ಆರೋಗ್ಯಯುತ ಆಹಾರ ನೀಡುವ ರಾಷ್ಟ್ರಗಳಿವು… ಭಾರತ ಎಷ್ಟನೇ ಸ್ಥಾನದಲ್ಲಿದೆ?

First Published | Mar 21, 2024, 12:36 PM IST

ವಿಶ್ವದೆಲ್ಲೆಡೆ ವಿವಿಧ ದೇಶಗಳು ವಿವಿಧ ರೀತಿಯ ಆಹಾರವನ್ನು ನೀಡುತ್ತವೆ. ಆದಾರೆ ಎಲ್ಲಾ ಆಹಾರಗಳು ಆರೋಗ್ಯಕರವಾಗಿದೆ ಎಂದು ಹೇಳೋದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಕೆಲವು ದೇಶಗಳ ಆಹಾರಗಳು ಆರೋಗ್ಯಕ್ಕೆ ತುಂಬಾ ಮಾರಕ. ಹಾಗಿದ್ರೆ ಯಾವ ದೇಶಗಳು ಅತ್ಯುತ್ತಮ ಆಹಾರ ನೀಡುತ್ತೆ ನೋಡೋಣ. 
 

ಜಗತ್ತು ವಿವಿಧ ರೀತಿಯ ಸಂಸ್ಕೃತಿ ಮತ್ತು ಆಹಾರಗಳಿಂದ ತುಂಬಿದೆ. ಜನರು ಕೂಡ ವಿವಿಧ ತಾಣಗಳಿಗೆ ಭೇಟಿ ನೀಡಿ ಅಲ್ಲಿನ ವಿಶಿಷ್ಟ ಆಹಾರ ತಿನ್ನೋದಕ್ಕೆ ಇಷ್ಟಪಡ್ತಾರೆ. ಆದರೆ, ನಮ್ಮ ಆರೋಗ್ಯಕರ ಆಹಾರಕ್ಕೆ ಅನುಗುಣವಾಗಿರಲು ಯಾವ ದೇಶದ ಆಹಾರ ಪದ್ಧತಿಯು ನಮಗೆ ಸಹಾಯ ಮಾಡುತ್ತದೆ, ಜೊತೆಗೆ ಟೇಸ್ಟಿ ಆಹಾರ ನೀಡುತ್ತೆ ಗೊತ್ತಾ? ವಿಶ್ವದಲ್ಲಿಯೇ ಆರೋಗ್ಯಯುತ ಆಹಾರಗಳನ್ನು (healthy food) ನೀಡುವ ಟಾಪ್ 10 ದೇಶಗಳ ಲಿಸ್ಟ್ ಇದು. ಭಾರತ ಎಷ್ಟನೇ ಸ್ಥಾನದಲ್ಲಿದೆ ನೀವೆ ನೋಡಿ.

ಜಪಾನೀಸ್ (Japanese Food)
ಜಪಾನಿನ ಸಂಸ್ಕೃತಿಯು ಕಲರ್ ಫುಲ್ ತರಕಾರಿಗಳಿಂದ ಸಮೃದ್ಧವಾಗಿದೆ, ಇಲ್ಲಿನ ಜನರು ಆರೋಗ್ಯಕರ ಆಹಾರಗಳನ್ನು ಸೇವಿಸುತ್ತಾರೆ. ಸೀಸನಲ್ ಆಹಾರಗಳು ಮತ್ತು ರುಚಿಗಳನ್ನು ಬಳಸಿಕೊಂಡು ತಿನ್ನಲು ಪ್ರಯತ್ನಿಸುತ್ತಾರೆ. ಇವರ ಆಹಾರದಲ್ಲಿ ಎಲೆಕೋಸು, ನೇಗಿ (ಹಸಿರು ಈರುಳ್ಳಿ) ಮತ್ತು ನಾಸು (ಬದನೆಕಾಯಿ) ನಂತಹ ಸಾಕಷ್ಟು ಹಸಿರು ತರಕಾರಿಗಳಿರುತ್ತವೆ . ಈ ಆಹಾರವು ಒಮೆಗಾ -3 ಕೊಬ್ಬುಗಳು, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಸತು, ತಾಮ್ರ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ.

