ಈ ತರಕಾರಿ, ಹಣ್ಣು ಫ್ರೆಶ್ ಆಗಿರಲು ಫ್ರಿಜ್‌ನ ಅಗತ್ಯವೇ ಇಲ್ಲ! ಬೇಸಿಗೆಯಲ್ಲೂ ತಂದು ತಿನ್ನಿ

First Published | Mar 15, 2024, 4:46 PM IST

ನಾವು ಮನೆಗೆ ತಂದ ಎಲ್ಲಾ ತರಕಾರಿಗಳನ್ನು ಫ್ರಿಜ್ ನಲ್ಲಿ ಇಟ್ತೀವಿ, ಆದ್ರೆ ಎಲ್ಲಾ ತರಕಾರಿಗಳು ಫ್ರೆಶ್ ಆಗಿರಲು ಫ್ರಿಜ್ ಅವಶ್ಯಕತೆ ಇಲ್ಲ. ಯಾವೆಲ್ಲಾ ತರಕಾರಿಗಳಿಗೆ ಫ್ರಿಜ್ ಬೇಡ ಅನ್ನೋದನ್ನು ತಿಳಿಯೋಣ. 
 

ಪ್ರತಿದಿನ ಅಡುಗೆ ಮಾಡೋದಕ್ಕೆ ವಿವಿಧ ತರಕಾರಿಗಳು, ತಿನ್ನೋದಕ್ಕೆ ಹಣ್ಣು ಬೇಕೇ ಬೇಕು. ನಾವು ಹೆಚ್ಚಾಗಿ ಒಂದೇ ಸಲ ಹಣ್ಣು, ತರಕಾರಿ ತಂದು ಅದು ತುಂಬಾ ದಿನ ಉಳಿಯಬೇಕು ಎಂದು ನಾವು ಅವುಗಳನ್ನು ರೆಫ್ರಿಜರೇಟ್ ನಲ್ಲಿ (refrigerator) ಇಡ್ತೀವಿ. ಆದರೆ ಕೆಲವು ತರಕಾರಿಗಳಿಗೆ ಫ್ರಿಜ್ ಆಗತ್ಯವಿಲ್ಲ. ಅವುಗಳು ಯಾವುದು ಅನ್ನೋದನ್ನು ನೋಡೋಣ. 
 

ಟೊಮೆಟೋ (Tomato) : 
ಟೋಮೆಟೋವನ್ನು ತಂಪಾದ ಅಥವಾ ಡ್ರೈ ಜಾಗದಲ್ಲಿ ಅಂದರೆ ರೂಮ್ ಟೆಂಪ್ರೇಚರ್ ನಲ್ಲಿ ಇಡೋದರಿಂದ ಅದರ ರುಚಿ ಮತ್ತು ಗಾತ್ರ ಹಾಗೇ ಉಳಿದುಕೊಳ್ಳುತ್ತವೆ. ಆದರೆ ಅದನ್ನು ರೆಫ್ರಿಜರೇಟರ್ ನಲ್ಲಿ ಇಡೋದರಿಂದ ರುಚಿಯೂ ಕೆಡುತ್ತದೆ, ಅವು ಒಣಗುವ ಸಾಧ್ಯತೆ ಕೂಡ ಇದೆ. ಹಾಗಾಗಿ ಅದನ್ನು ಫ್ರಿಜ್ ನಲ್ಲಿಡಬೇಡಿ. 

Tap to resize

ಸಿಟ್ರಸ್ ಹಣ್ಣುಗಳು (citrus fruits)
ಮೂಸಂಬಿ, ಕಿತ್ತಳೆ, ನಿಂಬೆಯಂತಹ ಸಿಟ್ರಸ್ ಹಣ್ಣುಗಳನ್ನು ಫ್ರಿಜ್ ನಲ್ಲಿ ಇಡೋದರಿಂದ ಅವುಗಳ ರುಚಿ ಹಾಳಾಗೋದರ ಜೊತೆಗೆ ಅವು ಒಣಗಿ ಹೋಗುತ್ತವೆ. ರೂಮ್ ಟೆಂಪ್ರೇಚರ್ ನಲ್ಲಿ ಅವುಗಳನ್ನು ಇಟ್ಟರೆ, ಅವುಗಳು ರಸಭರಿತವಾಗಿರುತ್ತೆ. 

