ಪೋಷಕಾಂಶ ಸಿಗುತ್ತೆ ಅಂತ ಬೇಕಾಬಿಟ್ಟಿ ಬೇಳೆ, ಕಾಳು ತಿನ್ನೋರೇ ಇಲ್ ಓದಿ!

First Published | Sep 12, 2023, 12:41 PM IST

ಬೇಳೆಕಾಳುಗಳನ್ನು ತಿನ್ನೋದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ ಇದನ್ನು ನಿಯಮಿತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅದರಿಂದ ತೊಂದರೆ ಅನುಭವಿಸಬೇಕಾಗಿ ಬರುತ್ತೆ, ಇದು ನೆನಪಿರಲಿ. 
 

ಸಸ್ಯಾಹಾರಿಗಳಿಗೆ ಉತ್ತಮ ಪ್ರೋಟೀನ್ ಮೂಲ ಯಾವುದು ಎಂದು ಕೇಳಿದಾಗ, ಜನರು ಖಂಡಿತವಾಗಿಯೂ ಅದರಲ್ಲಿ ಬೇಳೆ ಕಾಳುಗಳ (lentils) ಹೆಸರು ಹೇಳುತ್ತಾರೆ. ನಾವೆಲ್ಲರೂ ಬೇಳೆಕಾಳುಗಳನ್ನು ಊಟದ ಒಂದು ಭಾಗವಾಗಿ ಸೇರಿಸಲು ಇಷ್ಟಪಡ್ತೀವಿ.ಅದರ ಸೇವನೆಯಿಂದ ಅನೇಕ ಪ್ರಯೋಜನಗಳಿವೆ. ಉದಾಹರಣೆಗೆ, ಅವು ವಿಟಮಿನ್ ಬಿ, ಫೋಲೇಟ್, ಕಬ್ಬಿಣ ಮತ್ತು ಪೊಟ್ಯಾಷಿಯಮ್ ಉತ್ತಮ ಮೂಲ. ಅದೇ ಸಮಯದಲ್ಲಿ, ಪ್ರೋಟೀನ್ ಮತ್ತು ಫೈಬರ್ (fiber) ಸಹ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಹಾಗಾಗಿ, ಇದನ್ನು ಸೇವಿಸುವ ಮೂಲಕ ನೀವು ನಿಮ್ಮ ಆರೋಗ್ಯವನ್ನು ಕಾಪಾಡಬಹುದು.

ಬೇಳೆಯನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಿದ್ರೆ ಆರೋಗ್ಯ ಉತ್ತಮ ನಿಜಾ. ಆದರೆ ನೀವು ಅದನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಲು ಪ್ರಾರಂಭಿಸಿದಾಗ, ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದು ನೀವು ಅನೇಕ ರೀತಿಯ ಸಮಸ್ಯೆಗಳನ್ನು ಅನುಭವಿಸಲು ಕಾರಣವಾಗಬಹುದು. ಅಗತ್ಯಕ್ಕಿಂತ ಹೆಚ್ಚಾಗಿ ಬೇಳೆ ಸೇವಿಸಿದ್ರೆ ಏನೇನು ಆಗುತ್ತೆ ಅನ್ನೋದನ್ನು ನೋಡೋಣ. 
 

Tap to resize

ಜೀರ್ಣಾಂಗ ವ್ಯವಸ್ಥೆ ಬೀರುತ್ತೆ ಪರಿಣಾಮ
ನೀವು ಅಗತ್ಯಕ್ಕಿಂತ ಹೆಚ್ಚು ಬೇಳೆ ಸೇವಿಸಿದಾಗ, ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು (digestive system) ತೊಂದರೆಗೊಳಿಸುತ್ತದೆ. ತೊಗರಿ ಬೇಳೆಯಲ್ಲಿ ಫೈಬರ್ ಪ್ರಮಾಣ ಹೆಚ್ಚಾಗಿರುತ್ತೆ ಮತ್ತು ಅವುಗಳನ್ನು ಅತಿಯಾಗಿ ಸೇವಿಸಿದಾಗ, ದೇಹಕ್ಕೆ ಅದನ್ನು ಜೀರ್ಣಿಸಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಈ ಸ್ಥಿತಿಯಲ್ಲಿ, ಹೆಚ್ಚಿನ ಜನರು ಉಬ್ಬರ, ಗ್ಯಾಸ್, ಅತಿಸಾರ ಅಥವಾ ಹೊಟ್ಟೆ ಸೆಳೆತದ ಸಮಸ್ಯೆಗಳನ್ನು ಹೊಂದಿರಬಹುದು.

