ಅತಿ ಉದ್ದದ ದೋಸೆ ಮಾಡಿ ಗಿನ್ನೆಸ್ ದಾಖಲೆ ಬರೆದ ಎಂಟಿಆರ್!

First Published Mar 19, 2024, 11:06 AM IST

MTR ಫುಡ್ಸ್ ತನ್ನ 100 ವರ್ಷಗಳ ಪ್ರಯಾಣವನ್ನು ಆಚರಿಸುವ ಸಲುವಾಗಿ 123 ಅಡಿ ಉದ್ದದ ದೋಸೆಯನ್ನು ಬೆಂಗಳೂರಿನ ಬೊಮ್ಮಸಂದ್ರದಲ್ಲಿ ತಯಾರಿಸಿ, ಗಿನ್ನೆಸ್ ವಿಶ್ವ ದಾಖಲೆ ಬರೆಯಿತು. 

ಎಂಟಿಆರ್ ಎಂಬುದು ಬೆಂಗಳೂರಿನ ಹೆಗ್ಗುರುತುಗಳಲ್ಲೊಂದು. ಇದೀಗ ಈ ರೆಸ್ಟೋರೆಂಟ್‌ಗೆ 100 ವರ್ಷಗಳಾದ ಹಿನ್ನೆಲೆಯಲ್ಲಿ ಹೊಸ ಸಾಹಸ ಮಾಡಿದೆ. 

ಬೊಮ್ಮನಸಂದ್ರದಲ್ಲಿ ಶತಮಾನೋತ್ಸವದ ಅಂಗವಾಗಿ ಲೋರ್ಮನ್ ಕಿಚನ್ ಎಕ್ವಿಪ್‌ಮೆಂಟ್ ಸಹಭಾಗಿತ್ವದಲ್ಲಿ ಎಂಟಿಆರ್ ಫುಡ್ಸ್‌ನ 75 ಬಾಣಸಿಗರ ತಂಡವು 123 ಅಡಿ ಉದ್ದದ ದೋಸೆ ತಯಾರಿಸಿದೆ. 

110 ವಿಫಲ ಪ್ರಯತ್ನಗಳ ನಂತರ, ತಂಡವು ಕೆಂಪು ಅಕ್ಕಿ ಹಿಟ್ಟಿನೊಂದಿಗೆ 123 ಅಡಿ ಉದ್ದದ ದೋಸೆಯನ್ನು ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಸಾಧಿಸಿದೆ. 

ಪ್ರಯತ್ನ ಯಶಸ್ವಿಯಾಗುತ್ತಿದ್ದಂತೆ ಸಂಭ್ರಮಾಚರಣೆಯಲ್ಲಿ ತೊಡಗಿದ ಬಾಣಸಿಗರು ಸ್ಥಳೀಯ ಶಾಲೆಗಳು ಮತ್ತು ಎಂಟಿಆರ್ ಉದ್ಯೋಗಿಗಳಿಗೆ ದೋಸೆ ವಿತರಿಸಿದರು. 

ಎಂಟಿಆರ್‌ನ ಕ್ಯುಸಿನ್ ಸೆಂಟರ್ ಆಫ್ ಎಕ್ಸಲೆನ್ಸ್‌ನ ಮಾರ್ಗದರ್ಶನದಲ್ಲಿ ಅನುಭವಿ ತಜ್ಞರು ಮತ್ತು ಉದಯೋನ್ಮುಖ ಪಾಕಶಾಲೆಯ ಅಭಿಮಾನಿಗಳನ್ನು ಒಳಗೊಂಡಿರುವ 75 ಬಾಣಸಿಗರ ತಂಡವು ಈ ದಾಖಲೆಯನ್ನು ರಚಿಸಿದೆ.

ಇದರೊಂದಿಗೆ ಎಂಟಿಆರ್ 54 ಅಡಿ ಉದ್ದದ ದೋಸೆಯ ಹಿಂದಿನ ವಿಶ್ವ ದಾಖಲೆಯನ್ನು ಮುರಿದಿದೆ. ಈ ಮೇರುಕೃತಿಯು ಯಶಸ್ವಿಯಾಗಿ ತಯಾರಾಗುತ್ತಿದ್ದಂತೆ ಬಾಣಸಿಗರು ಸಂಭ್ರಮಾಚರಿಸಿದರು. 
 

ವಿಶ್ವದ ಅತಿ ಉದ್ದದ ದೋಸೆಯನ್ನು ವಿಶೇಷವಾಗಿ ನಿರ್ಮಿಸಲಾದ ಇಂಡಕ್ಷನ್ ಸ್ಟೌವ್‌ನಲ್ಲಿ ತಯಾರಿಸಲಾಯಿತು, ಇದು ಬೆಂಗಳೂರು ಮೂಲದ ಲೋರ್ಮನ್ ಕಿಚನ್ ಎಕ್ವಿಪ್‌ಮೆಂಟ್ ಪ್ರೈ.ಲಿ. ತಯಾರಿಸಿದ್ದು. 

click me!