ಹಾಗಲಕಾಯಿ ಜೊತೆ ಎಂದಿಗೂ ಈ ಆರು ಆಹಾರ ಸೇವಿಸಬೇಡಿ, ಇದು ವಿಷಕ್ಕ ಸಮ!

First Published | Aug 19, 2024, 7:32 PM IST

Bitter Gourd : ಹಾಗಲಕಾಯಿಯಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಆದಾಗ್ಯೂ, ಇದನ್ನು ಕೆಲವು ಆಹಾರಗಳೊಂದಿಗೆ ಸೇವಿಸಬಾರದು. ಆ ಆರು ಆಹಾರಗಳು ಯಾವವು ಎಂಬುದರ ಮಾಹಿತಿ ಇಲ್ಲಿದೆ.

ತುಂಬಾ ಜನರು ಇಷ್ಟಪಡದ ಆಹಾರ ಅಂದ್ರೆ ಅದು ಹಾಗಲಕಾಯಿ, ಕಾರಣ ಇದು ಕಹಿ ಆಗಿರುತ್ತದೆ. ಆದ್ರೆ ಹಾಗಲಕಾಯಿ ಸೇವನೆ ಆರೋಗ್ಯಕ್ಕೆ ಹಲವು ಲಾಭಗಳನ್ನು ಒದಗಿಸುತ್ತದೆ. 

ಮಧುಮೇಹಿಗಳಿಗೆ ಹಾಗಲಕಾಯಿ ಒಳ್ಳೆಯ ಔಷಧಿ ಎಂದು ಹೇಳಬಹುದು. ಹಲವಾರು ಪ್ರಯೋಜನಗಳಿಂದ ಕೂಡಿದ ಹಾಗಲಕಾಯಿಯನ್ನು ಕೆಲವು ಆಹಾರಗಳೊಂದಿಗೆ ತಿನ್ನಬಾರದು. ಆ ಆಹಾರಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ.

Tap to resize

ಹಾಲು: ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಹಾಗಲಕಾಯಿ ತಿನ್ನುವ ಒಂದು ಗಂಟೆ ಮೊದಲು ಮತ್ತು ನಂತರ ಹಾಲು ಕುಡಿಯಬಾರದು. ಇಲ್ಲವಾದ್ರೆ ಮಲಬದ್ಧತೆ, ಹೊಟ್ಟೆ ನೋವು ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.

ಮೊಸರು: ಹಾಗಲಕಾಯಿ ಮತ್ತು ಮೊಸರನ್ನು ಒಟ್ಟಿಗೆ ತಿಂದರೆ ಚರ್ಮದ ಸಮಸ್ಯೆ ಉಂಟಾಗುತ್ತದೆ. ಈ ಕಾರಣದಿಂದಾಗಿ ಚರ್ಮದ ದದ್ದುಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. 

ಬಾಳೆಹಣ್ಣು, ಮಾವು: ಹಾಗಲಕಾಯಿ ಜೊತೆಗೆ ಬಾಳೆಹಣ್ಣು ಮತ್ತು ಮಾವಿನಕಾಯಿಯನ್ನು ತಿನ್ನಬಾರದು. ಮಾವು ದೇಹದ ಉಷ್ಣತೆಯನ್ನು ಹೆಚ್ಚಿಸುವ ಗುಣವನ್ನು ಹೊಂದಿರುತ್ತದೆ. ಮಾವು ಜೊತೆ ಹಾಗಲಕಾಯಿ ತಿಂದ್ರೆ ಹೊಟ್ಟೆನೋವು, ಭೇದಿ, ಮಲಬದ್ಧತೆಯಂತಹ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಜೀರ್ಣಕ್ರಿಯೆ ಸಮಸ್ಯೆ ಇರುವವರು ತಿನ್ನಲೇಬಾರದು.

ಮಾಂಸ: ಚಿಕನ್, ಮಟನ್ ಮುಂತಾದ ಮಾಂಸವನ್ನು ತಿನ್ನುವಾಗ ಹಾಗಲಕಾಯಿ ಆಹಾರ ಸೇವಿಸಬಾರದು. ಇವೆರಡೂ ಸೇರಿದಾಗ ಆಹಾರದ ರುಚಿ ಕೆಡುವುದಲ್ಲದೆ, ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.

ಬೆಂಡೆಕಾಯಿ: ಬೆಂಡೆಕಾಯಿ ಮತ್ತು ಹಾಗಲಕಾಯಿಯನ್ನು ಒಟ್ಟಿಗೆ ತಿನ್ನಬಾರದು. ಇವೆರಡನ್ನು ಒಟ್ಟಿಗೆ ತಿನ್ನುವುದರಿಂದ ಅಜೀರ್ಣತೆ ಉಂಟಾಗುತ್ತದೆ. ಇದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.

ಮೂಲಂಗಿ: ಮೂಲಂಗಿ ಮತ್ತು ಹಾಗಲಕಾಯಿಯನ್ನು ಒಟ್ಟಿಗೆ ತಿನ್ನಬಾರದು. ಜೊತೆಯಾಗಿ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ವಾಂತಿ, ತಲೆಸುತ್ತು, ವಾಕರಿಕೆ, ಆಲಸ್ಯ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

Latest Videos

click me!