ಈರುಳ್ಳಿ ಮತ್ತು ಬೆಳ್ಳುಳ್ಳಿ (Onion and Garlic)
ಈರುಳ್ಳಿ ಮತ್ತು ಬೆಳ್ಳುಳ್ಳಿ ಇವೆರಡೂ ಯಾವಾಗಲೂ ಹೊರಗಿನ ವಾತಾವರಣದಲ್ಲಿ ಇದ್ದರೆ ಉತ್ತಮ. ಇವುಗಳನ್ನು ಫ್ರಿಜ್ ನಲ್ಲಿ ಇಡೋದರಿಂದ ಅವು ಬೇಗನೆ ಮೊಳಕೆಯೊಡಯುತ್ತವೆ, ಇಲ್ಲವೆ, ಮೆತ್ತಗಾಗಿ ಹೋಗುತ್ತವೆ. ಅದೇ ರೀತಿ ಈರುಳ್ಳಿಯನ್ನು ಆಲೂಗಡ್ಡೆ ಜೊತೆ ಇಟ್ಟರೂ ಅದು ಹಾಳಾಗುತ್ತದೆ.

ಬಾಳೆಹಣ್ಣು (Banana)
ಬಾಳೆಹಣ್ಣನ್ನು ರೆಫ್ರಿಜರೇಟ‌ರ್‌ನಲ್ಲಿ ಇಡೋದರಿಂದ ಅವು ಬೇಗ ಹಣ್ಣಾಗುವ ಸಾಧ್ಯತೆ ಇದೆ. ಇದರಿಂದ ಅವು ತಿನ್ನಲು ಯೋಗ್ಯವಲ್ಲದಂತಾಗುತ್ತೆ. ಅದರ ಬದಲು ಅವುಗಳನ್ನು ರೂಮ್ ಟೆಂಪ್ರೇಚರ್ ನಲ್ಲಿಡಿ. 

ಕ್ಯಾಪ್ಸಿಕಂ (Capsicum)
ಇವುಗಳನ್ನು ಯಾವಾಗಲೂ ಹೊರಗಡೆ ಇಟ್ಟರೆ ಮಾತ್ರ ಅವುಗಳ ರುಚಿ ಮತ್ತು ಆಕಾರ ಸರಿಯಾಗಿಯೇ ಇರುತ್ತದೆ. ಫ್ರಿಜ್ ನಲ್ಲಿಟ್ಟರೆ, ಅವುಗಳ ರುಚಿ ನಶಿಸಿ ಹೋಗುತ್ತೆ, ಜೊತೆಗೆ, ಬೇಗನೆ ಒಣಗುತ್ತವೆ. 

ಹಣ್ಣುಗಳು (Fruits)
ಪಪ್ಪಾಯಿ, ಮಾವಿನಹಣ್ಣು, ಅನಾನಸು (Pineapple), ಕಿವಿ (Kiwi) ಮೊದಲಾದ ಹಣ್ಣುಗಳನ್ನು ಹೆಚ್ಚು ಸಮಯ ಫ್ರಿಜ್ ನಲ್ಲಿ ಇಡಲೇಬಾರದು, ಅವುಗಳನ್ನು ತಂದ ಮರುದಿನದೊಳಗೆ ತಿಂದು ಮುಗಿಸೋದು ಉತ್ತಮ. ಹಾಗೆ ಫ್ರಿಜ್ ನಲ್ಲಿಟ್ಟರೆ ರುಚಿ ಕೆಟ್ಟು ಹೋಗುತ್ತೆ. 

ಆಲೂಗಡ್ಡೆ (Potato)
ಆಲೂಗಡ್ಡೆ, ಗೆಣಸು ಇವುಗಳನ್ನು ಫ್ರಿಜ್ ನಲ್ಲಿ ಇಡಲೇಬಾರದು, ಅವುಗಳನ್ನು ಕೋಣೆಯಲ್ಲಿ, ಡಾರ್ಕ್ ಆಗಿರುವ ಸ್ಥಳದಲ್ಲಿ ಅಥವಾ ಪೇಪರ್ ಬ್ಯಾಗ್ ನಲ್ಲಿ ಹಾಕಿ ಇಡುವುದು ಉತ್ತಮ. 

Latest Videos

click me!