು ನಿಂಬೆ ರಸ, ಅರಿಶಿನ ಪುಡಿ, ಕಾಳು ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪಿನೊಂದಿಗೆ ಮಿಕ್ಸ್ ಮಾಡಿಟ್ಟುಕೊಳ್ಳಿ. ಚಿಕನ್ ಬಿಸಿ ನೀರಿನಲ್ಲಿಯೇ ತೊಳೆದುಕೊಳ್ಳಬೇಕು. ಹೀಗೆ ಮಾಡೋದರಿಂದ ಅಡುಗೆಯ ರುಚಿ ಹೆಚ್ಚಾಗುತ್ತದೆ. ಇದಾದ ಬಳಿಕ ಕಾಳು ಮೆಣಸು ಮತ್ತು ಸೋಂಪುಗಳನ್ನು ತರಿತರಿಯಾಗಿ ಜಜ್ಜಿಕೊಳ್ಳಬೇಕು.

ತದನಂತರ ಈರುಳ್ಳಿ, ಹಸಿ ಮೆಣಸಿನಕಾಯಿ, ಕೋತಂಬರಿ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ನಂತರ ಒಲೆ ಆನ್ ಮಾಡ್ಕೊಂಡು ಕಡಾಯಿ ಇರಿಸಿಕೊಂಡು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಬರೋವರೆಗೂ ಫ್ರೈ ಮಾಡ್ಕೊಳ್ಳಿ. ನಂತರ ಇದಕ್ಕೆ ಹಸಿ ಮೆಣಸಿನಕಾಯಿ ಸೇರಿಸಿ ಬಾಡಿಸಿಕೊಳ್ಳಬೇಕು. ಬಳಿಕ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಸೇರಿಸಿಕೊಳ್ಳಿ.

ಈಗ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಜಜ್ಜಿಕೊಂಡಿರುವ ಸೋಂಪು, ಗರಂ ಮಸಾಲಾ  ಸೇರಿಸಿ. ಈಗ, ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡ್ಕೊಂಡು ಮುಚ್ಚಳ ಮುಚ್ಚಿ ಸ್ವಲ್ಪ ಸಮಯ ಬೇಯಿಸಲು ಬಿಡಿ. ಹೀಗೆ ಮಾಡೋದರಿಂದ ಚಿಕನ್‌ನಲ್ಲಿರುವ ನೀರಿನಂಶ ಆವಿಯಾಗುತ್ತದೆ. ಮೂರರಿಂದ ನಾಲ್ಕು ನಿಮಿಷದ ನಂತರ ಮುಚ್ಚಳ ತೆಗೆದು ಕೋತಂಬರಿ ಸೊಪ್ಪು ಸೇರಿಸಿದರೆ ಟೇಸ್ಟೀ ಅಂಡ್ ಯಮ್ಮೀ ಪೆಪ್ಪರ್ ಚಿಕನ್‌ ಸವಿಯಲು ಸಿದ್ಧವಾಗುತ್ತದೆ.

Latest Videos

click me!