Winter Food: ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿರಿಸುವ ಸ್ವಾದಿಷ್ಟ ತಿನಿಸುಗಳಿವು

First Published | Oct 29, 2022, 3:50 PM IST

ಚಳಿಗಾಲ ಬಂದಾಗ ಸುತ್ತಮುತ್ತಲಿನ ಎಲ್ಲಾ ವಾತಾವರಣವೂ ಬದಲಾಗುತ್ತೆ. ಈ ಸಮಯದಲ್ಲಿ ನಾವು ಸೇವಿಸುವ ಆಹಾರ ಕೂಡ ಬದಲಾಗುತ್ತದೆ, ಬದಲಾಗಲೇ ಬೇಕು. ಯಾಕೆಂದರೆ ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗೆ ಇಡುವಂತಹ ಆಹಾರವನ್ನು ನಾವು ಸೇವಿಸುತ್ತೇವೆ. ಇಲ್ಲಿ ನಾವು ಚಳಿಗಾಲದಲ್ಲಿ ಸೇವಿಸಬಹುದಾದಂತಹ ಸಾಂಪ್ರದಾಯಿಕ ಭಕ್ಷ್ಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇವುಗಳ ಕಡೆಗೊಮ್ಮೆ ನೀವೂ ಗಮನ ಹರಿಸಿ.
 

ಸೊಪ್ಪು, ಕ್ಯಾರೆಟ್ ಮತ್ತು ಹೆಸರುಕಾಳು ಪುಡ್ಡಿಂಗ್, ರಬ್ಡಿ, ಮೆಕ್ಕೆಜೋಳದ ರೊಟ್ಟಿ, ಇತ್ಯಾದಿ ಆಹಾರಗಳನ್ನು ನಾವು ಚಳಿಗಾಲದಲ್ಲಿ ಸಾಮಾನ್ಯವಾಗಿ ಸೇವಿಸುತ್ತೇವೆ. ಈ ಭಕ್ಷ್ಯಗಳು ಮತ್ತು ಚಳಿಗಾಲದಲ್ಲಿ ನಮ್ಮ ಬಾಯಿಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಮಗೆ ಬೆಚ್ಚನೆಯ ಅನುಭವ ನೀಡುತ್ತವೆ. ಉತ್ತರ ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತ ಮತ್ತು ಇತರ ಪ್ರದೇಶಗಳಲ್ಲಿ, ಅನೇಕ ಸಾಂಪ್ರದಾಯಿಕ ಭಕ್ಷ್ಯಗಳನ್ನು ಚಳಿಗಾಲದಲ್ಲಿ (winter food)ಮಾತ್ರ ತಯಾರಿಸಲಾಗುತ್ತದೆ. 

ಮಳೆಗಾಲ ಮುಗಿದು ಈಗಷ್ಟೆ ಮೆಲ್ಲನೆ ಚಳಿಗಾಲ (winter season) ಒಂದೊಂದೆ ಹೆಜ್ಜೆ ಇಟ್ಟು ಬರುತ್ತಿದೆ, ಈ ಸಮಯದಲ್ಲಿ ನೀವು ತಿಂದು ಎಂಜಾಯ್ ಮಾಡಬಹುದಾದ ಆಹಾರ ಪದಾರ್ಥಗಳ ಬಗ್ಗೆ ನೋಡೋಣ. ನೀವು ಈ ರುಚಿಕರವಾದ ಭಕ್ಷ್ಯಗಳನ್ನು ಮನೆಯಲ್ಲಿ ತಯಾರಿಸಬಹುದು ಮತ್ತು ಇಡೀ ಕುಟುಂಬ ಸೇರಿ ಚಳಿಗಾಲದಲ್ಲಿ ಈ ಆಹಾರವನ್ನು ಎಂಜಾಯ್ ಮಾಡಬಹುದು.