Tap to resize

ಇಂಡಿಯನ್ (Indian Food)
ಭಾರತೀಯ ಆಹಾರವು ಧಾನ್ಯಗಳು ಮತ್ತು ಫೈಬರ್‌ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿವೆ ಮತ್ತು ಇಲ್ಲಿನ ಆಹಾರ ದ್ವಿದಳ ಧಾನ್ಯಗಳಲ್ಲಿ ಕಂಡು ಬರುವ ಆರೋಗ್ಯಕರ ಕೊಬ್ಬನ್ನು ಒಳಗೊಂಡಿದೆ, ಜೊತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡುವ ಮತ್ತು ಆರೋಗ್ಯವನ್ನು ಸುಧಾರಿಸುವ ಮಸಾಲೆಗಳು ಮತ್ತು ಗಿಡಮೂಲಿಕೆಗಳನ್ನು ಒಳಗೊಂಡಿದೆ. ಆಹಾರದಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ಸ್, ಜೀವಸತ್ವಗಳು, ಕ್ಯಾಲ್ಸಿಯಂ (Calcium), ಒಮೆಗಾ -3, ಸತು, ಕಬ್ಬಿಣ ಅಂಶಗಳಿವೆ. ಭಾರತೀಯ ಆಹಾರವನ್ನು ಇನ್ನಷ್ಟು ಆರೋಗ್ಯಕರವಾಗಿಸಲು, ಹೆಚ್ಚು ಬಿಳಿ ಅಕ್ಕಿಯನ್ನು ತಿನ್ನುವುದರಿಂದ ದೂರವಿರಿ, ಬದಲಿಗೆ ಆರೋಗ್ಯಕರ ಧಾನ್ಯವನ್ನು ಆರಿಸಿ.

ದಕ್ಷಿಣ ಮೆಡಿಟರೇನಿಯನ್ (Italian And Greek)
ಅವರ ಹೆಚ್ಚಿನ ಭಕ್ಷ್ಯಗಳು ಆಲಿವ್ ಎಣ್ಣೆಯಿಂದ ಸಮೃದ್ಧವಾಗಿವೆ, ಇದು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಮೆಡಿಟರೇನಿಯನ್ ಆಹಾರವು ಉತ್ತಮ ಸ್ಯಾಚುರೇಟೆಡ್ ಕೊಬ್ಬುಗಳು, ತರಕಾರಿಗಳಿಂದ ತುಂಬಿರುವುದರಿಂದ ತೂಕ ಇಳಿಸಿಕೊಳ್ಳಲು ಉತ್ತಮ ಆಹಾರವಾಗಿದೆ, ಇದು ಆರೋಗ್ಯ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ.

ಕೊರಿಯನ್ (Korean Food)
ಕೊರಿಯನ್ ಪಾಕಪದ್ಧತಿಯು ವಿವಿಧ ರೀತಿಯ ಉತ್ತಮ ಆರೋಗ್ಯಕರ ತರಕಾರಿಗಳನ್ನು ಒಳಗೊಂಡಿದೆ ಮತ್ತು ಹೆಚ್ಚಿನ ಕೊರಿಯನ್ನರು ಪ್ರತಿ ಊಟದೊಂದಿಗೆ ತರಕಾರಿಯನ್ನು ತಿನ್ನುತ್ತಾರೆ. ಅವರ ಮುಖ್ಯ ಭಕ್ಷ್ಯಗಳಲ್ಲಿ ಒಂದಾದ ಕಿಮ್ಚಿಯಲ್ಲಿ ಎಲೆಕೋಸು, ಮೂಲಂಗಿ ಮತ್ತು ಶುಂಠಿ ಇದೆ; ಉತ್ತಮ ಕರುಳಿನ ಆರೋಗ್ಯಕ್ಕಾಗಿ ಇದನ್ನು ಹುದುಗಿಸಿ ಪ್ರೋಬಯಾಟಿಕ್ಗಳಿಂದ ತುಂಬಲಾಗುತ್ತದೆ.

