ಸಂಜೆಯ ಸಮಯದಲ್ಲಿ ಅನೇಕ ಜನರಿಗೆ ತಿಂಡಿಗಳನ್ನು (ಸ್ನ್ಯಾಕ್ಸ್) ತಿನ್ನುವ ಅಭ್ಯಾಸವಿರುತ್ತದೆ. ಒಂದು ಕಪ್ ಟೀ ಜೊತೆಗೆ ಏನಾದರೂ ಇಲ್ಲದಿದ್ದರೆ ಆ ಸಂಜೆ ಕಳೆಯುವುದಿಲ್ಲ. ಹೀಗೆ ಹೆಚ್ಚಿನ ಇಂಡಿಯನ್ನರು ಸೇವಿಸುವ ಸ್ನ್ಯಾಕ್ಸ್ ಸಮೋಸಾ. ತಂಪಾದ ವಾತಾವರಣದಲ್ಲಿ ಬಿಸಿಬಿಸಿ ಸಮೋಸಾಗಳನ್ನು ತಿನ್ನಲು ಯಾರು ಇಷ್ಟಪಡೋದಿಲ್ಲ ಹೇಳಿ..
28
ಫುಡ್ ಪ್ರಿಯರಿಗೆ ಸಮೋಸಾ ಪಂಚಪ್ರಾಣ. ಊಟ ಮಾಡದಿದ್ದರೂ ಸಮೋಸಾದಿಂದ ಹೊಟ್ಟೆ ತುಂಬಿಸಿಕೊಳ್ಳುವವರು ಬಹಳ ಮಂದಿ ಇರ್ತಾರೆ. ಅದಕ್ಕಾಗಿಯೇ ಸಮೋಸಾವನ್ನು ಸ್ನ್ಯಾಕ್ಸ್‌ಗಳ ರಾಜ ಎಂದು ಕರೆಯುವುದರಲ್ಲಿ ತಪ್ಪೇ ಇಲ್ಲ.
38
ಭಾರತದಲ್ಲಿ ಎಲ್ಲಿಗೆ ಹೋದರೂ ಸಮೋಸಾ ಸಿಗುತ್ತದೆ. ತಯಾರಿಸುವ ವಿಧಾನದಲ್ಲಿ, ರುಚಿಯಲ್ಲಿ ವ್ಯತ್ಯಾಸವಿರಬಹುದು... ಆದರೆ ಎಲ್ಲೆಡೆ ಅದರ ಹೆಸರು ಸಮೋಸಾ. ತೆಲುಗು, ಕನ್ನಡ, ತಮಿಳು, ಹಿಂದಿ, ಉರ್ದು... ಎಲ್ಲಾ ಭಾಷೆಗಳಲ್ಲೂ ಅದನ್ನು ಸಮೋಸಾ ಎಂದೇ ಕರೆಯುತ್ತಾರೆ.
48
ನಮ್ಮ ದೇಶದಲ್ಲಿ ಮಾತ್ರವಲ್ಲದೆ ಅನೇಕ ದೇಶಗಳಲ್ಲಿ ಸಮೋಸಾ ಲಭ್ಯವಿದೆ. ಆ ದೇಶಗಳಲ್ಲೂ ಇದು ರುಚಿಕರವಾದ ಆಹಾರವಾಗಿ ಜನಪ್ರಿಯತೆಯನ್ನು ಗಳಿಸಿದೆ, ಹೀಗಾಗಿ ವೀದೇಶಗಳಲ್ಲಿರುವ ಭಾರತೀಯರು ಸಮೋಸಾ ರುಚಿಯನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಅಂದರೆ ಸಮೋಸಾ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸ್ನ್ಯಾಕ್ಸ್.
58
ಅಚ್ಚರಿಯ ಸಂಗತಿಯೆಂದರೆ ಅನೇಕ ಜನರು ಸಮೋಸಾ ಭಾರತೀಯ ಖಾದ್ಯ ಎಂದು ಭಾವಿಸುತ್ತಾರೆ. ಆದರೆ ಸಮೋಸಾ ಮೂಲತಃ ಇರಾನಿನ ಖಾದ್ಯ. ಅಲ್ಲಿ ಸಮೋಸಾವನ್ನು ಸಾಂಬೋಸಾ ಎಂದು ಕರೆಯುತ್ತಾರೆ. ಮೊಘಲರ ಮೂಲಕ ಈ ಆಹಾರವು ಭಾರತಕ್ಕೆ ಬಂದಿತು ಎನ್ನಲಾಗುತ್ತದೆ.
68
ಪ್ರಸ್ತುತ ಸಮೋಸಾದಲ್ಲಿ ಆಲೂಗಡ್ಡೆಯೊಂದಿಗೆ ಕಡಲೇಕಾಯಿ ಕೂಡ ಕಾಣಿಸಿಕೊಳ್ಳುತ್ತದೆ. ಹಿಂದೆ ಸಮೋಸಾದಲ್ಲಿ ಮಾಂಸ ಕೀಮಾ ತುಂಬಿಸುತ್ತಿದ್ದರು. ಕಾಲಾನಂತರದಲ್ಲಿ ತಯಾರಿಕೆಯ ವಿಧಾನದಲ್ಲಿ ಬದಲಾವಣೆಗಳಾಗಿವೆ.
78
ರುಚಿಕರವಾದ ಆಹಾರವಾಗಿ ಸಮೋಸಾ ಎಷ್ಟು ಜನಪ್ರಿಯವಾಗಿದೆಯೆಂದರೆ, ಸಮೋಸಾಗಾಗಿ ದಿನವೊಂದನ್ನೂ ಮೀಸಲಿಡಲಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ವಿಶ್ವ ಸಮೋಸಾ ದಿನವನ್ನು ಆಚರಿಸಲಾಗುತ್ತದೆ.
88
ಎಲ್ಲಾ ಭಾರತೀಯ ಭಾಷೆಗಳಲ್ಲಿ ಸಮೋಸಾ ಎಂದು ಕರೆಯಲ್ಪಡುವ ಮತ್ತು ಎಲ್ಲರಿಗೂ ಇಷ್ಟವಾದ ಈ ಆಹಾರವನ್ನು ಇಂಗ್ಲಿಷ್‌ನಲ್ಲಿ ಏನೆಂದು ಕರೆಯುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಮ್ಮ ದೇಶದಲ್ಲಿ ಬಹಳ ಜನಪ್ರಿಯವಾಗಿರುವ ರುಚಿಕರವಾದ ಆಹಾರವಾದ ಸಮೋಸಾವನ್ನು ಇಂಗ್ಲಿಷ್‌ನಲ್ಲಿ ರಿಸ್ಸೋಲ್ ಎಂದು ಕರೆಯುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.