ದಿನದಲ್ಲಿಯೇ ಹಾಳಾಗೋ ತರಕಾರಿ ವಾರಗಟ್ಟಲೆ ಹಾಳಾಗಬಾರದು ಅಂದ್ರೆ ಇಲ್ಲಿವೆ ಟಿಪ್ಸ್

Published : Apr 18, 2026, 03:12 PM IST

ಬೇಸಿಗೆಯಲ್ಲಿ ತರಕಾರಿಯನ್ನು ಸರಿಯಾಗಿ ಇಟ್ಕೊಳ್ಳೋದು ದೊಡ್ಡ ಸವಾಲು. ವಾರದಲ್ಲಿ ತರಕಾರಿ ಹಾಳಾಗುತ್ತೆ. ಫ್ರಿಜ್ ನಲ್ಲಿಟ್ರೂ ತರಕಾರಿ ಕೊಳೆಯೋದ್ರಿಂದ ತರಕಾರಿಗೆ ಕೊಟ್ಟ ಹಣವೆಲ್ಲ ವ್ಯರ್ಥವಾಗುತ್ತೆ. ತರಕಾರಿ ವರ್ಷಗಟ್ಟಲೆ ಚೆನ್ನಾಗಿರಬೇಕು ಅಂದ್ರೆ ನೀವು ಹಿಂದಿನ ಕಾಲದ ಟ್ರಿಕ್ಸ್ ಫಾಲೋ ಮಾಡ್ಬೇಕು. 

PREV
16
ತೇವಾಂಶ ತರಕಾರಿ ಶತ್ರು

ತರಕಾರಿಗಳು ಬೇಗನೆ ಹಾಳಾಗಲು ತೇವಾಂಶವು ದೊಡ್ಡ ಕಾರಣ. ತರಕಾರಿಗಳಲ್ಲಿನ ತೇವಾಂಶ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ಉತ್ತೇಜಿಸುತ್ತೆ. ಈ ತೇವಾಂಶವನ್ನು ಕಡಿಮೆ ಮಾಡಲು, ಬಿಸಿಲಿನಲ್ಲಿ ಒಣಗಿಸುವ ತಂತ್ರಗಳನ್ನು ಬಳಸಬಹುದು.

26
ಬಿಸಿಲಿನಲ್ಲಿ ತರಕಾರಿ ಒಣಗಿಸಿ

ತರಕಾರಿ ತುಂಬಾ ದಿನ ಚೆನ್ನಾಗಿರಬೇಕು ಅಂದ್ರೆ ನೀವು ತರಕಾರಿಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು. ಬಿಸಿಲಿನಲ್ಲಿ ತರಕಾರಿ ಒಣಗಿದ್ರೆ ತೇವಾಂಶ ಶೇಕಡಾ 10 ಕ್ಕಿಂತ ಕಡಿಮೆ ಆಗುತ್ತದೆ. ಯಾವಾಗ್ಲೂ ತರಕಾರಿಯನ್ನು ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ ಒಣಗಿಸಬೇಕು. ಬಿಸಿಲಿನಲ್ಲಿ ಸೂಕ್ಷ್ಮಜೀವಿಗಳ ಬೆಳವಣಿಗೆ ಅಸಾಧ್ಯವಾಗುತ್ತದೆ.

36
ಬಿಸಿಲಿನಲ್ಲಿ ಒಣಗಿಸೋದು ಹೇಗೆ?

ತರಕಾರಿಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ತೊಳೆದು, ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತ್ರ ತರಕಾರಿ ಹೋಳುಗಳನ್ನು ಬಿಸಿಲಿನಲ್ಲಿ ಒಣಗಿಸಿ. ತರಕಾರಿಗಳು ಸಂಪೂರ್ಣವಾಗಿ ಒಣಗಲು 2 ರಿಂದ 4 ದಿನ ಬೇಕಾಗುತ್ತದೆ. ತರಕಾರಿ ಒಣಗಿದೆ ಎಂಬುದನ್ನು ಪರೀಕ್ಷಿಸೋದು ಸುಲಭ. ನೀವು ತರಕಾರಿ ತುಂಡುಗಳು ಸುಲಭವಾಗಿ ಮುರಿದಾಗ ಅವು ಎಲ್ಲಾ ತೇವಾಂಶವನ್ನು ಕಳೆದುಕೊಂಡಿವೆ ಎಂದರ್ಥ. ನಂತರ ಅವುಗಳನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ.

46
ಸಂಶೋಧನೆ ಏನು ಹೇಳುತ್ತೆ?