ಇಥಿಯೋಪಿಯನ್ (Ethiopian)
ಇಥಿಯೋಪಿಯನ್ ಆಹಾರವು ಧಾನ್ಯಗಳು, ಮಸಾಲೆ ಮೆಣಸು, ಮಸೂರ, ಎಲೆಕೋಸು, ಕೇಲ್, ಟೊಮೆಟೊ, ಕುರಿ ಮತ್ತು ಮೊಟ್ಟೆಗಳಿಂದ ಕೂಡಿದೆ. ಆರೋಗ್ಯಕರ ಇಥಿಯೋಪಿಯನ್ ಆಹಾರವನ್ನು ಇಂಜೆರಾ ಎಂದು ಕರೆಯಲಾಗುತ್ತದೆ, ಇದು ಫೈಬರ್ / ಪ್ರೋಟೀನ್ ನಿಂದ ಕೂಡಿದೆ.  ಲೆಂಟಿಲ್ ಎಡಮಮ್ ಸೂಪ್ ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದೆ. ಇದು ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ. 

ನಾರ್ಡಿಕ್ ಸ್ಕ್ಯಾಂಡಿನೇವಿಯನ್
ಸ್ಕ್ಯಾಂಡಿನೇವಿಯನ್ ಆಹಾರವನ್ನು ವಿಶ್ವದ ಆರೋಗ್ಯಕರ ಆಹಾರಗಳಲ್ಲಿ (healthiest food) ಒಂದೆಂದು ಪರಿಗಣಿಸಲಾಗಿದೆ, ಮತ್ತು ಇದನ್ನು ತಯಾರಿಸುವುದು ಸಹ ತುಂಬಾನೆ ಸರಳ. ಡ್ಯಾನಿಶ್ ಪಾಕಪದ್ಧತಿ ಹೆಚ್ಚು ಪೌಷ್ಟಿಕವಾಗಿದೆ ಮತ್ತು ಜೀವಸತ್ವಗಳು, ಖನಿಜಗಳು, ಪ್ರೋಟೀನ್ಸ್, ಕೋಳಿ ಮತ್ತು ಮೀನುಗಳಿಂದ ಸಮೃದ್ಧವಾಗಿದೆ. ಒಮೆಗಾ -3 ಗಳು ಅಧಿಕವಾಗಿರುವ ಹೆರ್ರಿಂಗ್ ಮತ್ತು ಸಾಲ್ಮನ್‌ನಂತಹ ಮೀನುಗಳನ್ನು ಸಹ ಅವರು ತಮ್ಮ ಊಟದಲ್ಲಿ ಸೇರಿಸುತ್ತಾರೆ.

ವಿಯೆಟ್ನಾಮೀಸ್ (Viatnamese)
ಹೆಚ್ಚಿನ ವಿಯೆಟ್ನಾಮೀಸ್ ಆಹಾರದಲ್ಲಿ ಕೊಬ್ಬು ಕಡಿಮೆ ಇರುತ್ತದೆ ಮತ್ತು ಇದು ಫೋ, ಹಂದಿಮಾಂಸ (pork), ಗೋಮಾಂಸ ಅಥವಾ ಚಿಕನ್ ನೊಂದಿಗೆ ರುಚಿಕರವಾದ ತರಕಾರಿಗಳಿಂದ ತುಂಬಿದ ಸೂಪ್ ನಂತಹ ಭಕ್ಷ್ಯಗಳನ್ನು ಹೊಂದಿದ್ದು, ವಿವಿಧ ವಿಟಮಿನ್-ಸಮೃದ್ಧ ತರಕಾರಿಗಳನ್ನು ಹೊಂದಿರುತ್ತದೆ.

