'ಕಾಂತಾರ' ನಟ ರಿಷಬ್ ಶೆಟ್ಟಿ ಫಿಟ್ ನೆಸ್ ಮಂತ್ರ ಸಿಕ್ಕಾಪಟ್ಟೆ ಸಿಂಪಲ್‌

First Published | Oct 28, 2022, 12:46 PM IST

ರಾಜ್ಯಾದ್ಯಂತ, ದೇಶಾದ್ಯಂತ ಅಷ್ಟೇ ಯಾಕೆ ವಿವಿಧ ದೇಶಗಳಲ್ಲೂ ಈಗ ಕಾಂತಾರದ್ದೇ ಸುದ್ದಿ. ದೈವರ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ರಿಷಭ್ ಶೆಟ್ಟಿ ಅದ್ಭುತವಾಗಿ ಮಿಂಚಿದ್ದಾರೆ. ಅವರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹೀಗಿರುವಾಗ ರಿಷಬ್ ಶೆಟ್ಟಿ ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಯಾವ ರೀತಿಯ ಆಹಾರ ಸೇವಿಸುತ್ತಾರೆ ಎಂಬುದನ್ನು ತಿಳಿಯೋಣ.

ಎಲ್ಲೆಲ್ಲೂ ಈಗ ಕಾಂತಾರದ್ದೇ ಗುಂಗು, ಯಾವುದೇ ನಿರೀಕ್ಷೆ ಇಲ್ಲದೆ ಥಿಯೇಟರ್ ಗೆ ಬಂದ ಈ ಸಿನಿಮಾ ಬ್ಲಾಕ್ ಬಸ್ಟರ್ ಆಯಿತು. ಈ ಸಿನಿಮಾದಲ್ಲಿ ನಟಿಸಿದ್ದ ನಾಯಕ ರಿಷಬ್ ಶೆಟ್ಟಿ ಸ್ಟಾರ್ ಆದರು. ಇವರ ಬಗ್ಗೆ ತಿಳಿದುಕೊಳ್ಳಲು ನೆಟಿಜನ್‌ಗಳು ಹೆಚ್ಚು ಉತ್ಸುಕರಾಗಿದ್ದಾರೆ. ರಿಷಭ್ ಶೆಟ್ಟಿ ಹಾಗೂ ಪ್ರಗತಿಯವರ ಲವ್ ಸ್ಟೋರಿ ಸಹ ವೈರಲ್ ಆಗಿದೆ. ರಿಷಬ್ ಶೆಟ್ಟಿ ದೇಹವನ್ನು (Body) ಫಿಟ್ ಆಗಿಟ್ಟುಕೊಳ್ಳಲು ಯಾವ ರೀತಿಯ ಆಹಾರ (Food) ಸೇವಿಸುತ್ತಾರೆ ನೋಡೋಣ..

ಮೈಂಡ್‌ಫುಲ್‌ ಈಟಿಂಗ್‌
ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ತಿನ್ನುವ ಆಹಾರದ ಬಗ್ಗೆ ತುಂಬಾ ಎಚ್ಚರಿಕೆ ವಹಿಸುತ್ತಾರೆ. ಯಾವಾಗಲೂ ಆರೋಗ್ಯಕರವಾದ ಆಹಾರವನ್ನೇ ಸೇವಿಸುತ್ತಾರೆ. ದಿನಕ್ಕೆ ಐದು ಬಾರಿ ಲಘು ಆಹಾರವನ್ನು ತೆಗೆದುಕೊಳ್ಳುತ್ತಾರೆ. ಊಟ ಮಾಡುವಾಗ ಯಾವಾಗಲೂ ಹೆಚ್ಚು ತಿನ್ನದಂತೆ ಎಚ್ಚರಿಕೆ ವಹಿಸುತ್ತಾರೆ.

Tap to resize

ಫಿಟ್‌ನೆಸ್ ಮಂತ್ರ
ರಿಷಬ್ ಶೆಟ್ಟಿ  ಫಿಟ್ನೆಸ್ ವಿಚಾರದಲ್ಲಿ ಸಾಕಷ್ಟು ಕಾಳಜಿ ವಹಿಸುತ್ತಾರೆ. ಪ್ರತಿದಿನ ಯೋಗ ಮಾಡುತ್ತಾರೆ. ಯೋಗದಲ್ಲಿ ಸೂರ್ಯ ನಮಸ್ಕಾರವನ್ನು ಹೆಚ್ಚಾಗಿ ಮಾಡಲಾಗುತ್ತದೆ. ಪ್ರಾಣಾಯಾಮವನ್ನೂ ಮಾಡುತ್ತಾರೆ. ಯೋಗವು ಆರೋಗ್ಯವಾಗಿರಲು ತುಂಬಾ ಉಪಯುಕ್ತವಾಗಿದೆ ಎಂದು ಅವರು ನಂಬುತ್ತಾರೆ.
 