ಸಂಶೋಧನೆ ಕೂಡ ಇದನ್ನು ಬೆಂಬಲಿಸುತ್ತದೆ. ಜಾಗತಿಕವಾಗಿ ತರಕಾರಿ ಸಂರಕ್ಷಣೆಯ ಕುರಿತು ಸಂಶೋಧನೆ ನಡೆಸುವ ವರ್ಲ್ಡ್ ವೆಜಿಟೆಬಲ್ ಸೆಂಟರ್ ಪ್ರಕಾರ, ತರಕಾರಿಗಳನ್ನು ಒಣಗಿಸುವ ಮೂಲಕ ತೇವಾಂಶವನ್ನು ಕಡಿಮೆ ಮಾಡುವುದು ಅಗ್ಗದ ಮತ್ತು ಉತ್ತಮ ಮಾರ್ಗವಾಗಿದೆ. ವರ್ಲ್ಡ್ ವೆಜಿಟೆಬಲ್ ಸೆಂಟರ್ ಈ ತಂತ್ರವು ಕೇವಲ ಮನೆಮದ್ದು ಅಲ್ಲ. ಇದನ್ನು ಜರ್ನಲ್ ಆಫ್ ಅಪ್ಲೈಡ್ ಸೈನ್ಸಸ್ ಮತ್ತು ಇತರ ಪ್ರಸಿದ್ಧ ನಿಯತಕಾಲಿಕೆಗಳು ಸಹ ಗುರುತಿಸಿವೆ ಎಂದು ಹೇಳುತ್ತದೆ. ಸಂಶೋಧನೆಯ ಪ್ರಕಾರ, ನೈಸರ್ಗಿಕ ಒಣಗಿಸುವಿಕೆಯು ಆಧುನಿಕ ಘನೀಕರಿಸುವ ತಂತ್ರಗಳಿಗೆ ಹೋಲಿಸಿದರೆ ತರಕಾರಿಗಳಲ್ಲಿ ಕಬ್ಬಿಣದಂತಹ ಹೆಚ್ಚಿನ ಫೈಬರ್ ಮತ್ತು ಖನಿಜ ಸುರಕ್ಷಿತಾಗಿರುತ್ತದೆ.

56
ಒಣಗಿದ ತರಕಾರಿ ಬಳಸೋದು ಹೇಗೆ?

ಸಂಶೋಧಕರ ಪ್ರಕಾರ, ಗಾಜಿನ ಗ್ಲಾಸ್ ಅಥವಾ ಗಾಳಿಯಾಡದ ಪಾತ್ರೆಗಳಲ್ಲಿ ಸಂಗ್ರಹಿಸಲಾದ ಒಣಗಿದ ತರಕಾರಿಗಳನ್ನು 12 ತಿಂಗಳವರೆಗೆ ಸುರಕ್ಷಿತವಾಗಿ ಬಳಸಬಹುದು. ಬಳಸುವ ಮೊದಲು ಅವುಗಳನ್ನು 15 ರಿಂದ 20 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಒಮ್ಮೆ ಬಿಸಿ ನೀರಿನಲ್ಲಿ ಹಾಕಿದ ನಂತ್ರ ತರಕಾರಿಗಳು ಮತ್ತೆ ಹೈಡ್ರೇಟ್ ಆಗುತ್ತವೆ. ಅವುಗಳು ಮೂಲ ಪರಿಮಳ ಮತ್ತು ಗಾತ್ರಕ್ಕೆ ಮರಳುತ್ತವೆ. ಆಫ್ ಸೀಸನ್, ಕರೆಂಟ್ ಹೆಚ್ಚು ಹೋಗುವ ಪ್ರದೇಶ ಅಥವಾ ತರಕಾರಿ ಹೆಚ್ಚಿರುವ ಪ್ರದೇಶದಲ್ಲಿ ನೀವು ಈ ಟ್ರಿಕ್ಸ್ ಬಳಸಬಹುದು.

66
ಆರೋಗ್ಯಕ್ಕೆ ಉತ್ತಮ

ನೀವೇ ಮನೆಯಲ್ಲಿ ಮಾಡಿಕೊಂಡ, ಯಾವುದೇ ಸೋಡಿಯಂ ಅಥವಾ ಇತರ ವಸ್ತುಗಳನ್ನು ಬಳಸದ ಈ ತರಕಾರಿ ಆರೋಗ್ಯಕ್ಕೆ ಒಳ್ಳೆಯದು. ಇದ್ರಲ್ಲಿ ಯಾವುದೇ ಕೆಮಿಕಲ್ ಇರೋದಿಲ್ಲ. ಅದೇ ಮಾರ್ಕೆಟ್ ನಲ್ಲಿ ಸಿಗುವ ಫ್ರೀಜರ್ ಮಾಡಿದ ತರಕಾರಿಯಲ್ಲಿ ಸೋಡಿಯಂ ಇರುವ ಸಾಧ್ಯತೆ ಹೆಚ್ಚು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories