ಸಸ್ಯಾಹಾರಿ ಊಟದ ಬೆಲೆ ವರ್ಷದಿಂದ ವರ್ಷಕ್ಕೆ 24% ಏರಿಕೆಯಾಗಿದೆ. ಇನ್ನೊಂದೆಡೆ, ಮಾಂಸಾಹಾರಿ ಥಾಲಿಯ ಬೆಲೆ ಆಗಸ್ಟ್‌ನಲ್ಲಿ 13% ರಷ್ಟು ಏರಿಕೆಯಾಗಿದೆ ಎಂದು ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸ್ ಮತ್ತು ಅನಾಲಿಟಿಕ್ಸ್ ಆಹಾರ ಪ್ಲೇಟ್ ವೆಚ್ಚಗಳ ಮಾಸಿಕ ವರದಿಯಲ್ಲಿ ತಿಳಿಸಿದೆ.
ಸಸ್ಯಾಹಾರಿ ಥಾಲಿ ಬೆಲೆಯಲ್ಲಿನ 24% ಹೆಚ್ಚಳಕ್ಕೆ ಟೊಮ್ಯಾಟೋ ಬೆಲೆಗಳು ಕಾರಣವೆಂದು ಹೇಳಲಾಗಿದೆ. ಇದು ಆಗಸ್ಟ್‌ನಲ್ಲಿ ಸುಮಾರು ಮೂರು ಪಟ್ಟು ಹೆಚ್ಚಾಯಿತು ಮತ್ತು ಪ್ರತಿ ಕಿಲೋಗ್ರಾಂಗೆ (ಕೆಜಿ) 102 ರೂ. ತಲುಪಿದ್ದು, ಆದರೆ, ಆಗಸ್ಟ್ ಕೊನೆಯ ವಾರದಲ್ಲಿ ಆಹಾರ ವೆಚ್ಚದಲ್ಲಿನ ಹೆಚ್ಚಳದ ಪ್ರಮಾಣವು ಸಸ್ಯಾಹಾರಿಗಳಿಗೆ 10% ಮತ್ತು ಮಾಂಸಾಹಾರಿಗಳಿಗೆ 6% ನಷ್ಟು ಬೆಲೆ ಏರಿಕೆ ಕಡಿಮೆಯಾಗಿದೆ ಎಂದೂ ತಿಳಿದುಬಂದಿದೆ.
ಜುಲೈ 2023 ಕ್ಕೆ ಹೋಲಿಸಿದರೆ, ಮಾಂಸಾಹಾರಿ ಥಾಲಿ ಬೆಲೆಯಲ್ಲಿ 30 ಪೈಸೆ ಇಳಿಕೆಯಾಗಿದ್ದು, ಇದು ಆಗಸ್ಟ್‌ನಲ್ಲಿ 67.3 ರೂ. ನಷ್ಟಿತ್ತು, ಹಾಗೂ ಸಸ್ಯಾಹಾರಿ ಥಾಲಿಗಳು 20 ಪೈಸೆ ಅಗ್ಗವಾಗಿದ್ದು 33.8 ರೂ. ಗೆ ತಲುಪಿದೆ. ಟೊಮ್ಯಾಟೋ ಚಿಲ್ಲರೆ ಬೆಲೆಯು ತಿಂಗಳಿನಿಂದ ತಿಂಗಳಿಗೆ ಅರ್ಧದಷ್ಟು ಕಡಿಮೆಯಾಗಿ ಪ್ರತಿ ಕೆಜಿಗೆ ₹ 51 ಕ್ಕೆ ತಲುಪಿರುವುದರಿಂದ ಥಾಲಿ ವೆಚ್ಚವು ಸೆಪ್ಟೆಂಬರ್‌ನಲ್ಲಿ ಸ್ವಲ್ಪ ಕಡಿಮೆಯಾಗಬಹುದು. ಅಲ್ಲದೆ, ಆಗಸ್ಟ್‌ನಲ್ಲಿ ₹1,103 ಇದ್ದ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಸೆಪ್ಟೆಂಬರ್‌ನಿಂದ ಪ್ರತಿ ಸಿಲಿಂಡರ್‌ಗೆ ₹903 ಕ್ಕೆ ಇಳಿಸಲಾಗಿದೆ. ಇದು ಸಹ ಗ್ರಾಹಕರಿಗೆ ಪರಿಹಾರವಾಗಲಿದೆ,” ಎಂದು ಸಂಶೋಧನಾ ಸಂಸ್ಥೆ ಹೇಳಿದೆ.
ಆಗಸ್ಟ್‌ನಲ್ಲಿ ಈರುಳ್ಳಿ ಬೆಲೆಗಳು 8% ರಷ್ಟು ಏರಿಕೆ ಕಂಡಿದ್ದರೆ, ಮೆಣಸಿನಕಾಯಿ ಮತ್ತು ಜೀರಿಗೆ ಬೆಲೆಗಳು ಕ್ರಮವಾಗಿ ಹಿಂದಿನ ವರ್ಷಕ್ಕೆ ಹೋಲಿಸಿದರೆ 20% ಮತ್ತು 158% (ಅಥವಾ ಎರಡು ಪಟ್ಟು ಹೆಚ್ಚು) ಏರಿಕೆಯಾಗಿದೆ. ಸಸ್ಯಜನ್ಯ ಎಣ್ಣೆ ಬೆಲೆಯಲ್ಲಿ 17% ಇಳಿಕೆ ಮತ್ತು ಆಲೂಗಡ್ಡೆ ವೆಚ್ಚದಲ್ಲಿ 14% ಕುಸಿತವು ಇತರ ಪದಾರ್ಥಗಳ ಬೆಲೆಗಳ ಏರಿಕೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿತು.
ಮಾಂಸಾಹಾರಿ ಥಾಲಿ ವೆಚ್ಚವು ಸಸ್ಯಾಹಾರಿ ಥಾಲಿಗಳಿಗಿಂತ ಕಡಿಮೆ ವೇಗದಲ್ಲಿ ಏರಿಕೆಯಾಗಿದೆ. ಏಕೆಂದರೆ ವೆಚ್ಚದ ಅರ್ಧಕ್ಕಿಂತ ಹೆಚ್ಚು ಮಾಂಸದ ಬೆಲೆಗಳು ಕೇವಲ 1-3% ರಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.