ಬಿಸಿ ನೀರಲ್ಲಿ ಜೇನುತುಪ್ಪ ಸೇರಿಸಿ ಕುಡಿಯೋದು ನಿಜವಾಗ್ಲೂ ಒಳ್ಳೇದಾ?

First Published | Aug 20, 2024, 1:35 PM IST

ಗ್ಯಾಸ್ಟ್ರಿಕ್ ಹೋಗಬೇಕು, ತೆಳ್ಳಗೆ ಆಗಬೇಕು, ಮಲಬದ್ಧತೆ ಹೋಗಬೇಕು ಅಂತ ಅದೂ ಇದು ಅಂತ ನೂರಾರು ಮದ್ದುಗಳನ್ನು ಮಾಡುತ್ತಾರೆ. ಇವೆಲ್ಲ ಎಲ್ಲರಿಗೂ ಎಲ್ಲವೂ ವರ್ಕ್ ಔಟ್ ಆಗುತ್ತೆ ಅಂತ ಹೇಳುವುದು ಕಷ್ಟ. ಕೆಲವೊಂದು ಕೆಲವರ ದೇಹ ಸ್ಥತಿಗೆ ಮಾತ್ರ ಒಗ್ಗುವುದು. ಹಾಗಾದರೆ ಬಿಸಿ ಬಿಸಿ ನೀರಿಗೆ ಜೇನು ತುಪ್ಪ ಹಾಕ್ಕೊಂಡ ಕುಡಿಯೋದು ಆರೋಗ್ಯಕ್ಕೆ ಒಳ್ಳೇದಾ? ಈ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?
 

ತೂಕ ಇಳಿಸಿಕೊಳ್ಳಲು ಹಲವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಬಿಸಿ ನೀರಲ್ಲಿ ಜೇನುತುಪ್ಪ ಬೆರೆಸಿ ಕುಡಿಯುತ್ತಾರೆ. ಇದರಿಂದ ಹಲವು ಲಾಭಗಳಿವೆ ಎನ್ನಲಾಗುತ್ತದೆ. ಆದರೆ ಈ ನೀರನ್ನು ಕುಡಿಯುವವರು ಬಹಳ ಜಾಗ್ರತೆಯಿಂದ ಇರಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ನೀರಿನ ಬಗ್ಗೆ ಆಯುರ್ವೇದ ಏನು ಹೇಳುತ್ತದೆ?

ಆಯುರ್ವೇದದ ಪ್ರಕಾರ.. ಜೇನುತುಪ್ಪವನ್ನು ಬಿಸಿ ನೀರಲ್ಲಿ ಬೆರೆಸುವುದು ಅಥವಾ ಬಿಸಿ ಮಾಡಿ ಸೇವಿಸುವುದರಿಂದ ಅದು ನಿಧಾನವಾಗಿ  ವಿಷದಂತೆ ಕೆಲಸ ಮಾಡುತ್ತದೆ. ಈ ನೀರು ಕುಡಿದರೆ ನಮ್ಮ ದೇಹದಲ್ಲಿ ಕಫ ಆಗೋ ಸಾಧ್ಯತೆಯೂ ಹೆಚ್ಚು. ಇದರಿಂದ ನಿಮಗೆ ಹಲವು ಕಾಯಿಲೆಗಳು ಬರುತ್ತವೆ.
 

Tap to resize

ಪೋಷಕಾಂಶಗಳು ಕಡಿಮೆಯಾಗುತ್ತವೆ. ಕಚ್ಚಾ ಜೇನು ತುಪ್ಪ ಜೀವಸತ್ವಗಳು, ಖನಿಜ, ಕಿಣ್ವಗಳು, ಆ್ಯಂಟಿಆಕ್ಸಿಡೆಂಟ್‌ಗಳು, ಅಮೈನೋ ಆಮ್ಲಗಳು, ಫ್ಲೇವನಾಯ್ಡ್‌ಗಳು ಸೇರಿ ಹಲವು ಪೋಷಕಾಂಶಗಳನ್ನು ಹೊಂದಿರುತ್ತದೆ. ಆದರೆ ನೀವು ಜೇನುತುಪ್ಪವನ್ನು ಬಿಸಿ ಪದಾರ್ಥಗಳೊಂದಿಗೆ ಬೆರೆಸಿದರೆ ಅದರಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತವೆ.

ಅಧ್ಯಯನ ಏನು ಹೇಳುತ್ತದೆ? ನ್ಯಾಷನಲ್ ಸೆಂಟರ್ ಆಫ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ ವರದಿ ಪ್ರಕಾರ.. ಜೇನುತುಪ್ಪವನ್ನು 60 ರಿಂದ 140 ಡಿಗ್ರಿ ಸೆಲ್ಸಿಯಸ್‌ವರೆಗೆ ಬಿಸಿ ಮಾಡಿದರೆ ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಅಪಾಯ. ಅಷ್ಟೇ ಅಲ್ಲ, ಜೇನುತುಪ್ಪವನ್ನು 60 ಡಿಗ್ರಿ ಮತ್ತು 140 ಡಿಗ್ರಿ ಸೆಲ್ಸಿಯಸ್‌ಗೆ ಬಿಸಿ ಮಾಡಿದಾಗ, ಅದರ ಮಾದರಿ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾದ ಹೈಡ್ರಾಕ್ಸಿಮೀಥೈಲ್‌ಫರ್‌ಫ್ಯೂರಲ್ಡಿಹೈಡ್ ಎಂಬ ಹೆಚ್ಚಿನ ಸಂಯುಕ್ತಗಳನ್ನು ಹೊಂದಿರುವುದು ಅಧ್ಯಯನದಲ್ಲಿ ಕಂಡುಬಂದಿದೆ.
 

ಜೇನುತುಪ್ಪವನ್ನು ಏಕೆ ಬಿಸಿ ಮಾಡಬಾರದು? ತುಪ್ಪ, ಜೇನುತುಪ್ಪ ತುಪ್ಪ, ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಸೇವಿಸುವುದರಿಂದ ಕ್ಲೋಸ್ಟ್ರಿಡಿಯಮ್ ಬೋಟುಲಿನಮ್ ಎಂಬ ವಸ್ತು ದೇಹದಲ್ಲಿ ವೇಗವಾಗಿ ಹರಡುತ್ತದೆ. ಇದರಿಂದಾಗಿ ವ್ಯಕ್ತಿಗೆ ಉಸಿರಾಟದ ತೊಂದರೆ ಉಂಟಾಗುತ್ತದೆ. ಹಾಗೆಯೇ ಹೊಟ್ಟೆ ನೋವೂ ಕಾಡುತ್ತದೆ.
 

ಜೇನುತುಪ್ಪವನ್ನು ಹೇಗೆ ಬಳಸಿದರೆ ಒಳ್ಳೇಯದು? ಆಯುರ್ವೇದದ ಪ್ರಕಾರ ಕಚ್ಚಾ ಜೇನುತುಪ್ಪವನ್ನು ಎಂದಿಗೂ ಬಳಸಬಾರದು. ಏಕೆಂದರೆ ಈ ಜೇನುತುಪ್ಪದಲ್ಲಿರುವ ಬ್ಯಾಕ್ಟೀರಿಯಾದಿಂದ ಸೋಂಕು ತಗಲಬಹುದು. ಸಾಮಾನ್ಯವಾಗಿ ಅಂಗಡಿಗಳಲ್ಲಿ ಮಾರುವ  ಜೇನುತುಪ್ಪವನ್ನು ಪಾಶ್ಚರೈಸ್ ಮಾಡಲಾಗುತ್ತದೆ. ಇದು ಒಳ್ಳೇಯದು. ಉಗುರು ಬೆಚ್ಚಗಿನ ನೀರಲ್ಲಿ ಜೇನುತುಪ್ಪ ಬೆರೆಸಿ ಕುಡಿಯಬಹುದು. ಸಾಮಾನ್ಯವಾಗಿ 70 ಕೆಜಿ ತೂಕದ ವ್ಯಕ್ತಿ ದಿನಕ್ಕೆ 30 ರಿಂದ 45 ಗ್ರಾಂ ಜೇನುತುಪ್ಪವನ್ನು ಮಾತ್ರ ಸೇವಿಸಬೇಕು. ಅರ್ಥಮಾಡಿಕೊಳ್ಳಲು ಸುಲಭವಾಗಿ ಹೇಳುವುದಾದರೆ, ಪ್ರತಿದಿನ ಒಂದು ಟೀ ಚಮಚ ಜೇನುತುಪ್ಪವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.

Latest Videos

click me!