Tap to resize

ಮೆಕ್ಕೆಜೋಳದ ರೊಟ್ಟಿ - ಸೊಪ್ಪು ತರಕಾರಿಗಳು 
ಹಸಿರು ತರಕಾರಿಗಳು ಮತ್ತು ಸೊಪ್ಪುಗಳು ಚಳಿಗಾಲದಲ್ಲಿ ಹೆಚ್ಚಾಗಿ ಜನರು ಸೇವಿಸುವಂತಹ ಆಹಾರವಾಗಿದೆ. ಅದರಲ್ಲೂ ಸಾಸಿವೆ ಸೊಪ್ಪು ಪ್ರಮುಖವಾಗಿದೆ. ಪಂಜಾಬಿನ ಈ ಸಾಂಪ್ರದಾಯಿಕ ತರಕಾರಿಯು ಮೆಕ್ಕೆಜೋಳದ ರೊಟ್ಟಿಯೊಂದಿಗೆ ತಿನ್ನುವ ಸಂಪ್ರದಾಯವಾಗಿದೆ. ಇದರ ಜೊತೆ ಬಿಳಿ ಬೆಣ್ಣೆ ಮತ್ತು ಬೆಲ್ಲದ ತುಂಡನ್ನು ಸಹ ತಿನ್ನಲಾಗುತ್ತೆ. ಈ ಸೊಪ್ಪುಗಳು ರುಚಿಕರವಾಗಿರೋದು ಮಾತ್ರವಲ್ಲ, ಪೌಷ್ಠಿಕಾಂಶದ ಉತ್ತಮ ಮೂಲವೂ ಹೌದು. ಈ ಶೀತ ಋತುವಿನಲ್ಲಿ ನೀವು ಇದನ್ನು ಸಹ ತಿನ್ನಬಹುದು.

ಕ್ಯಾರೆಟ್ ಹಲ್ವಾ
ಕ್ಯಾರೆಟ್ ಹಲ್ವಾ..ಹೆಸರು ಹೇಳಿದಂತೆ ಬಾಯಲ್ಲಿ ನೀರು ಬರುತ್ತೆ ಅಲ್ವಾ? ದೇಸಿ ತುಪ್ಪದಲ್ಲಿ ತಯಾರಿಸಿದ ಕ್ಯಾರೆಟ್ ಹಲ್ವಾ ಪ್ರಸಿದ್ಧ ಮತ್ತು ಸಾಂಪ್ರದಾಯಿಕ ಸಿಹಿತಿಂಡಿಯಾಗಿದೆ. ಮೇಲಿನಿಂದ ಒಣ ಹಣ್ಣುಗಳಿಂದ ಅಲಂಕೃತವಾದ ಹಲ್ವಾ (carrot halwa) ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನುವಂತೆ ಮಾಡುತ್ತೆ. ಚಳಿಗಾಲದಲ್ಲಿ ಕ್ಯಾರೆಟ್ ಸೇವನೆ ಉತ್ತಮವಾಗಿರುವುದರಿಂದ, ಇದನ್ನು ವಿಶೇಷವಾಗಿ ಈ ಋತುವಿನಲ್ಲಿ ತಯಾರಿಸಲಾಗುತ್ತದೆ. ಚಳಿಗಾಲದಲ್ಲಿ ಇದನ್ನು ತಿನ್ನೋದು ಬಾಯಿಗೂ ಒಳ್ಳೆಯದು ಮತ್ತು ಆರೋಗ್ಯಕ್ಕೂ ಉತ್ತಮ. 