ಲೆಬನೀಸ್ (Lebanese food)
ಲೆಬನಾನ್ ಪಾಕಪದ್ಧತಿಯು ಗ್ರೀಕ್ ಆಹಾರದೊಂದಿಗೆ ಬಹಳಷ್ಟು ಹೋಲಿಕೆ ಹೊಂದಿದೆ ಮತ್ತು ಇದನ್ನು ವಿಶ್ವದ ನೆಚ್ಚಿನ ಆರೋಗ್ಯಕರ ಡಿಪ್ ಆಹಾರಗಳ ಕೇಂದ್ರ ಎನ್ನುತ್ತಾರೆ. ಹಮ್ಮಸ್ ಮತ್ತು ಪಿಟಾ ಇಲ್ಲಿನ ಪ್ರಮುಖ ಆಹಾರ, ಜೊತೆಗೆ,  ತಬೌಲೆಹ್, ಲಬ್ನೆಹ್, ಶಖೌಕಾ ಮತ್ತು ಮುಜಾದಾರ ಮೊದಲಾದ ಆರೋಗ್ಯಕರ ಆಹಾರಗಳನ್ನು ನೀವಿಲ್ಲಿ ಸೇವಿಸಬಹುದು.

ಥಾಯ್ (Thai food
ಥಾಯ್ ಪಾಕಪದ್ಧತಿಯಲ್ಲಿ ಸಾಮಾನ್ಯವಾಗಿ ಸ್ಯಾಚುರೇಟೆಡ್ ಕೊಬ್ಬು ಕಡಿಮೆ ಇರುತ್ತದೆ ಮತ್ತು ಇದನ್ನು ತೆಳ್ಳಗಿನ ಮಾಂಸದೊಂದಿಗೆ ಬೇಯಿಸಲಾಗುತ್ತದೆ. ಟೋಫು, ಮೊಟ್ಟೆ, ಹಸಿರು ತರಕಾರಿಗಳು ಮತ್ತು ಕ್ಯಾರೆಟ್‌ಗಳನ್ನು ಒಳಗೊಂಡಿರುವ ಅನೇಕ ಆಹಾರಗಳಲ್ಲಿ ಫೈಬರ್ ಮತ್ತು ಪ್ರೋಟೀನ್ ಅಧಿಕವಾಗಿರುತ್ತದೆ. ಥಾಯ್ ಆಹಾರವು ಒಮೆಗಾ -3, ನೈಸರ್ಗಿಕ ಪ್ರತಿಜೀವಕಗಳು, ಕ್ಯಾಲ್ಸಿಯಂ, ಜೀವಸತ್ವಗಳು ಮತ್ತು ಟನ್ ಗಟ್ಟಲೆ ಖನಿಜಗಳಿಂದ ಸಮೃದ್ಧವಾಗಿದೆ. ಇಲ್ಲಿನ ಆಹಾರವನ್ನು ಸಾಮಾನ್ಯವಾಗಿ ತೆಂಗಿನ ಎಣ್ಣೆ / ತೆಂಗಿನ ಹಾಲಿನೊಂದಿಗೆ ಬೇಯಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ತುಂಬಾ ಮಸಾಲೆಯುಕ್ತವಾಗಿರುತ್ತದೆ. ಆ ಮೂಲಕ ಚಯಾಪಚಯವನ್ನು ಹೆಚ್ಚಿಸುತ್ತದೆ.

ಸ್ಪ್ಯಾನಿಷ್ (Spanish Food)
ಸ್ಪ್ಯಾನಿಶ್ ತಿಂಡಿ ಸಾಕಷ್ಟು ಡ್ರೈ ಫ್ರುಟ್ಸ್ ಮತ್ತು ನಟ್ಸ್ ಒಳಗೊಂಡಿದೆ, ಇದರಲ್ಲಿ ಫೈಬರ್ ಅಂಶ ಅಧಿಕವಾಗಿರುತ್ತದೆ. ತಪಸ್ ಎಂದು ಕರೆಯಲ್ಪಡುವ ಸಣ್ಣ ಭಕ್ಷ್ಯಗಳಿಗೆ ಹೆಸರುವಾಸಿಯಾದ ಸ್ಪೈನ್ ನಲ್ಲಿ ಜನರು ತಮ್ಮ ಊಟದಲ್ಲಿ ಸಾಕಷ್ಟು ಆಲಿವ್ ಎಣ್ಣೆ, ಸಾರ್ಡಿನ್, ಕಡಲೆ ಮತ್ತು ಚಿಕನ್ ಸೇವಿಸುತ್ತಾರೆ.

Latest Videos

click me!