ಬೆಳಗ್ಗಿನ ಉಪಾಹಾರದ ಆಯ್ಕೆ
ಕಾಂತಾರಾ ಹೀರೋ ತಮ್ಮ ದಿನವನ್ನು ನಿಂಬೆ ನೀರಿನಿಂದ ಪ್ರಾರಂಭಿಸುತ್ತಾರೆ. ಪ್ರತಿದಿನ ಅವರು ನಿಂಬೆ ರಸದೊಂದಿಗೆ ಬೆಚ್ಚಗಿನ ನೀರನ್ನು ಕುಡಿಯುತ್ತಾರೆ. ಅವರಿಂದಲೇ ದಿನ ಆರಂಭಿಸುತ್ತೇನೆ ಎಂದು ಹಲವು ಸಂದರ್ಶನಗಳಲ್ಲಿ ಹೇಳಿರುವುದು ಗಮನಾರ್ಹ. ರಿಷಬ್ ತಮ್ಮ ಉಪಾಹಾರವನ್ನು (Breakfast) ತುಂಬಾ ಸರಳವಾಗಿಡಲು ಕಾಳಜಿ ವಹಿಸುತ್ತಾರೆ. ಅಂದರೆ ಇಡ್ಲಿ, ದೋಸೆ, ಸಾಂಬಾರ್ ಇತ್ಯಾದಿಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಾರೆ. ರಿಷಭ್ ದಕ್ಷಿಣ ಭಾರತದ ಸಾಂಪ್ರದಾಯಿಕ ಆಹಾರಗಳನ್ನು ಇಷ್ಟಪಡುತ್ತಾರೆ. ಎಂದು ಅವರೇ ಹೇಳಿರುವುದು ಗಮನಾರ್ಹ. ದಕ್ಷಿಣದ ಆಹಾರಗಳನ್ನು ತಿನ್ನುವುದನ್ನು ಅವರು ಹೆಚ್ಚು ಆನಂದಿಸುತ್ತಾರೆ.

ರಾತ್ರಿಯ ಊಟ
ರಾತ್ರಿಯ ಭೋಜನದ ಬಗ್ಗೆಯೂ ಅವನು ತುಂಬಾ ಜಾಗರೂಕರಾಗಿರುತ್ತಾರೆ. ರಾತ್ರಿ 8:30 ಕ್ಕೆ ಮೊದಲು ಊಟವನ್ನು ಮುಗಿಸುತ್ತಾರೆ .ಅಲ್ಲದೆ, ರಿಷಭ್ ತಮ್ಮ ಆಹಾರದಲ್ಲಿ ಹೆಚ್ಚಾಗಿ ಬೇಯಿಸಿದ ತರಕಾರಿಗಳು ಮತ್ತು ಸುಟ್ಟ ತರಕಾರಿಗಳನ್ನು ತಿನ್ನುತ್ತಾರೆ. ಇದಲ್ಲದೆ, ಅವರು ಹೆಚ್ಚಾಗಿ ಒಣ ಹಣ್ಣುಗಳನ್ನು (Dry fruits) ತಮ್ಮ ಆಹಾರದ ಭಾಗವಾಗಿ ಸೇರಿಸುತ್ತಾರೆ.

ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಸಿನಿಮಾ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ಗಳಿಕೆ (Collection) ಮಾಡುತ್ತಿದೆ. 11 ದಿನಗಳಿಗೆ ಈ ಸಿನಿಮಾದ ಹಿಂದಿ ವರ್ಷನ್‌ನಿಂದಲೇ ಬರೋಬ್ಬರಿ 24.15 ಕೋಟಿ ರೂ. ಹಣ ನಿರ್ಮಾಪಕರಿಗೆ ಸಿಕ್ಕಿದೆ. ಒಟ್ಟಾರೆ ಗಳಿಕೆ 200 ಕೋಟಿ ರೂ. ಸನಿಹದಲ್ಲಿದೆ. 
 

ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಪಾತ್ರ ಗಮನಾರ್ಹವಾಗಿದೆ. ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಕಾಂತಾರ ಮೂಡಿಬಂದಿದೆ. 

Latest Videos

click me!