ತುಕ್ಪಾ
ತುಕ್ಪಾ ಇಂಡೋ-ಟಿಬೆಟಿಯನ್ ನೂಡಲ್ ಸೂಪ್ ಆಗಿದ್ದು, ಇದು ರುಚಿಕರವಾದ ಸೂಪ್ ಆಗಿದೆ.  ಬೆಚ್ಚಗಿನ ತರಕಾರಿ ಬೌಲ್ ನಿಮ್ಮನ್ನು ಬೆಚ್ಚಗೆ ಮತ್ತು ಆರಾಮದಾಯಕವಾಗಿಡಲು ಸೂಕ್ತವಾಗಿದೆ. ನೂಡಲ್ಸ್ ಮತ್ತು ಅನೇಕ ತರಕಾರಿಗಳಿಂದ ತಯಾರಿಸಲಾದ ಈ ಸೂಪ್ (vegetable soup) ಸಾಕಷ್ಟು ಮಸಾಲೆಯುಕ್ತವಾಗಿದೆ. ಚಳಿಗಾಲದಲ್ಲಿ ಶೀತ, ಕೆಮ್ಮು ಉಂಟಾದರೆ, ಈ ಸೂಪ್ ಕುಡಿಯುವ ಮೂಲಕ ನಿಮ್ಮ ಬಾಯಿ ರುಚಿಯನ್ನು ಸುಧಾರಿಸಬಹುದು. ಚಳಿಗಾಲದ ದಿನಗಳಲ್ಲಿ, ರೆಸ್ಟೋರೆಂಟ್ ಮತ್ತು ಸ್ಟಾಲ್ ನಲ್ಲಿ ಫಾಸ್ಟ್ ಫುಡ್ ನೊಂದಿಗೆ ನೀವು ಖಂಡಿತವಾಗಿಯೂ ಥುಪ್ಕಾ ಸೇವಿಸಬಹುದು. 

ಗೋಂದ್ ಲಡ್ಡೂ
ಗೋಂದ್ ಲಡ್ಡನ್ನು ಮರದ ತೊಗಟೆಯಿಂದ ಹೊರತೆಗೆಯಲಾದ ಅಂಟಿನಿಂದ ತಯಾರಿಸಲಾಗುತ್ತದೆ. ಇದು ನೀವು ವರ್ಷವಿಡೀ ತಿನ್ನಬಹುದಾದ ಸಿಹಿತಿಂಡಿಯಾಗಿದೆ. ಅಷ್ಟೇ ಅಲ್ಲ ಚಳಿಗಾಲದ ಚಳಿಯನ್ನು ಎದುರಿಸಲು ಅದರ ವಿಶೇಷ ಪೌಷ್ಠಿಕಾಂಶದ ಶಕ್ತಿಯನ್ನು ಬಳಸಲಾಗುತ್ತದೆ. ಇದು ಪ್ರಕೃತಿಯಲ್ಲಿ ಬಿಸಿಯಾಗಿರುತ್ತದೆ ಮತ್ತು ಇದನ್ನು ಸಾಕಷ್ಟು ಸಮಯದವರೆಗೆ ಸಂಗ್ರಹಿಸಬಹುದು. ಇದರ ಪೋಷಕಾಂಶಗಳು ನಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. 

ಚಿಕ್ಕಿ
ಬೆಲ್ಲ, ನೆಲಗಡಲೆ, ಎಳ್ಳು ಹಾಕಿ ಮಾಡಿದ ಚಿಕ್ಕಿ ಸಹ ಚಳಿಗಾಲದಲ್ಲಿ ಹೆಚ್ಚು ತಿನ್ನಲಾಗುತ್ತದೆ. ಕಡಲೆಕಾಯಿ ಮತ್ತು ಬೆಲ್ಲದಿಂದ ತಯಾರಿಸಿದ ಚಿಕ್ಕಿ ಪೌಷ್ಟಿಕ ಆಹಾರವಾಗಿರುತ್ತೆ. ಕೆಲವರು ಇದನ್ನು ತಿಂಡಿಯಾಗಿ ತಿನ್ನುತ್ತಾರೆ. ಚಳಿಗಾಲದ ಚಳಿಯನ್ನು ದೂರವಿಡಲು ಇದನ್ನು ಸೇವಿಸುವುದು ಉತ್ತಮ. ಇದನ್ನು ದೇಶದಲ್ಲಿ ಹೆಚ್ಚಿನ ಜನರು ಇಷ್ಟಪಟ್ಟು ತಿಂತಾರೆ.

Latest Videos

click me!