ಪೌಷ್ಠಿಕಾಂಶದ ಕೊರತೆ
ಬೆೇಳೆಕಾಳುಗಳು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೂ, ಅದನ್ನು ಅತಿಯಾಗಿ ಸೇವಿಸಿದರೆ, ನೀವು ಪೌಷ್ಠಿಕಾಂಶದ ಕೊರತೆ ಎದುರಿಸಬೇಕಾಗಬಹುದು. ಉದಾಹರಣೆಗೆ, ಇದು ಹೆಚ್ಚಿನ ಪ್ರಮಾಣದ ಪೊಟ್ಯಾಷಿಯಮ್ ಅನ್ನು ಹೊಂದಿರುತ್ತದೆ, ಇದು ದೇಹದಲ್ಲಿನ ಸೋಡಿಯಂ, ಪೊಟ್ಯಾಷಿಯಮ್ ಮತ್ತು ಎಲೆಕ್ಟ್ರೋಲೈಟ್ ಸಮತೋಲನವನ್ನು ಹಾಳುಮಾಡುತ್ತದೆ. ಅಂತೆಯೇ, ಬೇಳೆಕಾಳುಗಳು ಫೈಟೇಟ್‌ಗಳು ಎಂದು ಕರೆಯಲ್ಪಡುವ ಸಂಯುಕ್ತಗಳನ್ನು ಹೊಂದಿರುತ್ತವೆ, ಇದು ಕಬ್ಬಿಣ (Iron), ಸತು ಮತ್ತು ಕ್ಯಾಲ್ಸಿಯಂನಂತಹ (Calcium) ಖನಿಜಗಳನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತದೆ.
 

ತೂಕ ಹೆಚ್ಚಿಸುತ್ತವೆ  
ಕೆಲವು ಜನರು ತಮ್ಮ ತೂಕ ಇಳಿಸುವ ಆಹಾರದಲ್ಲಿ ಬೇಳೆಕಾಳುಗಳನ್ನು ಸೇರಿಸುತ್ತಾರೆ. ಆದರೆ ಅವುಗಳನ್ನು ಅತಿಯಾಗಿ ಸೇವಿಸಿದಾಗ, ಅದು ಕ್ರಮೇಣ ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ಇದು ಸಾಕಷ್ಟು ಪ್ರಮಾಣದ ಕಾರ್ಬೋಹೈಡ್ರೇಟ್ ಗಳು ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಆದ್ದರಿಂದ, ಇದನ್ನು ಹೆಚ್ಚು ಸೇವಿಸಿದಾಗ ದೇಹದಲ್ಲಿ ಕ್ಯಾಲರಿ ಹೆಚ್ಚುತ್ತದೆ, ಅಲ್ಲದೇ ತೂಕವೂ ಹೆಚ್ಚುವ (weight gain) ಸಾಧ್ಯತೆ ಹೆಚ್ಚಿದೆ. 

ಮೂತ್ರಪಿಂಡದ ಸಮಸ್ಯೆ
ನೀವು ಅಗತ್ಯಕ್ಕಿಂತ ಹೆಚ್ಚು ಬೇಳೆಕಾಳುಗಳನ್ನು ಸೇವಿಸಿದಾಗ, ಅದು ನಿಮ್ಮ ಮೂತ್ರಪಿಂಡಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬೇಳೆಕಾಳುಗಳಲ್ಲಿ ಆಕ್ಸಲೇಟ್ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಆದ್ದರಿಂದ, ನೀವು ಅದನ್ನು ಹೆಚ್ಚು ಸೇವಿಸಿದಾಗ ಅದು ಮೂತ್ರಪಿಂಡದ ಕಲ್ಲಿನ ಸಮಸ್ಯೆಗಳಿಗೆ (kidney stone problems) ಕಾರಣವಾಗಬಹುದು. ಹೆಚ್ಚು ಬೇಳೆಕಾಳುಗಳನ್ನು ತಿನ್ನುವುದು ನಿಮ್ಮ ಪಿತ್ತಕೋಶ ಮತ್ತು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ.
 

Latest Videos

click me!